ಭಾರತದಲ್ಲೂ ಹೋಂಡಾ 50 ಸಿಸಿ 'ಮೆಟ್ರೋಪಾಲಿಟನ್' ಸ್ಕೂಟರ್ ಬಿಡುಗಡೆ?

By Nagaraja

ಬೈಕ್ ಮಾತ್ರವಲ್ಲದೆ ಸ್ಕೂಟರ್ ವಿಭಾಗದಲ್ಲೂ ಪ್ರಭಾವಿ ಎನಿಸಿಕೊಂಡಿರುವ ದೇಶದ ಎರಡನೇ ಅತಿ ದೊಡ್ಡ ದ್ವಿಚಕ್ರ ಸಂಸ್ಥೆ ಹೋಂಡಾ ಟು ವೀಲರ್ಸ್ ಆಂಡ್ ಸ್ಕೂಟರ್ಸ್ ಇಂಡಿಯಾ ಸಂಸ್ಥೆಯು ಮಗದೊಂದು ಆಕರ್ಷಕ ಸ್ಕೂಟರ್ ಬಿಡುಗಡೆ ಮಾಡುವ ತಯಾರಿಯಲ್ಲಿ ತೊಡಗಿಸಿಕೊಂಡಿದೆ.

ಆಕ್ಟಿವಾದಂತಹ ದೇಶದ ನಂ.1 ಸ್ಕೂಟರ್ ನಿರ್ಮಾಣದ ಹೆಗ್ಗಳಿಕೆಗೆ ಪಾತ್ರವಾಗಿರುವ ಹೋಂಡಾ, ಈಗ ಹೊಸತಾದ ಮೆಟ್ರೋಪಾಲಿಟನ್ ಬಿಡುಗಡೆ ಮಾಡುವ ಇರಾದೆಯಲ್ಲಿದೆ. ಇದು ಕೇವಲ 50 ಸಿಸಿ ಇಎಫ್ ಐ ಎಂಜಿನ್ ಪಡೆಯಲಿದೆಯೆಂದರೆ ನಂಬಲಾರ್ಹವೇ?

ಭಾರತದಲ್ಲೂ ಹೋಂಡಾ 50 ಸಿಸಿ 'ಮೆಟ್ರೋಪಾಲಿಟನ್' ಸ್ಕೂಟರ್ ಬಿಡುಗಡೆ?

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೋಂಡಾ ಮೆಟ್ರೋಪಾಲಿಟನ್, 50 ಸಿಸಿ ಫ್ಯೂಯಲ್ ಇಂಜೆಕ್ಟಡ್ ಫೋರ್ ಸ್ಟ್ರೋಕ್ ಸಿಂಗಲ್ ಸಿಲಿಂಡರ್ ಎಂಜಿನ್ ಪಡೆದಿದೆ. ಆದರೆ ಭಾರತದಲ್ಲಿ ಆಕ್ಟಿವಾಗೆ ಸಮಾನವಾದ ಹೆಚ್ಚು ವಿಶ್ವಾಸಾರ್ಹ 110 ಸಿಸಿ ಎಂಜಿನ್ ಪಡೆಯುವ ಸಾಧ್ಯತೆಯಿದೆ.

ಭಾರತದಲ್ಲೂ ಹೋಂಡಾ 50 ಸಿಸಿ 'ಮೆಟ್ರೋಪಾಲಿಟನ್' ಸ್ಕೂಟರ್ ಬಿಡುಗಡೆ?

ಹೋಂಡಾ ಆಕ್ಟಿವಾದಲ್ಲಿರುವ 109.2 ಸಿಸಿ ಎಂಜಿನ್ 8.83 ಎನ್ ಎಂ ತಿರುಗುಬಲದಲ್ಲಿ 8 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಇದು ವಿ-ಮ್ಯಾಟಿಕ್ ಗೇರ್ ಬಾಕ್ಸ್ ಪಡೆದಿದ್ದು, ಗಂಟೆಗೆ ಗರಿಷ್ಠ 82 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ.

ಭಾರತದಲ್ಲೂ ಹೋಂಡಾ 50 ಸಿಸಿ 'ಮೆಟ್ರೋಪಾಲಿಟನ್' ಸ್ಕೂಟರ್ ಬಿಡುಗಡೆ?

ಆಧುನಿಕ ಸ್ಕೂಟರ್ ವಿಭಾಗದಲ್ಲೀಗ ಹಳೆಯ ಕ್ಲಾಸಿಕ್ ಶೈಲಿಯ ಮಾದರಿಗಳಿಗೆ ಬೇಡಿಕೆ ಹೆಚ್ಚುತ್ತಿದೆ. 2012ರಲ್ಲಿ ಪಿಯಾಜಿಯೊ ವೆಸ್ಪಾ ಪ್ರವೇಶ ಪಡೆದಾಗ ಅಭೂತಪೂರ್ವ ಬೆಂಬಲವು ಇಂತಹ ಬದಲಾವಣೆಗಳಿಗೆ ಪುಷ್ಠಿ ನೀಡುತ್ತದೆ.

ಭಾರತದಲ್ಲೂ ಹೋಂಡಾ 50 ಸಿಸಿ 'ಮೆಟ್ರೋಪಾಲಿಟನ್' ಸ್ಕೂಟರ್ ಬಿಡುಗಡೆ?

ತದಾ ಬಳಿಕ ಯಮಹಾ ಫಾಸಿನೊ ಮತ್ತು ಸುಜುಕಿ ಆಕ್ಸೆಸ್ 125 ಸಹ ಇದೇ ವಿಭಾಗಕ್ಕೆ ಸೇರಿಕೊಂಡಿತ್ತು. ಈ ಪೈಕಿ ಫಾಸಿನೊದಲ್ಲಿ ರೆಟ್ರೋ ಶೈಲಿಗೆ ಆದ್ಯತೆ ಕೊಟ್ಟಿದ್ದರೆ ಆಕ್ಸೆಸ್ ಹೆಚ್ಚು ಪ್ರೀಮಿಯಂ ವೈಶಿಷ್ಟ್ಯಗಳನ್ನು ಕಾಪಾಡಿಕೊಂಡಿತ್ತು.

ಭಾರತದಲ್ಲೂ ಹೋಂಡಾ 50 ಸಿಸಿ 'ಮೆಟ್ರೋಪಾಲಿಟನ್' ಸ್ಕೂಟರ್ ಬಿಡುಗಡೆ?

ರೆಟ್ರೋ ಶೈಲಿಯ ಸ್ಕೂಟರ್ ಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪರಿಗಣಿಸಿರುವ ಹೋಂಡಾ, ಭಾರತದಲ್ಲಿ ಮೆಟ್ರೋಪಾಲಿಟನ್ ಬಿಡುಗಡೆ ಮಾಡಲು ಹಕ್ಕು ಪತ್ರವನ್ನು ಗಿಟ್ಟಿಸಿಕೊಂಡಿದೆ.

ಭಾರತದಲ್ಲೂ ಹೋಂಡಾ 50 ಸಿಸಿ 'ಮೆಟ್ರೋಪಾಲಿಟನ್' ಸ್ಕೂಟರ್ ಬಿಡುಗಡೆ?

ವೃತ್ತಕಾರದ ನೋಟ, ವಿಶಿಷ್ಟ ಛಾಯಾರೂಪ, ಜಾಗರೂಕತೆಯಿಂದ ಆಳವಡಿಸಲಾಗಿರುವ ಉಪಕರಣಗಳು, ಕ್ರೋಮ್ ಸ್ಪರ್ಶತೆ ಇತ್ಯಾದಿ ವೈಶಿಷ್ಟ್ಯಗಳನ್ನು ನೀವಿಲ್ಲಿ ಕಾಣಬಹುದಾಗಿದೆ.

ಭಾರತದಲ್ಲೂ ಹೋಂಡಾ 50 ಸಿಸಿ 'ಮೆಟ್ರೋಪಾಲಿಟನ್' ಸ್ಕೂಟರ್ ಬಿಡುಗಡೆ?

ಇನ್ನುಳಿದಂತೆ ಈಗಿರುವ ಮೆಟ್ರೋಪಾಲಿಟನ್ ಆವೃತ್ತಿಯಲ್ಲಿರುವುದಕ್ಕೆ ಸಮಾನವಾದ ಸಸ್ಪೆನ್ಷನ್ ಮತ್ತು ಬ್ರೇಕ್ ವ್ಯವಸ್ಥೆಗಳು ಕಂಡುಬರಲಿದೆ.

ಭಾರತದಲ್ಲೂ ಹೋಂಡಾ 50 ಸಿಸಿ 'ಮೆಟ್ರೋಪಾಲಿಟನ್' ಸ್ಕೂಟರ್ ಬಿಡುಗಡೆ?

ಭಾರತದಲ್ಲಿದ್ದು ಆಕ್ಟಿವಾ 125 ಗಿಂತಲೂ ಕೆಳದರ್ಜೆಯಲ್ಲಿ ಗುರುತಿಸಿಕೊಳ್ಳಲಿದೆ. ಅಲ್ಲದೆ ಯಮಹಾ ಫಾಸಿನೋ, ಟಿವಿಎಸ್ ಜೂಪಿಟರ್ ಮತ್ತು ಹೀರೊ ಮ್ಯಾಸ್ಟ್ರೋ ಎಡ್ಜ್ ಮಾದರಿಗಳಿಗೆ ಪ್ರತಿಸ್ಪರ್ಧೆಯನ್ನು ಒಡ್ಡಲಿದೆ.

Article Published On: Thursday, July 7, 2016, 12:23 [IST]
English summary
Honda Looking At Launching Metropolitan Retro-Scooter In India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+