ರೇಸಿಂಗ್ ಪ್ರಿಯರಿಗಾಗಿ ಕವಾಸಕಿ ನಿಂಜಾ 300 ಕೆಆರ್ ಟಿ ವಿಶೇಷ ಆವೃತ್ತಿ ಬಿಡುಗಡೆ
ಜಪಾನ್ ಮೂಲದ ದೈತ್ಯ ವಾಹನ ಸಂಸ್ಥೆಯಾಗಿರುವ ಕವಾಸಕಿ ಯಾವುದೇ ಸದ್ದಿಲ್ಲದೆ ದೇಶದಲ್ಲಿ ಅತಿ ನೂತನ ನಿಂಜಾ 300 ಕೆಆರ್ ಟಿ ವಿಶೇಷ ಆವೃತ್ತಿಯನ್ನು ಬಿಡುಗಡೆಗೊಳಿಸಿದೆ. ಇಲ್ಲಿ ಕೆ ಆರ್ ಟಿ ಎಂಬುದು ಕವಾಸಕಿ ರೇಸಿಂಗ್ ಟೀಮ್ ಎಡಿಷನ್ ಎಂಬ ಅರ್ಥವನ್ನು ನೀಡುತ್ತದೆ.

ಕವಾಸಕಿ ನಿಂಜಾ ಸ್ಟ್ಯಾಂಡರ್ಡ್ ಮಾದರಿಗಿಂತಲೂ ವಿಭಿನ್ನವಾಗಿರುವ ನಿಂಜಾ 300 ಕೆಆರ್ ಟಿ ಎಡಿಷನ್, ಮುಂಬೈ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 3.61 ಲಕ್ಷ ರುಪಾಯಿಗಳಷ್ಟು ದುಬಾರಿಯೆನಿಸಲಿದೆ.

2015 ನವೆಂಬರ್ ತಿಂಗಳಲ್ಲಿ ಬಿಡುಗಡೆಯಾಗಿರುವ ನಿಂಜಾ ವಿಶೇಷ ಆವೃತ್ತಿಯ ಸ್ಥಾನವನ್ನು ನೂತನ ನಿಂಜಾ 300 ಕೆಆರ್ ಟಿ ಸ್ಪೆಷಲ್ ಎಡಿಷನ್ ತುಂಬಿಕೊಳ್ಳಲಿದೆ. ಅಲ್ಲದೆ ಸಮಾನ ಬೆಲೆಗಳಲ್ಲಿ ಮಾರಾಟವಾಗಲಿದೆ.

ನೂತನ ಕವಾಸಕಿ ನಿಂಜಾ 300 ಕೆಆರ್ ಟಿ ಆವೃತ್ತಿಯು ಕಪ್ಪು ಮತ್ತು ಹಸಿರು ಮೈ ಬಣ್ಣ, ಕವಾಸಕಿ ರೇಸಿಂಗ್ ತಂಡದ ಸ್ಟಿಕ್ಕರ್ ಜೊತೆಗೆ ಕೆಆರ್ ಟಿ ಲಾಂಛನವನ್ನು ಪಡೆಯಲಿದೆ. ಇಂಧನ ಟ್ಯಾಂಕ್ ಮೇಲೆ ಕವಾಸಕಿ ಕೆಆರ್ ಟಿ ತಂಡದ ಲಾಂಛನ ಕಂಡುಬರಲಿದೆ.

ವಿಶ್ವ ಸೂಪರ್ ಬೈಕ್ ಚಾಂಪಿಯನ್ ಶಿಪ್ ಭಾಗವಹಿಸುವ ಕವಾಸಕಿ ಬೈಕ್ ಗಳಿಗೆ ಸಮಾನವಾದ ಬಣ್ಣವನ್ನು ನೀಡಲಾಗಿದ್ದು, ವಾಹನ ಪ್ರೇಮಿಗಳ ಕನಸನ್ನು ನನಸುಗೊಳಿಸಲಿದೆ.

ಹಾಗಿದ್ದರೂ ನಿಂಜಾ 300 ಜೊತೆ ಎಂಜಿನ್ ಮಾನದಂಡಗಳನ್ನು ಹಂಚಿಕೊಂಡಿರುವ ಕೆಆರ್ ಟಿ ಎಡಿಷನ್ ನಲ್ಲಿರುವ 296 ಲಿಕ್ವಿಡ್ ಕೂಲ್ಡ್ ಪ್ಯಾರಲಲ್ ಟ್ವಿನ್ ಎಂಜಿನ್ 27 ಎನ್ ಎಂ ತಿರುಗುಬಲದಲ್ಲಿ 39 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ ಆರು ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿರಲಿದೆ.

ಅಂದ ಹಾಗೆ ಎಲ್ಲ ಹೊಸ ವಿನ್ಯಾಸ, ಶೈಲಿ ಹಾಗೂ ವೈಶಿಷ್ಟ್ಯಗಳಿಂದ ಕೂಡಿದ ಹೊಸ ತಲೆಮಾರಿ ನಿಂಜಾ ಮುಂದಿನ ವರ್ಷದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿದೆ.

ಇದಕ್ಕೂ ಮೊದಲು ಸಂಸ್ಥೆಯ 30ನೇ ವರ್ಷಾಚರಣೆಯ ಭಾಗವಾಗಿ ದೇಶದಲ್ಲಿ ನಿಂಜಾ 650 ಬೆಲೆಗಳಲ್ಲಿ 40,000 ರು.ಗಳಷ್ಟು ಕಡಿತಗೊಳಿಸಲಾಗಿತ್ತು.


Click it and Unblock the Notifications








