ಮನಸೆಳೆದ ಡುಕಾಟಿ ಸ್ಕ್ರ್ಯಾಂಬ್ಲರ್ ಶೈಲಿಯ ಎನ್ ಫೀಲ್ಡ್ ಬುಲೆಟ್!

ರಾಯಲ್ ಎನ್ ಫೀಲ್ಡ್ ಕ್ಲಾಸಿಕ್ 350 ಬುಲೆಟ್ ಗೆ ವಿನೂತನ ಶೈಲಿ ಒದಗಿಸುವಲ್ಲಿ ಪುಣೆ ತಳಹದಿಯ ಕಸ್ಟಮೈಸ್ಡ್ ಸಂಸ್ಥೆ ಯಶಸ್ವಿಯಾಗಿದೆ.

By Nagaraja

ಪುಣೆ ತಳಹದಿಯ ವಾಹನ ಮಾರ್ಪಾಡು ಸಂಸ್ಥೆಯಾಗಿರುವ ಡೊಚಾಕಿ ಡಿಸೈನ್ಸ್ ಕ್ಲಾಸಿಕ್ ರಾಯಲ್ ಎನ್ ಫೀಲ್ಡ್ ಬೈಕ್ ಗೆ ಹೊಸ ಸ್ವರೂಪವನ್ನು ನೀಡುವಲ್ಲಿ ಯಶಸ್ವಿಯಾಗಿದೆ. ದೇಶದಲ್ಲಿ ಅತಿ ಹೆಚ್ಚು ಬೇಡಿಕೆಯಿರುವ ರಾಯಲ್ ಎನ್ ಫೀಲ್ಡ್ ಬೈಕ್ ಇತರರಿಗಿಂತ ವಿಭಿನ್ನವಾಗಿ ಗುರುತಿಸಬೇಕೆಂಬ ಬಯಕೆಯನ್ನು ಪ್ರತಿಯೊಬ್ಬರು ಇಟ್ಟುಕೊಂಡಿರುತ್ತಾರೆ. ಅಂಥವರಿಗೆ ಈ ಬುಲೆಟ್ ಹೆಚ್ಚು ಪ್ರಿಯವೆನಿಸಲಿದೆ.

ಮನಸೆಳೆದ ಡುಕಾಟಿ ಸ್ಕ್ರ್ಯಾಂಬ್ಲರ್ ಶೈಲಿಯ ಎನ್ ಫೀಲ್ಡ್ ಬುಲೆಟ್!

ರಾಯಲ್ ಎನ್ ಫೀಲ್ಡ್ ಕ್ಲಾಸಿಕ್ 350 ಅತಿ ಹೆಚ್ಚು ಜನಪ್ರಿಯತೆ ಗಿಟ್ಟಿಸಿಕೊಂಡಿದೆ ಎಂಬುದರಲ್ಲಿ ಯಾವುದೇ ಸಂದೇಹವೂ ಇಲ್ಲ. ಇದಕ್ಕೆ ಪುಣೆ ತಳಹದಿಯ ಕಸ್ಟಮೈಸ್ಡ್ ಸಂಸ್ಥೆಯು ಹೊಸ ಸ್ವರೂಪವನ್ನು ನೀಡಿದೆ.

ಮನಸೆಳೆದ ಡುಕಾಟಿ ಸ್ಕ್ರ್ಯಾಂಬ್ಲರ್ ಶೈಲಿಯ ಎನ್ ಫೀಲ್ಡ್ ಬುಲೆಟ್!

ರಾಯಲ್ ಎನ್ ಫೀಲ್ಡ್ ಕ್ಲಾಸಿಕ್ 350 ಬುಲೆಟನ್ನು ವಿಶಿಷ್ಟವಾಗಿ ವಿನ್ಯಾಸಗೊಳಿಸಿರುವ ಡೊಚಾಕಿ ಸಂಸ್ಥೆಯು 'ಮಾವೆರಿಕ್' ಎಂಬ ನಾಮಕರಣವನ್ನು ಮಾಡಿದೆ.

ಮನಸೆಳೆದ ಡುಕಾಟಿ ಸ್ಕ್ರ್ಯಾಂಬ್ಲರ್ ಶೈಲಿಯ ಎನ್ ಫೀಲ್ಡ್ ಬುಲೆಟ್!

ಗ್ರಾಹಕನ ವೈಯಕ್ತಿಕ ಬೇಡಿಕೆಗಳಿಗೆ ಅನುಸಾರವಾಗಿ ರಾಯಲ್ ಎನ್ ಫೀಲ್ಡ್ ಕ್ಲಾಸಿಕ್ 350 ಬುಲೆಟ್ ಮಾರ್ಪಾಡುಗೊಳಿಸಲಾಗಿದೆ.

ಮನಸೆಳೆದ ಡುಕಾಟಿ ಸ್ಕ್ರ್ಯಾಂಬ್ಲರ್ ಶೈಲಿಯ ಎನ್ ಫೀಲ್ಡ್ ಬುಲೆಟ್!

ಇಲ್ಲಿ ಪ್ರಮುಖವಾಗಿಯೂ ಕಂಡುಬಂದಿರುವ ಬದಲಾವಣೆಯೆಂದರೆ ರಾಯಲ್ ಎನ್ ಫೀಲ್ಡ್ ಕ್ಲಾಸಿಕ್ 350 ಬೈಕನ್ನು ಐಕಾನಿಕ್ ಡುಕಾಟಿ ಸ್ಕ್ರ್ಯಾಂಬ್ಲರ್ ರೂಪಕ್ಕೆ ಹೋಲುವ ರೀತಿಯಲ್ಲಿ ಪರಿವರ್ತಿಸಲಾಗಿದೆ.

ಮನಸೆಳೆದ ಡುಕಾಟಿ ಸ್ಕ್ರ್ಯಾಂಬ್ಲರ್ ಶೈಲಿಯ ಎನ್ ಫೀಲ್ಡ್ ಬುಲೆಟ್!

ಕ್ಲಾಸಿಕ್ ಬೈಕನ್ನು ಇಷ್ಟಪಡುವ ದೀರ್ಘ ದೂರ ಪ್ರಯಾಣಿಸುವವರಿಗೆ ಈ ಬೈಕ್ ಹೆಚ್ಚು ಹೊಂದಿಕೆಯಾಗಲಿದೆ. ಇದು ನಿಮ್ಮ ವಿಶಿಷ್ಟ ಸ್ವಭಾವವನ್ನು ಬಿಂಬಿಸಲಿದೆ.

ಮನಸೆಳೆದ ಡುಕಾಟಿ ಸ್ಕ್ರ್ಯಾಂಬ್ಲರ್ ಶೈಲಿಯ ಎನ್ ಫೀಲ್ಡ್ ಬುಲೆಟ್!

ಇದರಲ್ಲಿ ದೊಡ್ಡದಾದ ಚಕ್ರಗಳನ್ನು ಲಗತ್ತಿಸಲಾಗಿದ್ದು, ಸ್ಪೋಕ್ ರಿಮ್ ಗಳು ಜೋಡಿಸಲಾಗಿದೆ. ಇನ್ನು ದೊಡ್ಡದಾದ ಚಕ್ರಗಳಿಗೆ ಅನುಗುಣವಾಗಿ ಸ್ವಿಂಗ್ ಆರ್ಮ್ ನಲ್ಲಿ ಉದ್ದಗಲದಲ್ಲಿ ಬದಲಾವಣೆ ತರಲಾಗಿದೆ.

ಮನಸೆಳೆದ ಡುಕಾಟಿ ಸ್ಕ್ರ್ಯಾಂಬ್ಲರ್ ಶೈಲಿಯ ಎನ್ ಫೀಲ್ಡ್ ಬುಲೆಟ್!

ಚಾಸೀಯಲ್ಲೂ ಬದಲಾವಣೆ ಕಂಡುಬಂದಿದ್ದು, ಬೇಕಾದಷ್ಟು ಗ್ರೌಂಡ್ ಕ್ಲಿಯರನ್ಸ್ ಕಾಪಾಡಿಕೊಳ್ಳಲಾಗಿದೆ. ಇನ್ನು ಸೀಟು ಮತ್ತು ಹ್ಯಾಂಡಲ್ ಬಾರ್ ನಲ್ಲೂ ವೈವಿಧ್ಯತೆ ಕಾಪಾಡಿಕೊಳ್ಳಲಾಗಿದೆ.

ಮನಸೆಳೆದ ಡುಕಾಟಿ ಸ್ಕ್ರ್ಯಾಂಬ್ಲರ್ ಶೈಲಿಯ ಎನ್ ಫೀಲ್ಡ್ ಬುಲೆಟ್!

ದೊಡ್ಡದಾದ ಇಂಧನ ಟ್ಯಾಂಕ್ ದೀರ್ಘ ದೂರ ಪ್ರಯಾಣಕ್ಕೆ ಮತ್ತಷ್ಟು ಉತ್ತೇಜನ ತುಂಬಲಿದೆ. ಒಟ್ಟಿನಲ್ಲಿ ಇದು ಮೂಲತ: ರಾಯಲ್ ಎನ್ ಫೀಲ್ಡ್ ಕ್ಲಾಸಿಕ್ 350 ಬುಲೆಟ್ ಹೌದೇ ಎಂಬುದು ಸಂದೇಹ ಮೂಡುವಂತಾಗಿದೆ.

ಮನಸೆಳೆದ ಡುಕಾಟಿ ಸ್ಕ್ರ್ಯಾಂಬ್ಲರ್ ಶೈಲಿಯ ಎನ್ ಫೀಲ್ಡ್ ಬುಲೆಟ್!

ಸಂಸ್ಥೆಯ ಪ್ರಕಾರ ಈ ವಿನೂತನ ಬೈಕ್ ಗೆ ಬಣ್ಣ ಬಳಿಯುವುದು ಹೆಚ್ಚು ತ್ರಾಸದಾಯಕ ಕೆಲಸವಾಗಿತ್ತು. ಇದಕ್ಕೆ ಟಾಪ್ ಗನ್ ಹಾಲಿವುಡ್ ಚಲನಚಿತ್ರದಿಂದ ಸ್ಪೂರ್ತಿ ಪಡೆದು ಬಣ್ಣ ಹಚ್ಚಲಾಗಿದೆ.

ಮನಸೆಳೆದ ಡುಕಾಟಿ ಸ್ಕ್ರ್ಯಾಂಬ್ಲರ್ ಶೈಲಿಯ ಎನ್ ಫೀಲ್ಡ್ ಬುಲೆಟ್!

ಈ ಎಲ್ಲ ಕೆಲಸ ಕಾರ್ಯಗಳಿಗೆ ಎರಡು ತಿಂಗಳುಗಳಷ್ಟು ಸಮಯ ತಗುಲಿದೆ. ಅಂತಿಮವಾಗಿ ಆಕರ್ಷಕ ಬೈಕ್ ಸಿದ್ಧಪಡಿಸುವಲ್ಲಿ ಕಸ್ಟಮೈಸ್ಡ್ ಸಂಸ್ಥೆ ಯಶ ಕಂಡಿದೆ.

More from DriveSpark

Article Published On: Tuesday, November 15, 2016, 9:31 [IST]
English summary
Presenting the ‘Maverick’ — A Custom Built Royal Enfield By Dochaki Designs
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+