ಹೋಂಡಾ ಶಕ್ತಿಶಾಲಿ 150ಸಿಸಿ ಸ್ಕೂಟರ್ ಬಿಡುಗಡೆಗೆ ರೆಡಿ
ಈ ಮೊದಲೇ ತಿಳಿಸಿರುವಂತೆಯೇ ಜಪಾನ್ ಮೂಲದ ಹೋಂಡಾ ಮೋಟಾರ್ ಸೈಕಲ್ಸ್ ಆಂಡ್ ಸ್ಕೂಟರ್ ಇಂಡಿಯಾ ಸಂಸ್ಥೆಯು 2016 ಆಟೋ ಎಕ್ಸ್ ಪೋದಲ್ಲಿ ಹೊಸ ಹೊಸ ಕಾನ್ಸೆಪ್ಟ್ ಮಾದರಿಗಳನ್ನು ಪ್ರದರ್ಶಿಸಲಿದೆ.
ಈ ಪೈಕಿ ಕೆಲವು ನಿರ್ಮಾಣ ಸಿದ್ಧ ವಾಹನಗಳು ಹೆಚ್ಚಿನ ಆಕರ್ಷಣೆಗೆ ಪಾತ್ರವಾಗಲಿದೆ. ಬಲ್ಲ ಮೂಲಗಳ ಪ್ರಕಾರ 2016 ಆಟೋ ಎಕ್ಸ್ ಪೋದಲ್ಲಿ ಹೋಂಡಾದ ಶಕ್ತಿಶಾಲಿ 150 ಸಿಸಿ ಸ್ಕೂಟರ್ ಬಿಡುಗಡೆಯಾಗಲಿದೆ.

ಅಂತರಾಷ್ಟ್ರೀಯವಾಗಿ ಪಿಸಿಎಕ್ಸ್150 ಎಂದು ಅರಿಯಲ್ಪಡುವ ನೂತನ ಹೋಂಡಾ ಸ್ಕೂಟರ್ ಅದೇ ಹೆಸರನ್ನು ಉಳಿಸಿಕೊಳ್ಳಲಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ. ಯಾಕೆಂದರೆ ಹೊಸ ವರ್ಷವನ್ನು 'ಹ್ಯಾಪಿ ನವಿ ಇಯರ್' ಎಂದು ಹೆಸರಿಸಿರುವ ಹೋಂಡಾ ಇಲ್ಲಿ ನೂತನ ಬ್ರಾಂಡ್ ಹೆಸರನ್ನು ಬಹಿರಂಗಪಡಿಸಿದೆ.
ಇಲ್ಲಿ 'ನವಿ' ಎಂಬುದು ಹೋಂಡಾದ ಹೊಸ ಸ್ಕೂಟರ್ ಹೆಸರಾಗಿರಲಿದೆ. ಹೋಂಡಾ 150 ಸಿಸಿ ಸ್ಕೂಟರ್ ಇದೇ ಹೆಸರು ಪಡೆಯಲಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.
ಹೋಂಡಾ ನೂತನ ಸ್ಕೂಟರ್ ಪ್ರಮುಖವಾಗಿಯೂ ವೆಸ್ಪಾ ವಿಎಕ್ಸ್ ಎಲ್ 150 ಹಾಗೂ ಎಸ್‌ಎಕ್ಸ್ ಎಲ್ 150 ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಲಿದೆ.


Click it and Unblock the Notifications








