ಬೈಕ್ ಟ್ಯಾಕ್ಸಿ ಕಾನೂನುಬಾಹಿರ; ಬಳಕೆ ಮಾಡದಿರಲು ಸರಕಾರ ಎಚ್ಚರ!
ಓಲಾ ಮತ್ತು ಉಬೆರ್ ಖಾಸಗಿ ಸಂಸ್ಥೆಗಳು ಆರಂಭಿಸಿರುವ ಬೈಕ್ ಟ್ಯಾಕ್ಸಿ ಕಾನೂನುಬಾಹಿರ ಎಂದು ಉಲ್ಲೇಖಿಸಿರುವ ರಾಜ್ಯ ಸರಕಾರವು, ಇದರ ಸೇವೆಯನ್ನು ಬಳಕೆ ಮಾಡದಂತೆ ಸಾರ್ವಜನಿಕರನ್ನು ಎಚ್ಚರಿಸಿದೆ.
ಬೈಕ್ ಟ್ಯಾಕ್ಸಿ ಬಳಕೆಗೆ ಪರವಾನಗಿ ಪಡಯಬೇಕಾಗುತ್ತದೆ. ಆದರೆ ಈ ಎರಡೂ ಸಂಸ್ಥೆಗಳು ಸರಕಾರದಿಂದ ಯಾವುದೇ ಪರವಾನಗಿ ಪತ್ರವನ್ನು ಪಡೆದಿಲ್ಲ ಎಂಬುದನ್ನು ರಾಜ್ಯ ಸಾರಿಗೆ ಇಲಾಖೆ ದೃಢೀಕರಿಸಿದೆ. ಅಲ್ಲದೆ ಅನುಮತಿಯಿಲ್ಲದೆ ಬೈಕ್ ಸೇವೆಯನ್ನು ಆರಂಭಿಸಿರುವ ಈ ಸಂಸ್ಥೆಗಳ ವಿರುದ್ಧ ಶಿಸ್ತು ಕ್ರಮಕ್ಕೆ ಮುಂದಾಗುತ್ತಿದೆ.

1988ರ ಮೋಟಾರು ಕಾಯ್ದೆ ಪ್ರಕಾರ ದ್ವಿಚಕ್ರ ವಾಹನಗಳು ಖಾಸಗಿ ಬಳಕೆ ವಾಹನಗಳಾಗಿ ಪರಿಗಣಿಸಲ್ಪಟ್ಟಿದೆ. ಇದನ್ನು ವಾಣಿಜ್ಯ ಬಳಕೆಗಾಗಿ ಉಪಯೋಗಿಸುವುದಾದ್ದಲ್ಲಿ ಪರವಾನಗಿಯ ಅಗತ್ಯವಿರುತ್ತದೆ. ಇಲ್ಲವಾದ್ದಲ್ಲಿ ಅಪರಾಧವಾಗುತ್ತದೆ. ಇನ್ನೊಂದೆಡೆ ಯಾವುದೇ ವಿಮಾ ಸೌಲಭ್ಯವೂ ಇದರಲ್ಲಿ ಲಭ್ಯವಾಗಿರುವುದಿಲ್ಲ ಎಂಬುದು ಗಮನಾರ್ಹವೆನಿಸುತ್ತದೆ.
ಒಟ್ಟಿನಲ್ಲಿ ಈ ಬಗ್ಗೆ ಓಲಾ ಹಾಗೂ ಉಬೆರ್ ಸಂಸ್ಥೆಗಳಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲವಾದರೂ ಇದು ಪೈಲಟ್ ಸೇವೆಯಾಗಿರುವುದರಿಂದ ಯಾವುದೇ ಪರವಾನಗಿಯ ಅಗತ್ಯವಿರುವುದಿಲ್ಲ ಎಂದು ಓಲಾ ಬಿಡುಗಡೆಯ ಸಂದರ್ಭದಲ್ಲಿ ತಿಳಿಸಿತ್ತು.


Click it and Unblock the Notifications