ಎರಡು ಲಕ್ಷ ಮೈಲುಗಲ್ಲು ತಲುಪಿದ ಬಜಾಜ್ ವಿ15

By Nagaraja

ದೇಶದ ಮುಂಚೂಣಿಯ ಸಂಸ್ಥೆಯಾಗಿರುವ ಬಜಾಜ್ ಆಟೋ, ಪ್ರಸಕ್ತ ಸಾಲಿನಲ್ಲಷ್ಟೇ ಐಕಾನಿಕ್ ಯುದ್ಧ ವಿಮಾನ ಐಎನ್ ಎಸ್ ವಿಕ್ರಾಂತ್ ಲೋಹದಿಂದ ನಿರ್ಮಿತ ವಿ15 ಬೈಕನ್ನು ಬಿಡುಗಡೆಗೊಳಿಸಿತ್ತು. ಮಾರ್ಚ್ ನಲ್ಲಿ ದೇಶಕ್ಕೆ ಪಾದರ್ಪಣೆಗೈದ ಈ ಬೈಕ್ ಎರಡು ಲಕ್ಷಕ್ಕೂ ಹೆಚ್ಚು ಮಾರಾಟವನ್ನು ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಎರಡು ಲಕ್ಷ ಮೈಲುಗಲ್ಲು ತಲುಪಿದ ಬಜಾಜ್ ವಿ15

ಬಿಡುಗಡೆಯಾದ ಮೊದಲ ತಿಂಗಳಲ್ಲೇ ಟಾಪ್ 10 ಗರಿಷ್ಠ ಮಾರಾಟವಾಗುವ ಬೈಕ್ ಗಳ ಸಾಲಿಗೆ ಸೇರಿಕೊಂಡಿರುವ ಬಜಾಜ್ ವಿ15, ನಾಲ್ಕನೇ ತಿಂಗಳೊಳಗೆ ಒಂದು ಲಕ್ಷವನ್ನು ಇದೀಗ ಎಂಟು ತಿಂಗಳೊಳಗೆ ಎರಡು ಲಕ್ಷ ಯುನಿಟ್ ಮಾರಾಟ ಮೈಲುಗಲ್ಲನ್ನು ದಾಟಿದೆ.

ಎರಡು ಲಕ್ಷ ಮೈಲುಗಲ್ಲು ತಲುಪಿದ ಬಜಾಜ್ ವಿ15

ಬಜಾಜ್ ವಿ15 ತಿಂಗಳಲ್ಲಿ ಸರಾಸರಿ 30,000ದಷ್ಟು ಮಾರಾಟವನ್ನು ಕಾಪಾಡಿಕೊಂಡಿದೆ. ಈ ಸಂಬಂಧ ಆಕರ್ಷಕ ಅರ್ಥವತ್ತಾದ ಜಾಹೀರಾತನ್ನು ಸಂಸ್ಥೆಯು ಬಿಡುಗಡೆಗೊಳಿಸಿದೆ. ಓದುಗರಿಗಾಗಿ ಲೇಖನದ ಕೊನೆಯಲ್ಲಿ ವಿಡಿಯೋವನ್ನು ಹಂಚಲಾಗಿದೆ.

ಎರಡು ಲಕ್ಷ ಮೈಲುಗಲ್ಲು ತಲುಪಿದ ಬಜಾಜ್ ವಿ15

149.5 ಸಿಸಿ ಸಿಂಗಲ್ ಸಿಲಿಂಡರ್ 4 ಸ್ಟ್ರೋಕ್ ಎಸ್‌ಒಎಚ್ ಸಿ ಏರ್ ಕೂಲ್ಡ್ ಡಿಟಿಎಸ್-ಐ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಬಜಾಜ್ ವಿ, 13 ಎನ್ ಎಂ ತಿರುಗುಬಲದಲ್ಲಿ 12 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ. ಅಲ್ಲದೆ ಐದು ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿರುತ್ತದೆ. '

ಎರಡು ಲಕ್ಷ ಮೈಲುಗಲ್ಲು ತಲುಪಿದ ಬಜಾಜ್ ವಿ15

ನೂತನ ಬಜಾಜ್ ವಿ15 ಅತಿ ಶೀಘ್ರದಲ್ಲೇ ವೈನ್ ರೆಡ್ ಬಣ್ಣದಲ್ಲೂ ಲಭ್ಯವಾಗಲಿದ್ದು, ಒಟ್ಟು ಬಣ್ಣಗಳ ಸಂಖ್ಯೆಯು ಮೂರಕ್ಕೆ ಏರಿಕೆಯಾಗಿದೆ. ಎಬೋನಿ ಬ್ಲ್ಯಾಕ್ ಮತ್ತು ಪಿಯರ್ಲ್ ವೈಟ್ ಗಳೆಂಬ ಬಣ್ಣಗಳು ಈಗಾಗಲೇ ಮಾರುಕಟ್ಟೆಯಲ್ಲಿದೆ. ಇದಕ್ಕೀಗ ಹೊಸತಾದ ವೈನ್ ರೆಡ್ ಸೇರ್ಪಡೆಯಾಗಲಿದೆ.

ಎರಡು ಲಕ್ಷ ಮೈಲುಗಲ್ಲು ತಲುಪಿದ ಬಜಾಜ್ ವಿ15

ಬಹುಮುಖಧಾರಿ ಆಧುನಿಕ ಕ್ಲಾಸಿಕ್ ಶೈಲಿಯನ್ನು ಮೈಗೂಡಿಸಿ ಬಂದಿರುವ ಬಜಾಜ್ ವಿ15, ದಿಟ್ಟವಾದ ಸ್ಪೋರ್ಟಿ ಗ್ರಾಫಿಕ್ಸ್, ಕ್ಲಾಸಿಕ್ ಎಲ್‌ಇಡಿ ಟೈಲ್ ಲ್ಯಾಂಪ್, ಪ್ರೀಮಿಯಂ ಸೀಟು, ಪ್ರೀಮಿಯಂ ಇನ್ಸ್ಟ್ರುಮೆಂಟ್ ಕ್ಲ್ಸ್ಟರ್ ಮತ್ತು 10 ಸ್ಪೋಕ್ ಅಲ್ಯೂಮಿನಿಯಂನಿಂದ ಸುತ್ತುವರಿದ ವೀಲ್ ಡಿಸೈನ್ ಗಳನ್ನು ಪಡೆದಿದೆ.

ಎರಡು ಲಕ್ಷ ಮೈಲುಗಲ್ಲು ತಲುಪಿದ ಬಜಾಜ್ ವಿ15

ಪ್ರಭಾವಶಾಲಿ ಮುಂಭಾಗ, ಎತ್ತರದ ಸಾನಿಧ್ಯ, ಎದ್ದು ಕಾಣಿಸುವ ಇಂಧನ ಟ್ಯಾಂಕ್, ಕಾರ್ಯ ಕ್ಷಮತೆಯ ಹ್ಯಾಂಡಲ್ ಬಾರ್, ಆಕ್ರಮಣಕಾಗಿ ಫ್ರಂಟ್ ಫಾರ್ಕ್ ಮತ್ತು ಬಿರುಸುತನದ ಡಬಲ್ ದೇಹ ರಚನೆ ಇದರಲ್ಲಿದೆ.

ಎರಡು ಲಕ್ಷ ಮೈಲುಗಲ್ಲು ತಲುಪಿದ ಬಜಾಜ್ ವಿ15

ಮುಂಭಾಗದಲ್ಲಿ ಟೆಲಿಸ್ಕಾಪಿಕ್ ಮತ್ತು ಹಿಂಭಾಗದಲ್ಲಿ ಟ್ವಿನ್ ಸ್ಪ್ರಿಂಗ್ ಲೋಡಡ್ ಹೈಡಾಲಿಕ್ ಟೈಪ್ ಸಸ್ಪನ್ಷನ್ ಜೊತೆಗೆ ಮುಂಭಾಗದಲ್ಲಿ 240 ಡಿಸ್ಕ್ ಹಾಗೂ ಹಿಂಭಾಗದಲ್ಲಿ 130 ಡ್ರಮ್ ಬ್ರೇಕ್ ವ್ಯವಸ್ಥೆಯನ್ನು ಪಡೆದಿದೆ.

ಎರಡು ಲಕ್ಷ ಮೈಲುಗಲ್ಲು ತಲುಪಿದ ಬಜಾಜ್ ವಿ15

1971ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ನಿರ್ಮಾಣಕ ಪಾತ್ರ ವಹಿಸಿರುವ ಭಾರತೀಯ ನೌಕಾಸೇನೆಯ ವಿಮಾನಧಾರಕ ನೌಕೆ 'ವಿಕ್ರಾಂತ್' ಯುದ್ಧ ವಿಮಾನದ ಉಕ್ಕಿನ ಲೋಹದಿಂದ ಅತ್ಯಾಧುನಿಕ ವಿ15 ನಿರ್ಮಿಸಲಾಗಿದೆ.

ಎರಡು ಲಕ್ಷ ಮೈಲುಗಲ್ಲು ತಲುಪಿದ ಬಜಾಜ್ ವಿ15

ಸೋಲರಿಯದ ಐಎನ್‌ಎಸ್ ವಿಕ್ರಾಂತ್ ಹಡಗಿನ ಲೋಹದಿಂದ (Made with the invincible metal of INS Vikrant) ನಿರ್ಮಿತ ನೂತನ ಬಜಾಜ್ 'ವಿ' ಬೈಕ್, ತನ್ನ ಹೆಸರಿನಲ್ಲೇ ಶೌರ್ಯವನ್ನು (Valor) ಪ್ರತಿಬಿಂಬಿಸುತ್ತದೆ.

ಬಜಾಜ್ ವಿ15 ಜಾಹೀರಾತು ವೀಕ್ಷಿಸಿ

More from DriveSpark

Article Published On: Friday, October 14, 2016, 17:44 [IST]
English summary
Bajaj V15 Achieves 2 Lakh Sales Milestone; New TVC Launched
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+