ಅಚ್ಚರಿ! ಬಜಾಜ್ ವಿ15, 150 ಸಿಸಿ ಬೈಕ್‌ನ ಬೆಲೆ ಎಷ್ಟು ಗೊತ್ತಾ?
ಭಾರತೀಯ ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಟ್ರಿರುವ ಅತಿ ನೂತನ ಬಜಾಜ್ ವಿ15 ಬೈಕ್‌ನ ಬೆಲೆ ಪ್ರಕಟಣೆಗೊಂಡಿದೆ. 150 ಸಿಸಿ ದ್ವಿಚಕ್ರ ವಿಭಾಗದಲ್ಲಿ ಕ್ರಾಂತಿಕಾರಿ ಬದಲವಾವಣೆಯನ್ನುಂಟು ಮಾಡುವ ಸಾಧ್ಯತೆಯಿರುವ ಬಜಾಜ್ ವಿ15 ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 62,000 ರು.ಗಳ ವರೆಗೆ ದುಬಾರಿಯೆನಿಸಲಿದೆ.
Also Read: ಐತಿಹಾಸಿಕ 'ವಿಕ್ರಾಂತ್' ಹಡಗಿನ ಲೋಹದಿಂದ ನೂತನ ಬಜಾಜ್ ಬೈಕ್ ತಯಾರಿ
ನಿಜಕ್ಕೂ ಬಜಾಜ್ ವಿ15 ಬೈಕ್ ಬೆಲೆ 61,000 ರು.ಗಳಾಗಿರಲಿದೆ. ಆದರೆ ಕೆಫೆ ರೇಸರ್ ಕವರ್, ಗ್ರಾಬ್ ರೈಲ್, ಕ್ರಾಶ್ ಗಾರ್ಡ್ ಮುಂತಾದ ಆಕ್ಸಸರಿಗಳು ಸೇರಿ ಮತ್ತಷ್ಟು 1000 ರು.ಗಳಷ್ಟು ದುಬಾರಿಯೆನಿಸಲಿದೆ. ಹೀಗೆ ಒಟ್ಟು ಮೊತ್ತ 62,000 ರು.ಗಳಿಗೆ ಏರಿಕೆಯಾಗಿದೆ.

ಕೆಫೆ ರೇಸರ್ ಮತ್ತು ಕ್ರೂಸರ್ ಮೋಟಾರ್ ಸೈಕಲ್ ಮಿಶ್ರಿತ ಬಜಾಜ್ ವಿ15 ಬೈಕನ್ನು ದೇಶದ ಐಕಾನಿಕ್ ಯುದ್ಧ ವಿಮಾನ ವಾಹಕ ಐಎನ್‌ಎಸ್ ವಿಕ್ರಾಂತ್ ಹಡಗಿನ ಲೋಹದಿಂದ ತಯಾರಿಸಲಾಗಿದೆ.

ವಾಹನ ಪ್ರೇಮಿಗಳಿಂದ ಬಜಾಜ್ ವಿ15 ಬುಕ್ಕಿಂಗ್ ಸ್ವೀಕರಿಸಲಾಗುತ್ತಿದ್ದು, 2016 ಮಾರ್ಚ್ ಮಧ್ಯಂತರ ವೇಳೆಯಾಗುವಾಗ ವಿತರಣೆ ಪ್ರಕ್ರಿಯೆ ಆರಂಭವಾಗಲಿದೆ.

ಎಂಜಿನ್
ಸಿಂಗಲ್ ಸಿಲಿಂಡರ್, 4 ಸ್ಟ್ರೋಕ್,
ಎಸ್‌ಒಎಚ್‌ಸಿ 3 ವಾಲ್ವ್, ಏರ್ ಕೂಲ್ಡ್, ಡಿಟಿಎಸ್-ಐ
ಸಾಮರ್ಥ್ಯ (ಸಿಸಿ): 149.5
ಗರಿಷ್ಠ ಶಕ್ತಿ: 12 @ 7500 (PS @ RPM)
ಗರಿಷ್ಠ ತಿರುಗುಬಲ: 13 @ 5500 (Nm @RPM)

ಸಸ್ಪೆನ್ಷನ್
ಫ್ರಂಟ್: ಟೆಲಿಸ್ಕಾಪಿಕ್
ರಿಯರ್: ಟ್ವಿನ್ ಸ್ಪ್ರಿಂಗ್ ಲೋಡಡ್ ಹೈಡ್ರಾಲಿಕ್ ವಿಧ

ಬ್ರೇಕ್
ಮುಂಭಾಗ: 240 ಡಿಸ್ಕ್
ಹಿಂಭಾಗ: 130 ಡ್ರಮ್

ಇಂಧನ ಟ್ಯಾಂಕ್
ಲೀಟರ್: 13
ರಿಸರ್ವ್: 1.7

ಆಯಾಮ (ಎಂಎಂ)
ಉದ್ದ: 2044
ಅಗಲ: 780
ಎತ್ತರ: 1070
ಗ್ರೌಂಡ್ ಕ್ಲಿಯರನ್ಸ್: 165
ಚಕ್ರಾಂತರ: 1315
ಭಾರ: 135.5 ಕೆ.ಜಿ
ಸೀಟು ಎತ್ತರ: 780

ವಿಶಿಷ್ಟತೆಗಳು
ಎತ್ತರದ ಸಾನಿಧ್ಯ,
13 ಲೀಟರ್ ಇಂಧನ ಟ್ಯಾಂಕ್,
ಸ್ಪೋರ್ಟಿ ಗ್ರಾಫಿಕ್ಸ್ ,
ಕೆಫೆ ರೇಸರ್ ಸ್ಪೂರ್ತಿ,
60ವಾಟ್ ಹೆಡ್ ಲ್ಯಾಂಪ್ ಹಾಗೂ ಎಲ್‌ಇಡಿ ಹೆಡ್ ಲ್ಯಾಂಪ್,
ಟ್ವಿನ್ ಸ್ಪೋಕ್ ಅಲಾಯ್ ವೀಲ್,
ಎಲ್‌ಇಡಿ ಇನ್ಸ್ಟ್ರುಮೆಂಟ್ ಕ್ಲಸ್ಟರ್

01. ಬಜಾಜ್ 'ವಿ'; ಬೈಕ್ ಪ್ರೇಮಿಗಳು ಅರಿತುಕೊಳ್ಳಬೇಕಾದ 10 ಅಂಶಗಳು!
02. ಐಎನ್‌ಎಸ್ ವಿಕ್ರಾಂತ್ ಲೋಹದಿಂದ ನಿರ್ಮಿತ ಬಜಾಜ್ 'ವಿ' ಭರ್ಜರಿ ಬಿಡುಗಡೆ


Click it and Unblock the Notifications