ಡಕಾರ್ ಚಾಂಪ್ ಸಂತೋಷ್ ಮೆಚ್ಚೆಗುಗೆ ಪಾತ್ರವಾದ 'ಹಿಮಾಲಯನ್' ಬೈಕ್

By Nagaraja

ಅತಿ ಶೀಘ್ರದಲ್ಲೇ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಅಡ್ವೆಂಚರ್ ಬೈಕ್ ಬಿಡುಗಡೆಯಾಗಲಿರುವಂತೆಯೇ ಈ ಬಹುನಿರೀಕ್ಷಿತ ಬೈಕ್ ಬಗ್ಗೆ ಭಾರತದ ಚೊಚ್ಚಲ ಡಕಾರ್ ರಾಲಿ ಪ್ರತಿಸ್ಪರ್ಧಿ ಬೆಂಗಳೂರಿನ ಸಿಎಸ್ ಸಂತೋಷ್ ತಮ್ಮ ಮನದಾಳವನ್ನು ಬಿಚ್ಚಿಟ್ಟಿದ್ದಾರೆ.

ಕಳೆದ ವರ್ಷ ವಿಶ್ವದ ಅತ್ಯಂತ ಕ್ರಾಸ್ ಕಂಟ್ರಿ ಡಕಾರ್ ರಾಲಿಯಲ್ಲಿ ಸ್ಪರ್ಧಿಸಿದ ಚೊಚ್ಚಲ ಭಾರತೀಯನೆಂಬ ಗೌರವಕ್ಕೆ ಪಾತ್ರವಾಗಿದ್ದ ಬೆಂಗಳೂರಿನ ಸಂತೋಷ್ ಬಳಿಕ ಇದೇ ರಾಲಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ದೇಶ ಮೊದಲಿಗರೆನಿಸಿಕೊಂಡಿದ್ದರು.

ರಾಯಲ್ ಎನ್‌ಫೀಲ್ಡ್ ಹಿಮಾಲಯನ್


ಎಲ್ಲ ಅರ್ಥದಲ್ಲೂ ಆಫ್ ರೋಡ್ ಬೈಕ್ ವೊಂದರ ಚಲನಶೀಲತೆಯನ್ನು ಮೊದಲ ಬಾರಿಗೆ ಪರೀಕ್ಷಿಸುವ ಹಕ್ಕು ಸಂತೋಷ್ ಅವರಿಗೆ ಸಲ್ಲುತ್ತದೆ. ಇದೀಗ 2016 ಡಕಾರ್ ರಾಲಿಯಲ್ಲಿ ಭಾಗವಹಿಸುವ ಮೂಲಕ ತವರಿಗೆ ಮರಳಿರುವ ಸಂತೋಷ್ ರಾಯಲ್ ಎನ್ ಫೀಲ್ಡ್ ಹಿಮಾಲಯನ್ ಬೈಕ್ ಪ್ರಾಯೋಗಾರ್ಥ ಚಾಲನೆಯ ಬಳಿಕ ತಮ್ಮ ಅಭಿಪ್ರಾಯವನ್ನು ವಾಹನ ಪ್ರೇಮಿಗಳ ಮುಂದೆ ಹಂಚಿಕೊಂಡಿದ್ದಾರೆ.

ಕೊನೆಗೂ ಅಡ್ವೆಂಚರ್ ವಿಭಾಗದಲ್ಲಿ ಬೈಕ್ ತಯಾರಿಗೆ ವಾಹನ ಸಂಸ್ಥೆಯೊಂದು ಮುಂದಾಗಿರುವುದಕ್ಕೆ ಅತೀವ ಸಂತಸ ವ್ಯಕ್ತಪಡಿಸಿರುವ ಸಂತೋಷ್, ಭಾರತದಲ್ಲಿ ವಿಶಾಲವಾದ ಭೂಪ್ರದೇಶದ ಸಂಶೋಧನೆ ಮಾಡಲು ಆನ್ ಮತ್ತು ಆಫ್ ರೋಡ್ ಸಾಮರ್ಥ್ಯದ ಬೈಕ್ ವೊಂದರ ಅವಶ್ಯಕತೆಯಿದೆ ಎಂದಿದ್ದಾರೆ.


ಈ ವೇಳೆ ಸಂತೋಷ್ ಅವರಿಗೆ ಮಗದೋರ್ವ ರೇಸ್ ಸವಾರ ಜೋಶ್ ಸಾಥ್ ನೀಡಿದ್ದರು. ಸಾಮಾನ್ಯವಾಗಿ ಬೈಕ್ ಗಳು ಸ್ಟ್ರೀಟ್ ಗಳಲ್ಲಿ ಅತ್ಯುತ್ತಮ ನಿರ್ವಹಣೆ ನೀಡುತ್ತವೆ. ಆದರೆ ಆಫ್ ರೋಡ್ ತಲುಪಿದಾಗ ವೈಫಲ್ಯವನ್ನು ಅನುಭವಿಸುತ್ತದೆ. ಆದರೆ ನೂತನ ರಾಯಲ್ ಎನ್ ಫೀಲ್ಡ್ ಹಿಮಾಲಯನ್ ಬೈಕ್‌ನ ಪರಿಣಾಮಕಾರಿ ಆನ್ ಮತ್ತು ಆಫ್ ರೋಡ್ ಸಾಮರ್ಥ್ಯದ ಬಗ್ಗೆ ಸಂತೋಷ್ ಅಚ್ಚರಿ ವ್ಯಕ್ತಪಡಿಸುತ್ತಾರೆ.

ಆಗಲೇ ರಾಲಿ ಬೈಕ್ ಗಳ ಬಳಕೆಯಲ್ಲಿ ನಿಸ್ಸೀಮರಾಗಿರುವ ಸಂತೋಷ್, ಹಿಮಾಲಯನ್ ಅಡ್ವೆಂಚರ್ ಬೈಕ್‌ನ ಪರಿಪೂರ್ಣ ಆಸನ ವ್ಯವಸ್ಥೆಯಿಂದ ಪ್ರಭಾವಿತರಾಗಿದ್ದಾರೆ. ಸಾಮಾನ್ಯ ಸವಾರರೂ ಮೋಟಾರ್ ಸೈಕಲ್ ನಿರ್ವಹೆ ಬಗ್ಗೆ ಭಯಭೀತಿಪಡುವ ಅಗತ್ಯವಿಲ್ಲ ಎಂದಿದ್ದಾರೆ.

Most Read Articles

Kannada
English summary
CS Santosh, the first Indian to complete The Dakar Rally shares his thoughts and experiences on the Royal Enfield Himalayan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X