ಚಿತ್ತಾಕರ್ಷಕ 2016 ಹೋಂಡಾ ಆಕ್ಟಿವಾ-ಐ ಭಾರತದಲ್ಲಿ ಬಿಡುಗಡೆ
ದೇಶದ ಎರಡನೇ ಅತಿ ದೊಡ್ಡ ದ್ವಿಚಕ್ರ ವಾಹನ ಸಂಸ್ಥೆ ಹೋಂಡಾ ಮೋಟಾರ್ ಸೈಕಲ್ ಆಂಡ್ ಸ್ಕೂಟರ್ ಇಂಡಿಯಾ (ಎಚ್‌ಎಂಐಎಸ್) ಸಂಸ್ಥೆಯು ಅತಿ ನೂತನ 2016 ಆಕ್ಟಿವಾ-ಐ ಸ್ಕೂಟರನ್ನು ಬಿಡುಗಡೆಗೊಳಿಸಿದೆ.
ಬೆಲೆ ಮಾಹಿತಿ: 50,255 ರು. (ಎಕ್ಸ್ ಶೋ ರೂಂ ಮುಂಬೈ)
ನೂತನ ಆಕ್ಟಿವಾ-ಐ ಹೊಸ ಹೊಸ ಬಣ್ಣಗಳ ಆಯ್ಕೆಯೊಂದಿಗೆ ಲಭ್ಯವಾಗಲಿದೆ. ಆದರೆ ಎಂಜಿನ್ ತಾಂತ್ರಿಕತೆಯಲ್ಲಿ ಯಾವುದೇ ಬದಲಾವಣೆಗಳು ಕಂಡುಬಂದಿಲ್ಲ.

ಹೋಂಡಾ ಆಕ್ಟಿವಾ-ಐ ಸ್ಕೂಟರ್ ಗೆ ಮೂರು ಹೊಸ ಬಣ್ಣಗಳು ಸೇರ್ಪಡೆಗೊಂಡಿದೆ. ಸ್ಟ್ಯಾಂಡರ್ಡ್ ವೆರಿಯಂಟ್ ನಲ್ಲಿ ಪಿಯರ್ಲ್ ಟ್ರಾನ್ಸ್ ಯಲ್ಲೊ ಮತ್ತು ಕ್ಯಾಂಡಿ ಜಾಝಿ ಬ್ಲೂ ನೂತನ ಬಣ್ಣಗಳಾಗಿರಲಿದೆ.

ಅಲ್ಲದೆ ಡಿಲಕ್ಸ್ ವೆರಿಯಂಟ್‌ನಲ್ಲಿ, ಈಗಿರುವ ಆರ್ಕಿಡ್ ಪರ್ಪಲ್ ಮೆಟ್ಯಾಲಿಕ್ ಮತ್ತು ಪಿಯರ್ಲ್ ಅಮೇಜಿಂಗ್ ವೈಟ್ ಬಣ್ಣವಲ್ಲದೆ ಹೊಸತಾದ ಇಂಪಿರಿಯಲ್ ರೆಡ್ ಮೆಟ್ಯಾಲಿಕ್ ಬಣ್ಣಗಳ ಆಯ್ಕೆಗಳಲ್ಲೂ ಲಭ್ಯವಾಗಲಿದೆ.

ತಾಂತ್ರಿಕತೆಯಲ್ಲಿ ಯಾವುದೇ ಬದಲಾವಣೆಗಳು ಕಂಡುಬಂದಿಲ್ಲ. ಇದರ 109.2 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ 8.74 ಎನ್ ಎಂ ತಿರುಗುಬಲದಲ್ಲಿ 8 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಅಲ್ಲದೆ ವಿ ಮ್ಯಾಟಿಕ್ ಗೇರ್ ಬಾಕ್ಸ್ ಇದರಲ್ಲಿರಲಿದೆ.

ತಾಂತ್ರಿಕತೆಯಲ್ಲಿ ಯಾವುದೇ ಬದಲಾವಣೆಗಳು ಕಂಡುಬಂದಿಲ್ಲ. ಇದರ 109.2 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ 8.74 ಎನ್ ಎಂ ತಿರುಗುಬಲದಲ್ಲಿ 8 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಅಲ್ಲದೆ ವಿ ಮ್ಯಾಟಿಕ್ ಗೇರ್ ಬಾಕ್ಸ್ ಇದರಲ್ಲಿರಲಿದೆ.

ಹೆಚ್ಚು ಇಂಧನ ಕ್ಷಮತೆಗಾಗಿ ಹೋಂಡಾದ ನೂತನ ಇಕೊ ತಂತ್ರಜ್ಞಾನವನ್ನು (ಎಚ್‌ಇಟಿ) ಆಳವಡಿಸಲಾಗಿದೆ.

ಹೊಸ ಬಣ್ಣಗಳನ್ನು ಸೇರ್ಪಡೆಗೊಳಿಸಿದ ಹೊರತಾಗಿಯೂ ಬೆಲೆಯಲ್ಲಿ ಯಾವುದೇ ಬದಲಾವಣೆಗಳು ಕಂಡುಬಂದಿಲ್ಲ.

ಭಾರತ ಮಾರುಕಟ್ಟೆಯಲ್ಲಿ ಟಿವಿಎಸ್ ಸ್ಕೂಟಿ ಜೆಸ್ಟ್ ಮತ್ತು ಸುಜುಕಿ ಲೆಟ್ಸ್ ಮುಂತಾದ ಸ್ಕೂಟರ್ ಗಳಿಗೆ ಹೋಂಡಾ ಆಕ್ಟಿವಾ ಐ ಪ್ರತಿಸ್ಪರ್ಧೆಯನ್ನು ಒಡ್ಡಲಿದೆ.


Click it and Unblock the Notifications