ಸಂಚಲನ ಮೂಡಿಸಿದ ಬಜಾಜ್ ಕ್ರೆಟೊಸ್ ವಿಎಸ್400; ಏನೆಲ್ಲ ನಿರೀಕ್ಷೆ ಮಾಡಬಹುದು?

By Nagaraja

ಪುಣೆ ತಳಹದಿಯ ದ್ವಿಚಕ್ರ ವಾಹನ ಸಂಸ್ಥೆ ಅತಿ ಶೀಘ್ರದಲ್ಲೇ ನೂತನ ಕ್ರೆಟೊಸ್ ವಿಎಸ್400 ಬೈಕನ್ನು ಬಿಡುಗಡೆ ಮಾಡಲಿದ್ದು, ದ್ವಿಚಕ್ರ ವಾಹನ ಪ್ರೇಮಿಗಳಲ್ಲಿ ಹೆಚ್ಚಿನ ರೋಮಾಂಚನವನ್ನುಂಟು ಮಾಡಿದೆ. ಈ ಮೊದಲು ಪಲ್ಸರ್ ಸಿಎಸ್400 ಎಂದು ಗುರುತಿಸಿಕೊಂಡಿರುವ ನೂತನ ಬೈಕ್ ನ ಟೆಸ್ಟಿಂಗ್ ಪ್ರಕ್ರಿಯೆ ಭರದಿಂದ ಸಾಗುತ್ತಿದೆ.

ದೀಪಾವಳಿ ಹಬ್ಬದ ಸಂಭ್ರಮಕ್ಕೆ ಮೆರಗು ತುಂಬಲಿರುವ ಬಜಾಜ್ ಕ್ರೆಟೊಸ್ ವಿಎಸ್400 ನವೆಂಬರ್ ತಿಂಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಇದು ಪಲ್ಸರ್ ಬ್ರಾಂಡ್ ಬದಲಾಗಿ ಕ್ರೆಟೊಸ್ ಎಂಬ ತನ್ನದೇ ಹೊಸ ಬ್ರ್ಯಾಂಡಿಂಗ್ ಗೆ ರೂಪುರೇಷೆ ನೀಡಿದೆ. ಮುಂಬರುವ ವರ್ಷಗಳಲ್ಲಿ ಇದೇ ಬ್ರಾಂಡ್ ಹೆಸರಲ್ಲಿ ಮತ್ತಷ್ಟು ಬೈಕ್ ಗಳು ಹೊರಬರುವ ಸಾಧ್ಯತೆಯಿದೆ. 2014 ಆಟೋ ಎಕ್ಸ್ ಪೋದಲ್ಲಿ ಮೊದಲ ಬಾರಿಗೆ ಪ್ರದರ್ಶನ ಕಂಡಿರುವ ಬಜಾಜ್ ಕ್ರೆಟೊಸ್ ವಿಎಸ್400 ಬೈಕ್ ನಿಂದ ಏನೆಲ್ಲ ನಿರೀಕ್ಷೆ ಮಾಡಬಹುದು ಎಂಬುದರ ಬಗ್ಗೆ ನಾವಿಲ್ಲಿ ಮಾಹಿತಿಯನ್ನು ಕೊಡುವ ಪ್ರಯತ್ನ ಮಾಡಲಿದ್ದೇವೆ.

ಸಂಚಲನ ಮೂಡಿಸಿದ ಬಜಾಜ್ ಕ್ರೆಟೊಸ್ ವಿಎಸ್400; ಏನೆಲ್ಲ ನಿರೀಕ್ಷೆ ಮಾಡಬಹುದು?

ಕ್ರೆಟೊಸ್ ವಿಎಸ್400 ಎಂಬುದು ವ್ಯಾಂಟೇಜ್ ಸ್ಪೋರ್ಟ್ ಎಂಬ ಅರ್ಥವನ್ನು ನೀಡುತ್ತದೆ. ಇದಕ್ಕೂ ಮೊದಲು ಸಿಎಸ್ ಸ್ಪೋರ್ಟ್ ಅಥವಾ ಕ್ರೂಸರ್ ಸ್ಪೋರ್ಟ್ ಎಂಬ ಹೆಸರಿನಿಂದ ಗುರುತಿಸ್ಪಟ್ಟಿತ್ತು. ಕ್ರೆಟೊಸ್ ಎಂಬುದು ಗ್ರೀಕ್ ಯುದ್ಧ ದೇವತೆಯ ಸೂಚಕವಾಗಿದ್ದು, ಶಕ್ತಿ, ಸಾರ್ವಭೌಮ, ಅಧಿಕಾರದ ವ್ಯಕ್ತೀಕರಣದ ಸಂಕೇತವಾಗಿದೆ.

ಸಂಚಲನ ಮೂಡಿಸಿದ ಬಜಾಜ್ ಕ್ರೆಟೊಸ್ ವಿಎಸ್400; ಏನೆಲ್ಲ ನಿರೀಕ್ಷೆ ಮಾಡಬಹುದು?

ಕೆಟಿಎಂ ಡ್ಯೂಕ್ 390 ಆವೃತ್ತಿಯಲ್ಲಿರುವುದಕ್ಕೆ ಸಮಾನವಾದ 373.27 ಸಿಸಿ ಲಿಕ್ವಿಂಡ್ ಕೂಲ್ಡ್ 4 ವಾಲ್ವ್ ಟ್ರಿಪಲ್ ಸ್ಪಾರ್ಕ್ ಫ್ಯೂಯಲ್ ಇಂಜೆಕ್ಟಡ್ ಎಂಜಿನ್ ನಿಂದ ನಿಯಂತ್ರಿಸ್ಪಡುವ ಬಜಾಜ್ ವಿಎಸ್400 ಆರು ಸ್ಪೀಡ್ ಗೇರ್ ಬಾಕ್ಸ್ ಪಡೆಯಲಿದೆ.

ಸಂಚಲನ ಮೂಡಿಸಿದ ಬಜಾಜ್ ಕ್ರೆಟೊಸ್ ವಿಎಸ್400; ಏನೆಲ್ಲ ನಿರೀಕ್ಷೆ ಮಾಡಬಹುದು?

ಬಲ್ಲ ಮೂಲಗಳ ಪ್ರಕಾರ ಕ್ರೆಟೊಸ್ ವಿಎಸ್400 ಬೇಸ್ ವೆರಿಯಂಟ್ 34 ಅಶ್ವಶಕ್ತಿಯನ್ನು ಹಾಗೂ ಹೈ ಎಂಡ್ 35 ಎನ್ ಎಂ ತಿರುಗುಬಲದಲ್ಲಿ 43 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಇದರಲ್ಲಿ ಬಜಾಜ್ ಡಿಟಿಎಸ್-ಐ ತಂತ್ರಜ್ಞಾನವೂ ಆಳವಡಿಸಲಾಗುವುದು.

ಸಂಚಲನ ಮೂಡಿಸಿದ ಬಜಾಜ್ ಕ್ರೆಟೊಸ್ ವಿಎಸ್400; ಏನೆಲ್ಲ ನಿರೀಕ್ಷೆ ಮಾಡಬಹುದು?

ಕೆಟಿಎಂ ಡ್ಯೂಕ್ ನಲ್ಲಿರುವುದಕ್ಕೆ ಸಮಾನವಾಗಿ ಬಜಾಜ್ ವಿಎಸ್400 ಬೈಕ್ ನಲ್ಲೂ ಸ್ಲಿಪರ್ ಕ್ಲಚ್ ತಂತ್ರಜ್ಞಾನವು ಬಳಕೆಯಾಗಲಿದೆ. ಸ್ಲಿಪರ್ ಕ್ಲಚ್ ವ್ಯವಸ್ಥೆಯನ್ನು ಪ್ರಮುಖವಾಗಿಯೂ ನಿರ್ವಹಣಾ ಬೈಕ್ ಗಳಿಗಾಗಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಕ್ಲಚ್ ಬದಲಾಯಿಸುವಾಗ ಎಂಜಿನ್ ನಿರ್ವಹಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.

ಸಂಚಲನ ಮೂಡಿಸಿದ ಬಜಾಜ್ ಕ್ರೆಟೊಸ್ ವಿಎಸ್400; ಏನೆಲ್ಲ ನಿರೀಕ್ಷೆ ಮಾಡಬಹುದು?

ಡುಕಾಟಿ ಡೇವಿಯಲ್ ನಿಂದ ಸ್ಪೂರ್ತಿ ಪಡೆದ ಶೈಲಿ, ಟೆಲಿಸ್ಕಾಪಿಕ್ ಫ್ರಂಟ್ ಫಾರ್ಕ್, ಮೊನೊಶಾಕ್ ಸಸ್ಪೆನ್ಷನ್, ಫ್ರಂಟ್ ಮತ್ತು ರಿಯರ್ ಡಿಸ್ಕ್ ಬ್ರೇಕ್, ಎಲ್ ‌ಇಡಿ ಹೆಡ್ ಲ್ಯಾಂಪ್, ಎಲ್‌ ಇಡಿ ಟೈಲ್ ಲೈಟ್, ಶಕ್ತಿಶಾಲಿ ಇಂಧನ ಟ್ಯಾಂಕ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಇತ್ಯಾದಿ ವೈಶಿಷ್ಟ್ಯಗಳನ್ನು ವಾಹನ ಪ್ರೇಮಿಗಳು ನಿರೀಕ್ಷೆ ಮಾಡಬಹುದಾಗಿದೆ.

ಸಂಚಲನ ಮೂಡಿಸಿದ ಬಜಾಜ್ ಕ್ರೆಟೊಸ್ ವಿಎಸ್400; ಏನೆಲ್ಲ ನಿರೀಕ್ಷೆ ಮಾಡಬಹುದು?

ನೂತನ ಕ್ರೆಟೊಸ್ ವಿಎಸ್400, ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ (ಎಬಿಎಸ್) ಹಾಗೂ ಎಬಿಎಸ್ ರಹಿತ ವೆರಿಯಂಟ್ ಗಳಲ್ಲಿ ಮಾರಾಟಕ್ಕೆ ಲಭ್ಯವಾಗಲಿದೆ. ಅಂದರೆ ಎರಡು ವಿಭಿನ್ನ ಬೆಲೆಗಳಲ್ಲಿ ಎಂಟ್ರಿ ಕೊಡಲಿದೆ.

ಸಂಚಲನ ಮೂಡಿಸಿದ ಬಜಾಜ್ ಕ್ರೆಟೊಸ್ ವಿಎಸ್400; ಏನೆಲ್ಲ ನಿರೀಕ್ಷೆ ಮಾಡಬಹುದು?

ದ್ವಿಚಕ್ರ ಸುರಕ್ಷತೆಯನ್ನು ವೃದ್ಧಿಸಿಕೊಳ್ಳಲು ಸರಕಾರ ಯೋಜನೆ ಜಾರಿಗೊಳಿಸುತ್ತಿದೆ. ಇದಕ್ಕೆ ಪೂರಕವಾಗಿ ಎಬಿಎಸ್ ತಂತ್ರಗಾರಿಕೆಯನ್ನು ಕ್ರೆಟೊಸ್ ವಿಎಸ್400 ಗಿಟ್ಟಿಸಿಕೊಳ್ಳಲಿದೆ.

ಸಂಚಲನ ಮೂಡಿಸಿದ ಬಜಾಜ್ ಕ್ರೆಟೊಸ್ ವಿಎಸ್400; ಏನೆಲ್ಲ ನಿರೀಕ್ಷೆ ಮಾಡಬಹುದು?

ಬಜಾಜ್ ಪಲ್ಸರ್ ಕ್ರೆಟೊಸ್ ವಿಎಸ್400 ಎಬಿಎಸ್ ರಹಿತ ಹಾಗೂ ಎಬಿಎಸ್ ಆವೃತ್ತಿಯಗಳು ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 1.7 ಲಕ್ಷ ರು.ಗಳಿಂದ 1.85 ಲಕ್ಷ ರುಪಾಯಿಗಳಷ್ಟು ದುಬಾರಿಯೆನಿಸಲಿದೆ.

Article Published On: Saturday, October 1, 2016, 13:04 [IST]
English summary
Bajaj Kratos VS400 launching soon; what to expect
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+