ಮಹೀಂದ್ರ ತೆಕ್ಕೆಗೆ ಐಕಾನಿಕ್ ದ್ವಿಚಕ್ರ ಸಂಸ್ಥೆ ಪ್ಯೂಜೊ
ನಿಕಟ ಭವಿಷ್ಯದಲ್ಲೇ ಭಾರತದ ಅಗ್ರಗಣ್ಯ ವಾಹನ ಸಂಸ್ಥೆ ಮಹೀಂದ್ರ ಆಂಡ್ ಮಹೀಂದ್ರ ತೆಕ್ಕೆಗೆ ಯುರೋಪ್ ನ ಐಕಾನಿಕ್ ದ್ವಿಚಕ್ರ ವಾಹನ ಸಂಸ್ಥೆ ಪ್ಯೂಜೊ ಸೇರಿಕೊಳ್ಳಲಿದೆ.
ಹೊಸ ಒಪ್ಪಂದದಂತೆ ಮಹೀಂದ್ರ ಟು ವೀಲರ್ಸ್ ನ ಯುರೋಪ್ ಸಬ್ಸಿಡಿ ಸಂಸ್ಥೆಯಾಗಿರುವ ಮಹೀಂದ್ರ ಟು ವೀಲರ್ಸ್ ಯುರೋಪ್ ಹೋಲ್ಡಿಂಗ್ಸ್ (ಎಂಟಿಡಬ್ಲ್ಯುಎಲ್-ಯುರೋಪ್) 197 ಕೋಟಿ ರುಪಾಯಿಗಳಿಗೆ ವಶಪಡಿಸಿಕೊಳ್ಳಲು ಮಹೀಂದ್ರ ನಿರ್ಧರಿಸಿದೆ. ಸಂಸ್ಥೆಯೀಗ ಎಂಟಿಡಬ್ಲ್ಯುಎಲ್-ಯುರೋಪ್ ನ 14.9 ಬಿಲಿಯನ್ ಶೇಕಡಾ 100ರಷ್ಟು ಶೇರನ್ನು ತನ್ನ ತೆಕ್ಕೆಗೆ ಸೇರಿಸಲಿದೆ.

ಎಂಟಿಡಬ್ಲ್ಯುಎಲ್-ಯುರೋಪ್, ಫ್ರಾನ್ಸ್ ನ ಪ್ರಖ್ಯಾತ ಸಂಸ್ಥೆಯಾಗಿರುವ ಪ್ಯೂಜೊದಲ್ಲಿ ಶೇರನ್ನು ಹೊಂದಿದೆ. ನೂತನ ಒಪ್ಪಂದದಂತೆ ಸಂಪೂರ್ಣ ಅಧೀನತೆಯು ಮಹೀಂದ್ರಗೆ ಬರಲಿದೆ. ಇದು ಭವಿಷ್ಯದಲ್ಲಿ ಪ್ಯೂಜೊ ವಿನ್ಯಾಸ ಆಮದು ಮಾಡಲು ಮಹೀಂದ್ರಗೆ ಸಹಕಾರಿಯಾಗಲಿದೆ.
ಒಟ್ಟಿನಲ್ಲಿ ಜಾಗತಿಕ ಮಟ್ಟದಲ್ಲಿ ಮಹೀಂದ್ರ ಮತ್ತಷ್ಟು ಪ್ರಭಾವಶಾಲಿಯಾಗಿ ಗುರುತಿಸಿಕೊಳ್ಳಲು ನೆರವಾಗಲಿದೆ. ಇದು ದೇಶದ ವಾಹನ ಮಾರುಕಟ್ಟೆ ಬೆಳವಣಿಗೆ ನಿಟ್ಟಿನಲ್ಲಿ ಸ್ವಾಗತಾರ್ಹವೆನಿಸಿದ್ದು, ಗುಣಮಟ್ಟದ ಉತ್ಪನ್ನಗಳು ನಿರ್ಮಾಣವಾಗಲಿದೆ.


Click it and Unblock the Notifications








