ಬೆಂಗಳೂರಿಗೆ ಪ್ರವೇಶಿಸಿದ ಕನಸಿನ ಬೈಕ್; ಯಾವುದು ಗೊತ್ತೇ?
ನಮ್ಮ ಉದ್ಯಾನ ನಗರಿ ಬೆಂಗಳೂರಿಗೆ ಕನಸಿನ ಬೈಕ್ ವೊಂದರ ಪ್ರವೇಶವಾಗಿದೆ. ವಾಹನ ಪ್ರೇಮಿಗಳು ತಮ್ಮ ಕನಸಿನಲ್ಲಿ ಮಾತ್ರ ಕಾಣಸಿಗುವ ಇಟಲಿಯ ಐಕಾನಿಕ್ ಡುಕಾಟಿಯ ಅತಿ ದುಬಾರಿ ಬೈಕ್ ಬೆಂಗಳೂರಿಗೆ ಎಂಟ್ರಿ ಕೊಟ್ಟಿದೆ.
ಡುಕಾಟಿ 959 ಪನಿಗಲ್ ಸೂಪರ್ ಬೈಕ್ ಬೆಂಗಳೂರಿಗೆ ಪ್ರವೇಶಿಸಿದ್ದು, ಎಕ್ಸ್ ಶೋ ರೂಂ ಬೆಲೆ ಪ್ರಕಾರ 14.21 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ.

ಯುಬಿ ಸಿಟಿ ಮಾಲ್ ನಲ್ಲಿರುವ ಡುಕಾಟಿ ಶೋ ರೂಂನಲ್ಲಿ ನೂತನ 959 ಪನಿಗಲ್ ಪ್ರದರ್ಶನಕ್ಕಿಡಲಾಗಿದೆ. ಸದ್ಯಕ್ಕೆ ಇದು ಡುಕಾಟಿ ರೆಡ್ ಮತ್ತು ಬ್ಯಾಕ್ಸ್ ವೀಲ್ ನಲ್ಲಿ ಲಭ್ಯವಾಗಲಿದೆ.

ಬೆಂಗಳೂರು ಅಲ್ಲದೆ ನವದೆಹಲಿ, ಗುರ್ಗಾಂಗ್, ಮುಂಬೈ ಮತ್ತು ಪುಣೆ ಡೀಲರ್ ಶಿಪ್ ಗಳಲ್ಲೂ ಡುಕಾಟಿ 959 ಪನಿಗಲ್ ಲಭ್ಯವಾಗಲಿದೆ. ವರ್ಷಾಂತ್ಯದೊಳಗೆ ಮತ್ತೆರಡು ಡೀಲರ್ ಶಿಪ್ ತೆರೆಯುವ ಇರಾದೆ ಹೊಂದಿದೆ.

955 ಸಿಸಿ ಎಲ್ ಟ್ವಿನ್ ಸಿಲಿಂಡರ್ ಡೆಸ್ಮೊಡ್ರಾಮಿಕ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ 959 ಪನಿಗಲ್, 107.4 ಎನ್ ಎಂ ತಿರುಗುಬಲದಲ್ಲಿ 157 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಬಾಷ್ ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ ಇದರಲ್ಲಿರುತ್ತದೆ. ಇನ್ನುಳಿದಂತೆ ಎಂಟು ಮಟ್ಟದ ಟ್ರಾಕ್ಷನ್ ಕಂಟ್ರೋಲ್, ಎಂಜಿನ್ ಬ್ರೇಕ್ ಕಂಟ್ರೋಲ್, ಡುಕಾಟಿ ಕ್ಯೂಕ್ ಶಿಫ್ಟ್, ಡುಕಾಟಿ ಡಾಟಾ ಅನಾಲೈಜರ್, ತ್ರಿ ರೈಡಿಂಗ್ ಮೋಡ್, ಪೈರಲ್ಲಿ ಡಯಾಬ್ಲೊ ರೊಸ್ಸೊ ಕೋರ್ಸಾ ಚಕ್ರಗಳನ್ನು ಕಾಣಬಹುದಾಗಿದೆ.

ಇದಕ್ಕೂ ಮೊದಲು ಫೆಬ್ರವರಿ ತಿಂಗಳಲ್ಲಿ ಗೋವಾದಲ್ಲಿ ನಡೆದ 2016 ಇಂಡಿಯಾ ಬೈಕ್ ವೀಕ್ ನಲ್ಲಿ ಡುಕಾಟಿ ಶಕ್ತಿಶಾಲಿ ಬೈಕ್ ಬಿಡುಗಡೆಯಾಗಿತ್ತು.

ನೂತನ ಡುಕಾಟಿ 959 ಪನಿಗಲ್ ಸಂಪೂರ್ಣವಾಗಿ ಹೊಂದಾಣಿಸಬಹುದಾದ ಶೋವಾ ಟೆಲಿಸ್ಕಾಪಿಕ್ ಫ್ರಂಟ್ ಫಾರ್ಕ್ ಜೊತೆ 120 ಎಂಎಂ ಟ್ರಾವೆಲ್ ಮತ್ತು ಹಿಂದುಗಡೆ 120 ಎಂಎಂ ಟ್ರಾವೆಲ್ ಸ್ಯಾಚ್ ಮೊನೊಶಾಕ್ ಪಡೆಯಲಿದೆ.

ಅಂತೆಯೇ ಮುಂದುಗಡೆ 320 ಎಂಎಂ ಸೆಮಿ ಫ್ಲೋಟಿಂಗ್ ಡಿಸ್ಕ್ ಬ್ರೇಕ್ ಹಾಗೂ ಹಿಂಬದಿಯಲ್ಲಿ 245 ಎಂಎಂ ಡಿಸ್ಕ್ ಬ್ರೇಕ್ ಪಡೆಯಲಿದೆ.

ಆಯಾಮ (ಎಂಎಂ)
ಉದ್ದ 2056
ಅಗಲ 810
ಎತ್ತರ 1115
ಚಕ್ರಾಂತರ 1431
ಎತ್ತರ 830

ಭಾರ, ಇಂಧನ ಟ್ಯಾಂಕ್
ಭಾರ 190 ಕೆ.ಜಿ
ಇಂಧನ ಟ್ಯಾಂಕ್ ಸಾಮರ್ಥ್ಯ: 17 ಲೀಟರ್

ಪ್ರತಿಸ್ಪರ್ಧಿಗಳು
- ಯಮಹಾ ವೈಝಡ್ ಎಫ್-ಆರ್1
- ಹೋಂಡಾ ಸಿಬಿಆರ್1000ಆರ್ ಆರ್
- ಸುಜುಕಿ ಜಿಎಸ್ ಎಕ್ಸ್ ಆರ್ 1000


Click it and Unblock the Notifications








