ಬಜಾಜ್ ಡೊಮಿನರ್ 400 ಟೀಸರ್ ಚಿತ್ರ, ಮೈಕ್ರೋ ವೆಬ್ ಸೈಟ್ ಲೈವ್

ಬಹುನಿರೀಕ್ಷಿತ ಬಜಾಜ್ ಡೊಮಿನರ್ 400 ಬೈಕ್ ಡಿಸೆಂಬರ್ 15ರಂದು ಬಿಡುಗಡೆಯಾಗಲಿದ್ದು, ಇದರಂಗವಾಗಿ ಪ್ರಚಾರ ಕಾರ್ಯಗಳಿಗೆ ಬಜಾಜ್ ಚಾಲನೆ ನೀಡಿದೆ.

By Nagaraja

ನಿಮಗೆಲ್ಲರಿಗೂ ತಿಳಿದಿರುವಂತೆಯೇ ಬಹುನಿರೀಕ್ಷಿತ ಬಜಾಜ್ ಡೊಮಿನರ್ 400 ಬೈಕ್ ಮುಂಬರುವ 2016 ಡಿಸೆಂಬರ್ 15ರಂದು ಭಾರತದಲ್ಲಿ ಭರ್ಜರಿ ಬಿಡುಗಡೆ ಕಾಣಲಿದೆ. ಇದರಂಗವಾಗಿ ದೇಶದ ಮುಂಚೂಣಿಯ ದ್ವಿಚಕ್ರ ವಾಹನ ಸಂಸ್ಥೆ ಬಜಾಜ್ ಆಟೋ, ಮೈಕ್ರೋ ವೆಬ್ ಸೈಟ್ ಮತ್ತು ಆಕರ್ಷಕ ಟೀಸರ್ ಚಿತ್ರವನ್ನು ಬಿಡುಗಡೆಗೊಳಿಸಿದೆ.

ಬಜಾಜ್ ಡೊಮಿನರ್ 400 ಟೀಸರ್ ಚಿತ್ರ, ಮೈಕ್ರೋ ವೆಬ್ ಸೈಟ್ ಲೈವ್

'ಬಿಗ್ ಬೈಕ್ ಫಾರ್ ಬಿಗ್ ಬಾಯ್ಸ್' ಎಂಬ ಧ್ಯೇಯ ವಾಕ್ಯದೊಂದಿಗೆ ಬಜಾಜ್ ಡೊಮಿನರ್ 400 ರಸ್ತೆಗಿಳಿಯಲಿದೆ. ಅಲ್ಲದೆ ಯಾವತ್ತೂ ಬೈಕ್ ರೈಡಿಂಗ್ ಸಮಾನವಾಗಿರಲ್ಲ ಎಂಬುದನ್ನು ಉಲ್ಲೇಖಿಸಿದೆ.

ಬಜಾಜ್ ಡೊಮಿನರ್ 400 ಟೀಸರ್ ಚಿತ್ರ, ಮೈಕ್ರೋ ವೆಬ್ ಸೈಟ್ ಲೈವ್

ಇದೇ ಸಂದರ್ಭದಲ್ಲಿ ಡೊಮಿನರ್ 400 ಬೈಕ್ ಲಾಂಛನವನ್ನು ಚಿತ್ರದ ಮೂಲಕ ಸಂಸ್ಥೆಯು ಬಿಡುಗಡೆ ಮಾಡಿದೆ. ಇದು ಕೂಡಾ ಹೆಚ್ಚಿನ ನಿರೀಕ್ಷೆಯನ್ನುಂಟು ಮಾಡಿದೆ.

ಬಜಾಜ್ ಡೊಮಿನರ್ 400 ಟೀಸರ್ ಚಿತ್ರ, ಮೈಕ್ರೋ ವೆಬ್ ಸೈಟ್ ಲೈವ್

ಡಿಸೆಂಬರ್ 15 ರಂದು ಬಿಡುಗಡೆಯಾಗಲಿರುವ ಡೊಮಿನರ್ 400 ಬೈಕ್ ನ ಟೀಸರ್ ಚಿತ್ರವನ್ನು ಬಿಡುಗಡೆ ಮಾಡಲಾಗಿದೆ. ಇದೇ ಸಂದರ್ಭದಲ್ಲಿ ಮೈಕ್ರೋ ವೆಬ್ ಸೈಟ್ ಲಾಂಚ್ ಮಾಡಲಾಗಿದೆ.

ಬಜಾಜ್ ಡೊಮಿನರ್ 400 ಟೀಸರ್ ಚಿತ್ರ, ಮೈಕ್ರೋ ವೆಬ್ ಸೈಟ್ ಲೈವ್

ಅಂತೆಯೇ ಸಾಮಾಜಿಕ ಜಾಲತಾಣಗಳಾದ ಟ್ವಿಟರ್ ಮತ್ತು ಫೇಸ್ ಬುಕ್ ಗಳಲ್ಲಿ ಡೊಮಿನರ್ ವಿಶೇಷ ಪುಟವನ್ನು ತೆರೆದುಕೊಳ್ಳಲಾಗಿದ್ದು, ಈ ಬಹುನಿರೀಕ್ಷಿತ ಬೈಕ್ ಗೆ ಸಂಬಂಧಿಸಿದ ಮಾಹಿತಿಯನ್ನು ಕಲೆ ಹಾಕಬಹುದಾಗಿದೆ.

ಬಜಾಜ್ ಡೊಮಿನರ್ 400 ಟೀಸರ್ ಚಿತ್ರ, ಮೈಕ್ರೋ ವೆಬ್ ಸೈಟ್ ಲೈವ್

ದೇಶದ ನಂ.1 ಕ್ರೀಡಾ ಬೈಕ್ ತಯಾರಕರಾದ ಬಜಾಜ್ ದೇಶದಲ್ಲಿ ಬಿಡುಗಡೆ ಮಾಡುತ್ತಿರುವ ಅತ್ಯಂತ ಶಕ್ತಿಶಾಲಿ ಬೈಕ್ ಇದಾಗಿದೆ.

ಬಜಾಜ್ ಡೊಮಿನರ್ 400 ಟೀಸರ್ ಚಿತ್ರ, ಮೈಕ್ರೋ ವೆಬ್ ಸೈಟ್ ಲೈವ್

ಕೆಟಿಎಂಗೆ ಸಮಾನವಾದ 373 ಸಿಸಿ ಲಿಕ್ವಿಡ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಇದರಲ್ಲಿ ಬಳಕೆಯಾಗಲಿದ್ದು 35 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಬಜಾಜ್ ಡೊಮಿನರ್ 400 ಟೀಸರ್ ಚಿತ್ರ, ಮೈಕ್ರೋ ವೆಬ್ ಸೈಟ್ ಲೈವ್

ಇದೇ ಮೊದಲ ಬಾರಿಗೆ ಎಲ್ ಇಡಿ ಹೆಡ್ ಲ್ಯಾಂಪ್, ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ, ಸಂಪೂರ್ಣ ಡಿಜಿಟಲ್ ಹಾಗೂ ವಿಭಜಿತ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಬ್ಯಾಕ್-ಲಿಟ್ ಸ್ವಿಚ್ ಗೇರ್ ಹಾಗೂ ಮೊನೊಶಾಕ್ ಸಸ್ಪೆನ್ಷನ್ ಸೌಲಭ್ಯವೂ ಲಭ್ಯವಾಗಲಿದೆ.

ಬಜಾಜ್ ಡೊಮಿನರ್ 400 ಟೀಸರ್ ಚಿತ್ರ, ಮೈಕ್ರೋ ವೆಬ್ ಸೈಟ್ ಲೈವ್

ಕ್ರೂಸರ್ ಸ್ಪೋರ್ಟ್ ಮೋಟಾರ್ ಸೈಕಲ್ ಆಗಿರುವ ಬಜಾಜ್ ಡೊಮಿನರ್ 400, ಅತ್ಯುತ್ತಮ ನಿರ್ವಹಣೆ ಜೊತೆಗೆ ಟೂರಿಂಗ್ ಅನುಕೂಲಕತೆಯನ್ನು ಕಾಪಾಡಿಕೊಳ್ಳಲಿದೆ.

ಬಜಾಜ್ ಡೊಮಿನರ್ 400 ಟೀಸರ್ ಚಿತ್ರ, ಮೈಕ್ರೋ ವೆಬ್ ಸೈಟ್ ಲೈವ್

ಸ್ಪಾನಿಶ್ ಪದ ಡೊಮಿನರ್ ಎಂಬುದು ಮೀರಿಸು ಅಥವಾ ಉತ್ಕೃಷ್ಟ ಶಕ್ತಿಯ ಅರ್ಥವನ್ನು ನೀಡುತ್ತಿದೆ.

ಬಜಾಜ್ ಡೊಮಿನರ್ 400 ಟೀಸರ್ ಚಿತ್ರ, ಮೈಕ್ರೋ ವೆಬ್ ಸೈಟ್ ಲೈವ್

ಪುಣೆ ತಳಹದಿಯ ಜನಪ್ರಿಯ ಬಜಾಜ್ ನಿರ್ಮಿಸುತ್ತಿರುವ ನೂತನ ಡೊಮಿನರ್ ಎರಡು ಲಕ್ಷ ಬೆಲೆ ಪರಿಧಿಯಲ್ಲಿ ಬಿಡುಗಡೆಯಾಗುತ್ತಿರುವುದು ಗಮನಾರ್ಹವೆನಿಸುತ್ತದೆ.

ಬಜಾಜ್ ಡೊಮಿನರ್ 400 ಟೀಸರ್ ಚಿತ್ರ, ಮೈಕ್ರೋ ವೆಬ್ ಸೈಟ್ ಲೈವ್

ಇದು ಪ್ರಮುಖವಾಗಿಯೂ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ರಾಯಲ್ ಎನ್ ಫೀಲ್ಡ್ ಕ್ಲಾಸಿಕ್ 350 ಜೊತೆಗೆ ಮಹೀಂದ್ರ ಮೊಜೊ ಮತ್ತು ಕೆಟಿಎಂ ಡ್ಯೂಕ್ 200 ಮಾದರಿಗಳಿಗೆ ಪ್ರತಿಸ್ಪರ್ಧೆಯನ್ನು ಒಡ್ಡಲಿದೆ.

ಬಜಾಜ್ ಡೊಮಿನರ್ 400 ಟೀಸರ್ ಚಿತ್ರ, ಮೈಕ್ರೋ ವೆಬ್ ಸೈಟ್ ಲೈವ್

ಇದಕ್ಕೂ ಮೊದಲು ನವೆಂಬರ್ 18ರಂದು ಡೊಮಿನರ್ 400 ಚೊಚ್ಚಲ ಬೈಕನ್ನು ಚಕನ್ ಘಟಕದಲ್ಲಿ ಮಹಿಳಾ ಎಂಜಿನಿಯರ್ ಗಳ ಸಾರಥ್ಯದಲ್ಲಿ ಹೊರತರಲಾಗಿತ್ತು.

ಬಜಾಜ್ ಡೊಮಿನರ್ 400 ಟೀಸರ್ ಚಿತ್ರ, ಮೈಕ್ರೋ ವೆಬ್ ಸೈಟ್ ಲೈವ್

2014 ಆಟೋ ಎಕ್ಸ್ ಪೋದಲ್ಲಿ ಬಜಾಜ್ ಕ್ರೂಸರ್ ಸ್ಪೋರ್ಟ್ 400 ಬೈಕ್ ಮೊದಲ ಬಾರಿಗೆ ಅನಾವರಣಗೊಳಿಸಲಾಗಿತ್ತು. ತದಾ ಬಳಿಕ ವ್ಯಾಂಟೇಜ್ ಸ್ಪೋರ್ಟ್ 400 ಹಾಗೂ ಕ್ರೆಟೊಸ್ 400 ಎಂದು ಹೆಸರಿಸಿಕೊಂಡರೂ ಕೊನೆಗೆ ಡೊಮಿನರ್ ನಲ್ಲಿ ಅಂತ್ಯ ಕಂಡಿದೆ.

More from DriveSpark

Article Published On: Friday, December 2, 2016, 10:07 [IST]
English summary
Bajaj Dominar 400 Microsite Goes Live; Launch Date Confirmed
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+