ಸ್ಮಾರ್ಟ್ ಆಗಿ ಓಡಿಸಲು 'ಸ್ಮಾರ್ಟ್ ಸ್ಕೂಟರ್'
'ಟೆಸ್ಲಾ ಆಫ್ ಸ್ಕೂಟರ್ಸ್' ಎಂದೇ ಪ್ರಸಿದ್ಧಿ ಪಡೆದಿರುವ ತೈವಾನ್ ಮೂಲದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಸಂಸ್ಥೆ ಗೊರಗೊ, ತನ್ನ ಮಾರಾಟವನ್ನು ಜಾಗತಿಕ ವಲಯಕ್ಕೆ ವಿಸ್ತರಿಸಲು ನಿರ್ಧರಿಸಿದೆ.
ಈ ಸಂಬಂಧ ಪ್ರತಿಷ್ಠಿತ ಬಾಷ್ ಅಂಗ ಸಂಸ್ಥೆಯಾಗಿರುವ ಕೂಪ್ ಜೊತೆ ಸಹಯೋಗ ಮಾಡಿಕೊಂಡಿದೆ. ಅಲ್ಲದೆ 200ರಷ್ಟು ಎಲೆಕ್ಟ್ರಿಕ್ ಸ್ಮಾರ್ಟ್ ಸ್ಕೂಟರ್ ಗಳನ್ನು ಬರ್ಲಿನ್ ನಲ್ಲಿ ಬಿಡುಗಡೆ ಮಾಡಿದೆ.

ವಿದ್ಯುತ್ ಚಾಲಿತ ಸ್ಕೂಟರ್ ಗಳ ಸಾಲಿನಲ್ಲಿ ಹೆಚ್ಚು ಪರಿಣಾಮಕಾರಿಯೆನಿಸಿಕೊಂಡಿರುವ ಸ್ಮಾರ್ಟ್ ಸ್ಕೂಟರ್ ಗಳು ತೆಗೆಯಬಹುದಾದ ಬ್ಯಾಟರಿಗಳಿಂದ ನಿಯಂತ್ರಿಸಲ್ಪಡುತ್ತಿದ್ದು, ಗಂಟೆಗೆ 60 ಮೈಲುಗಳಷ್ಟು ಇಂಧನ ಕ್ಷಮತೆಯನ್ನು ನೀಡಲಿದೆ.

ಆಕರ್ಷಕ ಹ್ಯಾಂಡಲ್ ಬಾರ್ ಗಳ ಹೊರತಾಗಿ ಡಿಜಿಟಲ್ ಡ್ಯಾಶ್ ಬೋರ್ಡ್ ವ್ಯವಸ್ಥೆಯನ್ನು ಜೋಡಣೆ ಮಾಡಲಾಗಿದೆ. ಇದು ಸುಲಭ ಪ್ರಯಾಣವನ್ನು ಖಾತ್ರಿಪಡಿಸಲಿದೆ.

ಸ್ಮಾರ್ಟ್ ಸ್ಕೂಟರ್ ಎಂಬ ಹೆಸರಿನಲ್ಲೇ ಸೂಚಿಸಿರುವಂತೆಯೇ ನಿಮ್ಮ ಸ್ಮಾರ್ಟ್ ಫೋನನ್ನು ಸ್ಕೂಟರ್ ಗೆ ಸಂಪರ್ಕಿಸುವ ಮೂಲಕ ಕೆಲವೊಂದು ವೈಶಿಷ್ಟ್ಯಗಳನ್ನು ನಿರ್ವಹಿಸಬಹುದಾಗಿದೆ. ಇದಕ್ಕಾಗಿ ಗೊರಗೊ ವಿಶೇಷ ಸೇವೆಯು ಲಭ್ಯವಿರುತ್ತದೆ.

ಗೊರಗೊ ಆಪ್ ಸೇವೆಯ ಮುಖಾಂತರ ಹೆಡ್ ಲೈಟ್ ಮತ್ತು ಟೈಲ್ ಲೈಟ್ ಗಳನ್ನು ನಿಯಂತ್ರಿಸಬಹುದಾಗಿದೆ. ಉದಾಹರಣೆಗೆ ನೀವು ಸ್ಕೂಟರ್ ಸ್ಟ್ಯಾರ್ಟ್ ಮಾಡುತ್ತಿದ್ದರೆ ಲೈಟ್ಸ್ ಗಳು ಪದೇ ಪದೇ ಮಿನುಗುವಂತೆ ಮಾಡಬಹುದಾಗಿದೆ.

ಇನ್ನು ಚಾಲಕರು ತಮ್ಮ ಸ್ಮಾರ್ಟ್ ಫೋರ್ನ್ ನಿಂದ ಚಾಲನಾ ಸ್ಥಿತಿಗೆ ಸಂಬಂಧಪಟ್ಟಂತೆ ಮಾಹಿತಿಗಳನ್ನು ಗಿಟ್ಟಿಸಿಕೊಳ್ಳಬಹುದಾಗಿದೆ.

ಪ್ರಸ್ತುತ 200ರಷ್ಟು ಸ್ಮಾರ್ಟ್ ಸ್ಕೂಟರನ್ನು ಬರ್ಲಿನ್ ನಲ್ಲಿ ಬಾಡಿಗೆಗೆ ಬಿಡಲಾಗಿದೆ. ಇದು ಕಾರು ಪೂಲಿಂಗ್ ತರಹನೇ ಸೇವೆ ಸಲ್ಲಿಸಲಿದೆ. ಇಲ್ಲಿ ದೊರಕುವ ಯಶಸ್ಸಿನ ಆಧಾರದಲ್ಲಿ ತನ್ನ ಸೇವೆಯನ್ನು ಇತರ ದೇಶಗಳಿಗೂ ವಿಸ್ತರಿಸಲಿದೆ.


Click it and Unblock the Notifications








