'ಸ್ಲಿಪರ್ ಕ್ಲಚ್' ನೊಂದಿಗೆ ಬಿಡುಗಡೆಯಾಗಲಿರುವ ಬಜಾಜ್ ವಿಎಸ್400
ವಾಹನ ಪ್ರೇಮಿಗಳೆಲ್ಲ ಬಹುನಿರೀಕ್ಷಿತ ಬಜಾಜ್ ವಿಎಸ್400 ಬಿಡುಗಡೆಗೆ ಕಾತರದಿಂದ ಕಾಯುತ್ತಿರುವಂತೆಯೇ ಶುಭ ಸುದ್ದಿಯೊಂದು ಹೊರಬಂದಿದೆ. ಕೆಟಿಎಂ ಡ್ಯೂಕ್ ನಲ್ಲಿರುವುದಕ್ಕೆ ಸಮಾನವಾಗಿ ಬಜಾಜ್ ವಿಎಸ್400 ಬೈಕ್ ನಲ್ಲೂ ಸ್ಲಿಪರ್ ಕ್ಲಚ್ ತಂತ್ರಜ್ಞಾನವು ಬಳಕೆಯಾಗಲಿದೆ.
ಸ್ಲಿಪರ್ ಕ್ಲಚ್ ವ್ಯವಸ್ಥೆಯನ್ನು ಪ್ರಮುಖವಾಗಿಯೂ ನಿರ್ವಹಣಾ ಬೈಕ್ ಗಳಿಗಾಗಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಕ್ಲಚ್ ಬದಲಾಯಿಸುವಾಗ ಎಂಜಿನ್ ನಿರ್ವಹಣೆಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.

ಇದಕ್ಕೂ ಮುನ್ನ ಸಿಎಸ್400 (ಕ್ರೂಸರ್ ಸ್ಪೋರ್ಟ್) ಎನಿಸಿಕೊಂಡಿದ್ದ ಬಜಾಜ್ ನೂತನ ಬೈಕ್ ಈಗ ವಿಎಸ್ 400 ಎಂದು ಹೆಸರಿಸಿಕೊಂಡಿದೆ. ಇದು ಅಕ್ಟೋಬರ್ ತಿಂಗಳ ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.

ಬಜಾಜ್ ಪಾಲಿನ ಅತ್ಯಂತ ದುಬಾರಿ ಬೈಕ್ ಎನಿಸಿಕೊಳ್ಳಲಿರುವ ವಿಎಸ್400 ಸರಿ ಸುಮಾರು 1.7 ಲಕ್ಷ ರು.ಗಳ ಎಕ್ಸ್ ಶೋ ರೂಂ ಬೆಲೆ ಪರಿಧಿಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಇನ್ನು ಎಬಿಎಸ್ ಆವೃತ್ತಿಯು ಎರಡು ಲಕ್ಷ ರು.ಗಳಷ್ಟು ಬೆಲೆ ಬಾಳಲಿದೆ.

ಆಸ್ಟ್ರೀಯಾದ ತನ್ನ ಜೊತೆ ಸಂಸ್ಥೆ ಕೆಟಿಎಂ ಡ್ಯೂಕ್ ನಿಂದ ಆಮದು ಮಾಡಲಾದ 373.27 ಸಿಸಿ ಸಿಂಗಲ್ ಲಿಕ್ವಿಡ್ ಕೂಲ್ಡ್ ಎಂಜಿನ್ ಬಳಕೆಯಾಗಲಿದೆ. ಇದರಲ್ಲಿ ಬಜಾಜ್ ಡಿಟಿಎಸ್-ಐ ತಂತ್ರಜ್ಞಾನವೂ ಆಳವಡಿಸಲಾಗುವುದು.

ಆರು ಸ್ಪೀಡ್ ಗೇರ್ ಬಾಕ್ಸ್ ನಿಯಂತ್ರಿಸಲ್ಪಡುವ ವಿಎಸ್400, 34.50 ಅಶ್ವಶಕ್ತಿಯನ್ನು ನೀಡಲಿದೆ. ಇನ್ನುಳಿದಂತೆ ಡ್ಯುಯಲ್ ಚಾನೆಲ್ ಎಬಿಎಸ್, ಫ್ರಂಟ್ ಮತ್ತು ರಿಯರ್ ಡಿಸ್ಕ್ ಬ್ರೇಕ್, ಅಲಾಯ್ ಚಕ್ರಗಳು, ಎಲ್ ಇಡಿ ಬೆಳಕಿನ ಸೇವೆಗಳು ಇರಲಿದೆ.

ಇದಕ್ಕೂ ಮೊದಲು 2014 ಆಟೋ ಎಕ್ಸ್ ಪೋದಲ್ಲಿ ಮೊದಲ ಬಾರಿಗೆ ಬಜಾಜ್ ಪಲ್ಸರ್ ಸಿಎಸ್400 ದೇಶದಲ್ಲಿ ಅನಾವರಣಗೊಂಡಿತ್ತು.


Click it and Unblock the Notifications








