ಐಎನ್‌ಎಸ್ ವಿಕ್ರಾಂತ್ ಲೋಹದಿಂದ ನಿರ್ಮಿತ ಬಜಾಜ್ 'ವಿ' ಭರ್ಜರಿ ಬಿಡುಗಡೆ

Written By:

ಭಾರತ-ಪಾಕಿಸ್ತಾನ ನಡುವಣ ಯುದ್ಧ ಸೇರಿದಂತೆ ಮೂರು ದಶಕಗಳಷ್ಟು ಭಾರತೀಯ ರಕ್ಷಣಾ ವ್ಯವಸ್ಥೆಯಲ್ಲಿ ತನ್ನ ಸೇವೆಯನ್ನು ಸಲ್ಲಿಸಿರುವ ಪ್ರಸಿದ್ಧ ಐಎನ್‌ಎಸ್ ವಿಕ್ರಾಂತ್ ವಿಹಾಕ ವಾಹಕ ಹಡಗಿನಿಂದ ಸ್ಪೂರ್ತಿ ಪಡೆದಿರುವ ಅತಿ ನೂತನ ಬಜಾಜ್ 'ವಿ' ಬೈಕ್ ಭಾರತದಲ್ಲಿ ಭರ್ಜರಿ ಬಿಡುಗಡೆಗೊಂಡಿದೆ.

ಸೋಲರಿಯದ ಐಎನ್‌ಎಸ್ ವಿಕ್ರಾಂತ್ ಹಡಗಿನ ಲೋಹದಿಂದ (Made with the invincible metal of INS Vikrant) ನಿರ್ಮಿತ ನೂತನ ಬಜಾಜ್ 'ವಿ' ಬೈಕ್, ತನ್ನ ಹೆಸರಿನಲ್ಲಿ ಶೌರ್ಯವನ್ನು (Valor) ಪ್ರತಿಬಿಂಬಿಸುತ್ತದೆ.

ಬಜಾಜ್ ವಿ

ಹಿನ್ನೆಲೆ... 1961ನೇ ಇಸವಿಯಲ್ಲಿ ಭಾರತೀಯ ನೌಕಾಸೇನೆಗೆ ಸೇರ್ಪಡೆಗೊಂಡಿರುವ ಮೊದಲ ಯುದ್ಧ ವಿಮಾನ ವಾಹಕ ಹಡಗು ಐಎನ್‌ಎಸ್ ವಿಕ್ರಾಂತ್, 1971ರ ಪಾಕಿಸ್ತಾನ ವಿರುದ್ಧದ ಯುದ್ಧದಲ್ಲಿ ಭಾರತಕ್ಕೆ ಐತಿಹಾಸಿಕ ಗೆಲುವನ್ನು ಒದಗಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಆದರೆ ದುರದೃಷ್ಟವಶಾತ್ 2014 ಐಎನ್‌ಎಸ್ ವಿಕ್ರಾಂತ್ ಹಡಗನ್ನು ನೆಲಸಮಗೊಳಿಸಿ ಅದರ ಬಿಡಿಭಾಗಗಳನ್ನು ಮಾರಾಟ ಮಾಡಲು ನಿರ್ಧರಿಸಲಾಗಿತ್ತು. ಆದರೆ ಹೊಸ ಯೋಚನೆಯೊಂದಿಗೆ ಮುಂದೆ ಬಂದಿರುವ ಬಜಾಜ್, ಇದೇ ಹಡಗಿನ ಲೋಹದಿಂದ 'ವಿ' ಬೈಕ್ ನಿರ್ಮಿಸುತ್ತಿದೆ.

ಎಂಜಿನ್ ತಾಂತ್ರಿಕತೆ

 • 150 ಸಿಸಿ ಎಂಜಿನ್,
 • 12 ಅಶ್ವಶಕ್ತಿ (7,500rpm)
 • 12 ಎನ್‌ಎಂ (3000rpm) ಹಾಗೂ 13 ಎನ್‌ಎಂ ತಿರುಗುಬಲ (5,500prm)
 • 5 ಸ್ಪೀಡ್ ಗೇರ್ ಬಾಕ್ಸ್,

ಸಸ್ಪೆನ್ಷನ್

 • ಟೆಲಿಸ್ಕಾಪಿಕ್ ಫ್ರಂಟ್ ಫಾರ್ಕ್,
 • ಹಿಂದುಗಡೆ ಟ್ವಿನ್ ನಿಟ್ರಾಕ್ಸ್ ಶಾಕ್ಸ್

ಬ್ರೇಕ್

 • ಮುಂದುಗಡೆ ಡಿಸ್ಕ್ ಬ್ರೇಕ್,
 • ಹಿಂಭಾಗದಲ್ಲಿ ಡ್ರಮ್ ಬ್ರೇಕ್

ಚಕ್ರಗಳು: ಮುಂಭಾಗದಲ್ಲಿ 18 ಹಾಗೂ ಹಿಂಭಾಗದಲ್ಲಿ 16 ಇಂಚುಗಳ ಅಲಾಯ್ ವೀಲ್.

ವಿಶಿಷ್ಟತೆಗಳು

 • ಎತ್ತರದ ಸಾನಿಧ್ಯ,
 • 13 ಲೀಟರ್ ಇಂಧನ ಟ್ಯಾಂಕ್,
 • ಗ್ರಾಫಿಕ್ಸ್ ,
 • ಕೆಫೆ ರೇಸರ್ ಸ್ಪೂರ್ತಿ,
 • 60ವಾಟ್ ಹೆಡ್ ಲ್ಯಾಂಪ್ ಹಾಗೂ ಎಲ್‌ಇಡಿ ಹೆಡ್ ಲ್ಯಾಂಪ್,
 • ಟ್ವಿನ್ ಸ್ಪೋಕ್ ಅಲಾಯ್ ವೀಲ್,
 • ಎಲ್‌ಇಡಿ ಇನ್ಸ್ಟ್ರುಮೆಂಟ್ ಕ್ಲಸ್ಟರ್

ಆಸನ ವ್ಯವಸ್ಥೆ: ಸಿಂಗಲ್ ಸೀಟು

ಬಣ್ಣಗಳು: ಎಬೋನಿ ಬ್ಲ್ಯಾಕ್ ಮತ್ತು ಪಿಯರ್ಲ್ ವೈಟ್.

ಬೆಲೆ

ಅಂದ ಹಾಗೆ ನೂತನ ಬಜಾಜ್ ವಿ 60,000 ರು.ಗಳಿಂದ 70,000 ರು.ಗಳ ನಡುವಣ ಬೆಲೆ ಪರಿಧಿಯಲ್ಲಿ ಬಿಡುಗಡೆಯಾಗಲಿದೆ. ನೂತನ ಬೈಕ್ ನಿರ್ಮಾಣ ಪ್ರಕ್ರಿಯೆಯು ಫೆಬ್ರವರಿ 05ರಂದು ಆರಂಭವಾಗಲಿದ್ದು ಮಾರ್ಚ್ ತಿಂಗಳಲ್ಲಿ ವಿತರಣೆ ಪ್ರಕ್ರಿಯೆ ಆರಂಭವಾಗಲಿದೆ. ಅಲ್ಲದೆ ಸದ್ಯಕ್ಕೆ ಪ್ರತಿ ತಿಂಗಳು 20,000 ಯುನಿಟ್ ಗಳ ನಿರ್ಮಾಣ ಸಾಮರ್ಥ್ಯವನ್ನು ಹೊಂದಿರಲಿದೆ.

English summary
Bajaj Reveals V - Pays Homage To The INS Vikrant Aircraft Carrier

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

X