ಎನ್‌ಫೀಲ್ಡ್‌ಗೆ ಟಕ್ಕರ್ ನೀಡಲು ಬರುತ್ತಿದೆ ಕವಾಸಕಿ ಎಸ್ಟ್ರೆಲ್ಲಾ

Written By:

ಐಕಾನಿಕ್ ರಾಯಲ್ ಎನ್ ಫೀಲ್ಡ್ ಬುಲೆಟ್ ಗಳಿಗೆ ಪ್ರತಿಸ್ಪರ್ಧಿಯೊಂದು ಸಿದ್ಧಗೊಳುತ್ತಿದೆ. ನಿಮಗೆಲ್ಲರಿಗೂ ದೇಶದಲ್ಲಿರುವ ಕವಾಸಕಿ ನಿಂಜಾ ಬೈಕ್ ಗಳ ಬಗ್ಗೆ ತಿಳಿದೇ ಇದೆ. ಈಗ ತನ್ನ ಶ್ರೇಣಿಯ ದ್ವಿಚಕ್ರ ವಾಹನಗಳನ್ನು ವಿಸ್ತರಿಸಲಿರುವ ಜಪಾನ್‌ನ ಪ್ರಖ್ಯಾತ ಕವಾಸಕಿ, ಇತಿಹಾಸ ಪ್ರಸಿದ್ಧ ರಾಯಲ್ ಎನ್ ಫೀಲ್ಡ್ ಬುಲೆಟ್ ಗಳಿಗೆ ಪ್ರತಿಸ್ಪರ್ಧಿಯನ್ನು ಕಣಕ್ಕಿಳಿಸಲಿದೆ.

ಕವಾಸಕಿ ಎಸ್ಟ್ರೆಲ್ಲಾ ಅಧ್ಯಯನ ಮತ್ತು ಅಭಿವೃದ್ಧಿ (ಆರ್ ಆಂಡ್ ಡಿ) ಅಗತ್ಯಗಳಿಗಾಗಿ ಭಾರತಕ್ಕೆ ತರಲಾಗಿದೆ. ಇದು ನಿಕಟ ಭವಿಷ್ಯದಲ್ಲೇ ಭಾರತಕ್ಕೆ ಪ್ರವೇಶಿಸುವ ಎಲ್ಲ ಸಾಧ್ಯತೆಗಳು ನಿಚ್ಚಳವಾಗಿದೆ.

ಎನ್‌ಫೀಲ್ಡ್‌ಗೆ ಟಕ್ಕರ್ ನೀಡಲು ಬರುತ್ತಿದೆ ಕವಾಸಕಿ ಎಸ್ಟ್ರೆಲ್ಲಾ

250ಸಿಸಿಯಿಂದ 350 ಸಿಸಿ ಸೆಗ್ಮೆಂಟ್ ಮಾರುಕಟ್ಟೆ ಬೆಳವಣಿಗೆಯನ್ನು ನಿಕಟವಾಗಿ ಗಮನಿಸುತ್ತಿರುವ ಕವಾಸಕಿ, ಬಿಜೆ250 ಇತ್ಯಾದಿ ಮಾದರಿಗಳನ್ನು ಮಾರುಕಟ್ಟೆಗಿಳಿಸುವ ಯೋಜನೆಯಲ್ಲಿದೆ.

ಎನ್‌ಫೀಲ್ಡ್‌ಗೆ ಟಕ್ಕರ್ ನೀಡಲು ಬರುತ್ತಿದೆ ಕವಾಸಕಿ ಎಸ್ಟ್ರೆಲ್ಲಾ

ಒಂದು ವೇಳೆ ಕವಾಸಕಿ ವಾಹನಗಳನ್ನು ದೇಶಕ್ಕೆ ಪ್ರವೇಶಿಸಿದ್ದಲ್ಲಿ ರಾಯಲ್ ಎನ್ ಫೀಲ್ಡ್ ನ ಜನಪ್ರಿಯ ಬುಲೆಟ್ 350 ಮತ್ತು ಕ್ಲಾಸಿಕ್ 350 ಮಾದರಿಗಳಿಗೆ ನೇರ ಪ್ರತಿಸ್ಪರ್ಧಿಯಾಗಲಿದೆ.

ಎನ್‌ಫೀಲ್ಡ್‌ಗೆ ಟಕ್ಕರ್ ನೀಡಲು ಬರುತ್ತಿದೆ ಕವಾಸಕಿ ಎಸ್ಟ್ರೆಲ್ಲಾ

ಪುಣೆಯಲ್ಲಿರುವ ಘಟಕದಲ್ಲಿ ಕವಾಸಕಿ ಎಸ್ಟ್ರೆಲ್ಲಾ ಸ್ಥಳೀಯವಾಗಿ ನಿರ್ಮಿಸುವ ಯೋಜನೆಯನ್ನು ಕವಾಸಕಿ ಹೊಂದಿದ್ದು, ಈ ಮುಖಾಂತರ ಸ್ಪರ್ಧಾತ್ಮಕ ಬೆಲೆಯನ್ನು ಕಾಪಾಡಿಕೊಳ್ಳಲಿದೆ.

ಎನ್‌ಫೀಲ್ಡ್‌ಗೆ ಟಕ್ಕರ್ ನೀಡಲು ಬರುತ್ತಿದೆ ಕವಾಸಕಿ ಎಸ್ಟ್ರೆಲ್ಲಾ

249 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಫ್ಯೂಯಲ್ ಇಂಜೆಕ್ಟಡ್ ಮೋಟಾರ್ ನಿಂದ ನಿಯಂತ್ರಿಸ್ಪಡುವ ಕವಾಸಕಿ ಎಸ್ಟ್ರೆಲ್ಲಾ 18 ಎನ್ ಎಂ ತಿರುಗುಬಲದಲ್ಲಿ 17.4 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ 5 ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿರುತ್ತದೆ.

ಎನ್‌ಫೀಲ್ಡ್‌ಗೆ ಟಕ್ಕರ್ ನೀಡಲು ಬರುತ್ತಿದೆ ಕವಾಸಕಿ ಎಸ್ಟ್ರೆಲ್ಲಾ

ಒಟ್ಟಿನಲ್ಲಿ ಶಿಪ್ರ ಗತಿಯಲ್ಲಿ ಬೆಳೆದು ಬರುತ್ತಿರುವ ಭಾರತೀಯ ಮಾರುಕಟ್ಟೆಯತ್ತ ಅನೇಕ ಜಾಗತಿಕ ಸಂಸ್ಥೆಗಳು ಗಮನ ಹರಿಸುತ್ತಿದ್ದು, ಇದು ಮತ್ತಷ್ಟು ಆಕ್ರಮಣಕಾರಿ ಉತ್ಪನ್ನಗಳ ಪರಿಚಯಕ್ಕೆ ಕಾರಣವಾಗಲಿದೆ.

English summary
Kawasaki Estrella Could Compete With Royal Enfield In India
Story first published: Saturday, April 30, 2016, 16:38 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark