ಅಬ್ಬಬ್ಬಾ...30 ಲಕ್ಷ ರು.ಗಳಷ್ಟು ದುಬಾರಿಯ ಇಂಡಿಯನ್ ಲಗ್ಷುರಿ ಬೈಕ್ ಬಿಡುಗಡೆ
ಅಮೆರಿಕ ಮೂಲದ ಐಕಾನಿಕ್ ದ್ವಿಚಕ್ರ ವಾಹನ ಸಂಸ್ಥೆ ಇಂಡಿಯನ್ ಮೋಟಾರ್ ಸೈಕಲ್ಸ್, ಅತಿ ನೂತನ 2016 ಇಂಡಿಯನ್ ಸ್ಪ್ರಿಂಗ್ ಫೀಲ್ಡ್ ಬೈಕನ್ನ ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಮೂಲಕ ತನ್ನ ಶ್ರೇಣಿಯ ಬೈಕ್ ಗಳನ್ನು ವಿಸ್ತರಿಸಿದೆ.
ಬೆಲೆ ಮಾಹಿತಿ: 30.6 ಲಕ್ಷ ರು. (ದೆಹಲಿ ಎಕ್ಸ್ ಶೋ ರೂಂ)
ಶ್ರೀಮಂತ ಜೀವನ ಶೈಲಿಯ ಪ್ರತಿಬಿಂಬವಾಗಿರುವ ಇಂಡಿಯನ್ ಮೋಟಾರ್ ಸೈಕಲ್ ಸ್ಪ್ರಿಂಗ್ ಫೀಲ್ಡ್ ಭಾರತದಲ್ಲಿ 30.6 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ.

ಇಂಡಿಯನ್ ಮೋಟಾರ್ ಸೈಕಲ್ ಉಗಮಸ್ಥಾನವಾಗಿರುವ ಸ್ಪ್ರಿಂಗ್ ಫೀಲ್ಡ್ ಹೆಸರನ್ನು ನೂತನ ಬೈಕ್ ಇಡಲಾಗಿದೆ.

ಆಧುನಿಕ ತಂತ್ರಜ್ಞಾನ ಮತ್ತು ಕ್ಲಾಸಿಕ್ ಶೈಲಿಯ ಸಂಯೋಜನೆಯನ್ನು ನೀವಿಲ್ಲಿ ಕಾಣಬಹುದಾಗಿದೆ. ತನ್ಮೂಲಕ ಪರಿಪೂರ್ಣ ಟೂರಿಂಗ್ ಬೈಕ್ ಮಹಿಮೆಯನ್ನು ಕಾಪಾಡಿಕೊಂಡಿದೆ.

ಆಸಕ್ತ ಗ್ರಾಹಕರು ತಮ್ಮ ಕನಸಿನ ಬೈಕನ್ನು ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದ್ದು, 2016 ಆಗಸ್ಟ್ ತಿಂಗಳಿಂದ ವಿತರಣೆ ನಡೆಯಲಿದೆ.

ಭಾರತೀಯ ದ್ವಿಚಕ್ರ ವಿಭಾಗವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ಇರಾದೆಯಲ್ಲಿರುವ ಇಂಡಿಯನ್ ಮೋಟಾರ್ ಸೈಕಲ್ಸ್ ಲಗ್ಷುರಿ ಬೈಕ್ ಗಳನ್ನು ಬಿಡುಗಡೆ ಮಾಡಿದೆ. ಹಾಗೆಯೇ ದೇಶದಲ್ಲಿ ತನ್ನ ಪ್ರತಿಷ್ಠೆಯನ್ನು ಕಾಪಾಡಿಕೊಳ್ಳಲಿದೆ.

ಟೂರರ್ ಆಧಾರಿತ ಸ್ಟೀರಿಂಗ್ ಜಿಯೋಮೆಟ್ರಿಗಳಂತಹ ಅತ್ಯಾಧುನಿಕ ತಂತ್ರಜ್ಞಾನಗಳು ಸವಾರನಿಗೆ ಅತ್ಯುತ್ತಮ ಹ್ಯಾಂಡ್ಲಿಂಗ್ ಪ್ರದಾನ ಮಾಡಲಿದ್ದು, ಪ್ರವಾಸದುದ್ಧಕ್ಕೂ ಅದ್ಭುತ ಚಾಲನಾ ಅನುಭವ ನೀಡಲಿದೆ.

ಇಂಡಿಯನ್ ಸ್ಪ್ರಿಂಗ್ ಫೀಲ್ಡ್ ಮೋಟಾರ್ ಸೈಕಲ್ ಥಂಡರ್ ಸ್ಟ್ರೋಕ್ 111 ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದೆ. ಇದರ ಶಕ್ತಿಶಾಲಿ 1811 ಸಿಸಿ ವಿ ಟ್ವಿನ್ ಎಂಜಿನ್ 138.9 ಎನ್ ಎಂ ತಿರುಗುಬಲದಲ್ಲಿ 76 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಅಲ್ಲದೆ ಬರೋಬ್ಬರಿ 421 ಕೆ.ಜಿ ಗಳಷ್ಟು ತೂಕ ಹೊಂದಿರುವ ಇಂಡಿಯನ್ ಮೋಟಾರ್ ಸೈಕಲ್ಸ್ ಸ್ಪ್ರಿಂಗ್ ಫೀಲ್ಡ್ ನಲ್ಲಿ ಆರು ಸ್ಪೀಡ್ ಗೇರ್ ಬಾಕ್ಸ್ ಇರಲಿದೆ.

ಹ್ಯಾಂಡ್ಲಿಂಗ್ ಸಾಮರ್ಥ್ಯದಲ್ಲಿ ಯಾವುದೇ ರಾಜಿಗೂ ತಯಾರಾಗದ ಇಂಡಿಯನ್ ಸ್ಪ್ರಿಂಗ್ ಫೀಲ್ಡ್ ವೈಡ್ ಲೋಡ್ ರೇಂಜ್ ಚಾಸೀ, ಕ್ಯಾಟ್ರಿಡ್ಜ್ ಫಾರ್ಕ್, ಏರ್ ಅಡ್ಜಸ್ಟಬಲ್ ರಿಯರ್ ಶಾಕ್ ಮುಂತಾದ ವ್ಯವಸ್ಥೆಗಳಿರಲಿದೆ.

ವೈಶಿಷ್ಟಗಳ ಬಗ್ಗೆ ಮಾತನಾಡುವುದಾದ್ದಲ್ಲಿ ಬೇಗನೆ ತೆರವುಗೊಳಿಸಬಹುದಾದ ವಿಂಡ್ ಶೀಲ್ಡ್, ರಿಮೋಟ್ ಲಾಕಿಂಗ್ ಹಾರ್ಡ್ ಬ್ಯಾಗ್, ಹೊಂದಾಣಿಸಬಹುದಾದ ಪ್ರಯಾಣಿಕ ಫ್ಲೋರ್ ಬೋರ್ಡ್ ಇತ್ಯಾದಿ ಸೌಲಭ್ಯಗಳಿರಲಿದೆ.

ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಹೈ ರೆಸುಲ್ಯೂಷನ್ ಆ್ಯಂಟಿ ಲಾಕ್ ಬ್ರೇಕ್ಸ್, ಟೈರ್ ಪ್ರೆಶರ್ ಮಾನಿಟರಿಂಗ್, ಎಲೆಕ್ಟ್ರಾನಿಕ್ ಕ್ರೂಸ್ ಕಂಟ್ರೋಲ್, ಪವರ್ ಫುಲ್ ಹೆಡ್ ಲೈಟ್, ಕೀಲೆಸ್ ಸ್ಟ್ಯಾರ್ಟ್ ಮತ್ತು ಡ್ಯುಯಲ್ ಡ್ರೈವಿಂಗ್ ಲೈಟ್ಸ್ ವ್ಯವಸ್ಥೆಗಳಿರಲಿದೆ.

ಅಂದ ಹಾಗೆ ಅಮೆರಿಕದ ಈ ಐಕಾನಿಕ್ ಕ್ರೂಸರ್ ಬೈಕ್ ಥಂಡರ್ ಬ್ಲ್ಯಾಕ್ ಮತ್ತು ಇಂಡಿಯನ್ ರೆಡ್ ಗಳೆಂಬ ಎರಡು ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿರುತ್ತದೆ.

ಅಂತೆಯೇ ಇಂಡಿಯನ್ ಶ್ರೇಣಿಯ ಇತರೆ ಬೈಕ್ ಗಳಾದ ಚೀಫ್ಟೈನ್ ಮತ್ತು ಚೀಫ್ ವೀಂಟೇಜ್ ನಡುವೆ ಸ್ಪ್ರಿಂಗ್ ಫೀಲ್ಡ್ ಗುರುತಿಸಿಕೊಳ್ಳಲಿದೆ.

ಭಾರತದಲ್ಲಿ ಸದ್ಯಕ್ಕೆ ಇಂಡಿಯನ್ ಸ್ಕೌಟ್, ಚೀಪ್ ಡಾರ್ಡ್ ಹಾರ್ಸ್, ಚೀಫ್ ಕ್ಲಾಸಿಕ್, ಚೀಫ್ ವಿಂಟೇಜ್, ಚೀಫ್ಟೈನ್, ರೋಡ್ ಮಾಸ್ಟರ್ ಜೊತೆಗೀಗ ನೂತನ ಸ್ಪ್ರೀಂಗ್ ಫೀಲ್ಡ್ ಸೇರ್ಪಡೆಯಾಗಿದೆ.


Click it and Unblock the Notifications








