ಹೋಂಡಾ ಯೂನಿಕಾರ್ನ್ 150 ಕಮ್‌ಬ್ಯಾಕ್; ಬೆಲೆ, ವೈಶಿಷ್ಟ್ಯಗಳೇನು?

By Nagaraja

ಹಿಂದೊಮ್ಮೆ ಅತ್ಯಾಧುನಿಕ ಹಾಗೂ ಹೆಚ್ಚು ಇಂಧನ ಸಾಮರ್ಥ್ಯವುಳ್ಳ 160 ಸಿಸಿ ಯೂನಿಕಾರ್ನ್ ಮಾದರಿಗೆ ಹಾದಿ ಬಿಟ್ಟು ಕೊಡುವ ನಿಟ್ಟಿನಲ್ಲಿ ಹೋಂಡಾ ಯೂನಿಕಾರ್ನ್ 150 ಸಿಸಿ ಆವೃತ್ತಿಯು ಮಾರಾಟವನ್ನು ನಿಲುಗಡೆಗೊಳಿಸಲಾಗಿತ್ತು. ಆದರೆ ಇದೀಗ ಅತಿಯಾದ ಬೇಡಿಕೆಯ ಹಿನ್ನೆಲೆಯಲ್ಲಿ ನೂತನ 2016 ಹೋಂಡಾ ಯೂನಿಕಾರ್ನ್ 150 ಸಿಸಿ ಮಾದರಿಯು ಮಾರುಕಟ್ಟೆಗೆ ಭರ್ಜರಿ ರಿ ಎಂಟ್ರಿ ಕೊಟ್ಟಿದೆ.

2016 ಹೋಂಡಾ ಯೂನಿಕಾರ್ನ್ 150 ಸಿಸಿ ಮಾದರಿಯು ಈಗ ಮಾರಾಟದಲ್ಲಿರುವ ಹೋಂಡಾ ಯೂನಿಕಾರ್ನ್ 160 ಮತ್ತು ಸಿಬಿ ಹಾರ್ನೆಟ್ 160 ಸಿಸಿ ಬೈಕ್ ಗಳ ಜೊತೆಗೆ ಮಾರಾಟವನ್ನು ಮುಂದುವರಿಸಲಿದೆ.

ಹೋಂಡಾ ಯೂನಿಕಾರ್ನ್ 150 ಕಮ್‌ಬ್ಯಾಕ್; ಬೆಲೆ, ವೈಶಿಷ್ಟ್ಯಗಳೇನು?

2016 ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನ ಕಂಡಿರುವ 160 ಸಿಸಿ ಯೂನಿಕಾರ್ನ್ ಮಾರಾಟಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ 150 ಸಿಸಿ ಯೂನಿಕಾರ್ನ್ ಮಾರಾಟವನ್ನು ಹಿಂಪಡೆಯಲಾಗಿತ್ತು. ಆದರೆ ಇದೀಗ ಹೆಚ್ಚಿನ ಬೇಡಿಕೆಯ ಹಿನ್ನಲೆಯಲ್ಲಿ ಮರು ಪರಿಚಯಿಸಲು ದೇಶದ ಎರಡನೇ ಅತಿ ದೊಡ್ಡ ದ್ವಿಚಕ್ರ ವಾಹನ ಸಂಸ್ಥೆಯಾಗಿರುವ ಹೋಂಡಾ ಮೋಟಾರ್ ಸೈಕಲ್ಸ್ ಆಂಡ್ ಸ್ಕೂಟರ್ ಇಂಡಿಯಾ ಸಂಸ್ಥೆಯು ನಿರ್ಧರಿಸಿದೆ.

ಹೋಂಡಾ ಯೂನಿಕಾರ್ನ್ 150 ಕಮ್‌ಬ್ಯಾಕ್; ಬೆಲೆ, ವೈಶಿಷ್ಟ್ಯಗಳೇನು?

ನೂತನ 2016 ಹೋಂಡಾ ಯೂನಿಕಾರ್ನ್ 150 ಸಿಸಿ ಆವೃತ್ತಿಯು ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 69,305 ರು.ಗಳಷ್ಟು ದುಬಾರಿಯೆನಿಸಲಿದೆ.

ಹೋಂಡಾ ಯೂನಿಕಾರ್ನ್ 150 ಕಮ್‌ಬ್ಯಾಕ್; ಬೆಲೆ, ವೈಶಿಷ್ಟ್ಯಗಳೇನು?

ಹೋಂಡಾ ಯೂನಿಕಾರ್ನ್ 150 ಸಿಸಿ ಬೈಕ್, 2095 ಎಂಎಂ ಉದ್ದ, 1100 ಎಂಎಂ ಎತ್ತರ, 756 ಎಂಎಂ ಅಗಲ ಮತ್ತು 1340 ಎಂಎಂ ಚಕ್ರಾಂತರವನ್ನು ಪಡೆದಿದೆ.

ಹೋಂಡಾ ಯೂನಿಕಾರ್ನ್ 150 ಕಮ್‌ಬ್ಯಾಕ್; ಬೆಲೆ, ವೈಶಿಷ್ಟ್ಯಗಳೇನು?

ಅಂತೆಯೇ 146 ಕೆ.ಜಿ ಭಾರವನ್ನು ಹೊಂದಲಿರುವ ಹೋಂಡಾ ಯೂನಿಕಾರ್ನ್ 150 ಸಿಸಿ ಮಾದರಿಯು 179 ಎಂಎಂ ಗ್ರೌಂಡ್ ಕ್ಲಿಯರನ್ಸ್ ಪಡೆದಿದೆ.

ಹೋಂಡಾ ಯೂನಿಕಾರ್ನ್ 150 ಕಮ್‌ಬ್ಯಾಕ್; ಬೆಲೆ, ವೈಶಿಷ್ಟ್ಯಗಳೇನು?

149 ಸಿಸಿ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ನೂತನ ಹೋಂಡಾ ಯೂನಿಕಾರ್ನ್, 12.84 ಎನ್ ಎಂ ತಿರುಗುಬಲದಲ್ಲಿ 13.14 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಇದು ಐದು ಸ್ಪೀಡ್ ಗೇರ್ ಬಾಕ್ಸ್ ಸಹ ಹೊಂದಿದೆ.

ಹೋಂಡಾ ಯೂನಿಕಾರ್ನ್ 150 ಕಮ್‌ಬ್ಯಾಕ್; ಬೆಲೆ, ವೈಶಿಷ್ಟ್ಯಗಳೇನು?

2015 ಜೂನ್ ತಿಂಗಳಿಗೆ ಹೋಲಿಸಿದಾಗ ಹೋಂಡಾ ಮೋಟಾರ್ ಸೈಕಲ್ಸ್ ಮಾರಾಟವು ಶೇಕಡಾ 27 ರಷ್ಟು ಏರಿಕೆ ಕಂಡಿದ್ದು, ಒಟ್ಟು 1,42,702 ಯುನಿಟ್ ಗಳ ಮಾರಾಟವನ್ನು ದಾಖಲಿಸಿದೆ. ಅಂತೆಯೇ ಇದೇ ಅವಧಿಯಲ್ಲಿ ಸ್ಕೂಟರ್ ಮಾರಾಟದಲ್ಲೂ ಶೇಕಡಾ 21ರಷ್ಟು ಏರಿಕೆ ಕಂಡು 2,65,439 ಯುನಿಟ್ ಗಳ ಮಾರಾಟವನ್ನು ಸಾಧಿಸಿದೆ.

More from DriveSpark

Article Published On: Wednesday, July 13, 2016, 11:02 [IST]
English summary
2016 Honda Unicorn Re-Launched In India For Rs. 69,305/-
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+