ಎಬಿಎಸ್ ಜೊತೆಗೆ ಬೆನೆಲ್ಲಿ ಟಿಎನ್‌ಟಿ 600ಐ ಬಿಡುಗಡೆ
ಭಾರತಕ್ಕೆ ಪ್ರವೇಶಿಸಿದ ಕೆಲವೇ ತಿಂಗಳುಗಳಲ್ಲಿ ಹೆಚ್ಚಿನ ಜನಪ್ರಿಯತೆ ಕಾಪಾಡಿಕೊಂಡಿರುವ ಇಟಲಿಯ ಐಕಾನಿಕ್ ಸೂಪರ್ ಬೈಕ್ ನಿರ್ಮಾಣ ಸಂಸ್ಥೆ ಬೆನೆಲ್ಲಿ, ದೇಶದಲ್ಲಿ ಟಿಎನ್‌ಟಿ 600ಐ ಆ್ಯಂಟಿ ಬ್ರೇಕ್ ಲಾಕಿಂಗ್ ಸಿಸ್ಟಂ (ಎಬಿಎಸ್) ಆವೃತ್ತಿಯನ್ನು ಬಿಡುಗಡೆ ಮಾಡಿದೆ.
ಡಿಎಸ್ ಕೆ ಸಹಯೋಗದಲ್ಲಿ ಭಾರತದಲ್ಲಿ ತನ್ನ ಐಕಾನಿಕ್ ಸೂಪರ್ ಬೈಕ್ ಗಳನ್ನು ಮಾರಾಟ ಮಾಡುತ್ತಿರುವ ಬೆನೆಲ್ಲಿಯ ಟಿಎನ್‌ಟಿ 600ಐ ಎಬಿಎಸ್ ಮಾದರಿಯು ಪುಣೆ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 6.53 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ.

ಮಧ್ಯಮ ಗಾತ್ರದ ಈ ನೆಕ್ಡ್ ಸ್ಟ್ರೀಟ್ ಫೈಟರ್ ಬೈಕ್ ನಲ್ಲಿರುವ 600 ಸಿಸಿ ಫೋರ್ ಸಿಲಿಂಡರ್ ಎಂಜಿನ್ ಆರು ಸ್ಪೀಡ್ ಗೇರ್ ಬಾಕ್ಸ್ ನಿಂದ ನಿಯಂತ್ರಿಸಲ್ಪಡಲಿದೆ. ಇದು 54.6 ಎನ್ಎಂ ತಿರುಗುಬಲದಲ್ಲಿ 84 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಕಂಪ್ಲೀಟ್ ನೌಕ್ಡ್ ಡೌನ್ ಮುಖಾಂತರ ಪುಣೆಯಲ್ಲಿರುವ ಡಿಎಸ್ ಕೆ ಮೋಟೋವೀಲ್ಸ್ ಘಟಕವನ್ನು ತಲುಪಲಿರುವ ಬೆನೆಲ್ಲಿ ಟಿಎನ್ ಟಿ 600ಐ ಬೈಕ್ ಸ್ಥಳೀಯವಾಗಿ ಜೋಡಣೆಯಾಗಲಿದೆ.

ಎಬಿಎಸ್ ಜೊತೆಗಿನ ಬೆನೆಲ್ಲಿ ಟಿಎನ್ ಟಿ 600 ಐ ವಿತರಣೆ ಪ್ರಕ್ರಿಯೆಯು ಅತಿ ಶೀಘ್ರದಲ್ಲೇ ಆರಂಭಗೊಳ್ಳಲಿದೆ ಎಂದು ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.

ಹಂತ ಹಂತವಾಗಿ ತನ್ನೆಲ್ಲ ಶ್ರೇಣಿಯ ಸೂಪರ್ ಬೈಕ್ ಗಳಿಗೆ ಎಬಿಎಸ್ ಸುರಕ್ಷಾ ವೈಶಿಷ್ಟ್ಯವನ್ನು ನೀಡಲಾಗುತ್ತಿದೆ. ಅಂತೆಯೇ ವರ್ಷಾಂತ್ಯದ ವೇಳೆಯಾಗುವಾಗ ಎಲ್ಲ ಬೆನೆಲ್ಲಿ ಬೈಕ್ ಗಳು ಎಬಿಎಸ್ ಸೌಲಭ್ಯವನ್ನು ಗಿಟ್ಟಿಸಿಕೊಳ್ಳಲಿದೆ.

ಇನ್ನುಳಿದಂತೆ ಬೆನೆಲ್ಲಿ ಟಿಎನ್ ಟಿ 600ಐ ಸೂಪರ್ ಬೈಕ್ ನಲ್ಲಿ ಯಾವುದೇ ಬದಲಾವಣೆ ತರಲಾಗಿಲ್ಲ. ಇದು ಕ್ರೀಡಾ ಬೈಕ್ ಸ್ನೇಹಿಗಳ ಪಾಲಿಗೆ ನೆಚ್ಚಿನ ಆಯ್ಕೆಯಾಗಿರಲಿದೆ.

ಆಯಾಮ (ಎಂಎಂ)
ಉದ್ದ: 2160
ಅಗಲ: 800
ಎತ್ತರ: 1180
ಗ್ರೌಂಡ್ ಕ್ಲಿಯರನ್ಸ್: 150
ಭಾರ: 231 ಕೆ.ಜಿ
ಇಂಧನ ಟ್ಯಾಂಕ್ ಸಾಮರ್ಥ್ಯ: 15 ಲೀಟರ್

ಚಾಸೀ
ಫ್ರಂಟ್ ಸಸ್ಪೆನ್ಷನ್: ಇನ್ವರ್ಟಡ್ ಫ್ರಂಟ್ ಟೆಲಿಸ್ಕಾಪಿಕ್ ಫಾರ್ಕ್
ರಿಯರ್ ಸಸ್ಪೆನ್ಷನ್: ಹೈಡ್ರಾಲಿಕ್ ಮೊನೊಶಾಕ್ ಅಬ್ಸಾರ್ಬರ್

ಬ್ರೇಕ್
ಫ್ರಂಟ್ ಬ್ರೇಕ್: ಹೈಡ್ರಾಲಿಕ್ ಡ್ಯುಯಲ್ ಡಿಸ್ಕ್ ಬ್ರೇಕ್
ರಿಯರ್ ಬ್ರೇಕ್: ಹೈಡ್ರಾಲಿಕ್ ಸಿಂಗಲ್ ಡಿಸ್ಕ್ ಬ್ರೇಕ್

ಚಕ್ರಗಳು
ಫ್ರಂಟ್ ವೀಲ್: ಅಲಾಯ್ ವೀಲ್
ರಿಯರ್ ವೀಲ್: ಅಲಾಯ್ ವೀಲ್

ಆಸಕ್ತ ಗ್ರಾಹಕರು 40,000 ರು.ಗಳಷ್ಟು ಮುಂಗಡ ಮೊತ್ತ ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ. ಎಬಿಎಸ್ ಮಾಡೆಲ್ ಸಾಮಾನ್ಯ ಆವೃತ್ತಿಗಿಂತಲೂ ಸರಿ ಸುಮಾರು 40,000 ರು.ಗಳಷ್ಟು ದುಬಾರಿಯೆನಿಸುತ್ತದೆ.


Click it and Unblock the Notifications








