ಶೈನ್ ವಿಶೇಷ ಆವೃತ್ತಿ ಬಿಡುಗಡೆಯಾದ 9 ತಿಂಗಳಲ್ಲೇ 1 ಲಕ್ಷ ಮಾರಾಟ
ಒಂಬತ್ತು ತಿಂಗಳುಗಳ ಹಿಂದೆಯಷ್ಟೇ ದೇಶದ ಎರಡನೇ ಅತಿ ದೊಡ್ಡ ದ್ವಿಚಕ್ರ ವಾಹನ ಸಂಸ್ಥೆಯಾಗಿರುವ ಹೋಂಡಾ ಮೋಟಾರ್ ಸೈಕಲ್ ಆಂಡ್ ಸ್ಕೂಟರ್ ಇಂಡಿಯಾ ಪ್ರೈವೇಟ್ ಇಂಡಿಯಾ ಲಿಮಿಟೆಡ್ (ಎಚ್ ಎಂಎಸ್ ಐ) ಸಂಸ್ಥೆಯು ತನ್ನ ಜನಪ್ರಿಯ ಸಿಬಿ ಶೈನ್ ಬೈಕ್ ನ ವಿಶೇಷ ಎಸ್ ಪಿ ಆವೃತ್ತಿಯನ್ನು ಬಿಡುಗಡೆಗೊಳಿಸಿತ್ತು.
125 ಸಿಸಿ ಕಾರ್ಯನಿರ್ವಾಹಕ ವಿಭಾಗದಲ್ಲಿ ತನಗ್ಯಾರು ಸರಿಸಾಟಿಯಿಲ್ಲ ಎಂಬುದನ್ನು ಮಗದೊಮ್ಮೆ ಸಾಬೀತುಪಡಿಸಿರುವ ನೂತನ ಸಿಬಿ ಶೈನ್ ಎಸ್ ಪಿ ವಿಶೇಷ ಆವೃತ್ತಿಯು ಸಹ ಕೇವಲ ಒಂಬತ್ತು ತಿಂಗಳ ಅವಧಿಯಲ್ಲೇ ಒಂದು ಲಕ್ಷ ಯುನಿಟ್ ಗಳ ಮಾರಾಟ ಮೈಲುಗಲ್ಲನ್ನು ತಲುಪುವ ಮುಖಾಂತರ ದಾಖಲೆ ಬರೆದಿದೆ.

ಹೆಚ್ಚುವರಿ ಕ್ರೀಡಾತ್ಮಕ ಶೈಲಿ, ನಿರ್ವಹಣೆ, ವೈಶಿಷ್ಟ್ಯಗಳು, ಸ್ಟಿಕ್ಕರ್ ಹಾಗೂ ಅನುಕೂಲತೆಗಳಿಂದ ಹೊಸ ಸಿಬಿ ಶೈನ್ ಸ್ಷೆಷಲ್ ಎಡಿಷನ್ ಜನಮನ ಗೆದ್ದಿದೆ. ಇದು ಚಾಲಕನಿಗೆ ವಿಶೇಷ ಚಾಲನಾ ಅನುಭೂತಿಯನ್ನು ನೀಡುತ್ತದೆ.

ಹೋಂಡಾ ಸಿಬಿ ಶೈನ್ ಎಸ್ ಪಿ ಆವೃತ್ತಿಯು ಕಾಂಬಿ ಬ್ರೇಕ್ ಸಿಸ್ಟಂ (ಸಿಬಿಎಸ್), ಅಡ್ವಾನ್ಸ್ ಬ್ರೇಕಿಂಗ್ ಸಿಸ್ಟಂ, ಹಾಗೂ ಪರಿಷ್ಕರಣೆ ಪಡೆದ ಹೋಂಡಾ ಎಂಜಿನ್ ತಂತ್ರಜ್ಞಾನವನ್ನು (ಎಚ್ ಇಟಿ) ಪಡೆದಿದೆ.

ದೀರ್ಘ ದೂರದ ಪ್ರಯಾಣದಲ್ಲೂ ಶೈನ್ ನಲ್ಲಿರುವ ಐದು ಸ್ಪೀಡ್ ಗೇರ್ ಬಾಕ್ಸ್ ಆರಾಮದಾಯಕ ಪ್ರಯಾಣವನ್ನು ಖಾತ್ರಿಪಡಿಸಲಿದೆ. ಉದ್ದವಾದ ಸೀಟು, ಸಮಕಾಲೀನ ವಿನ್ಯಾಸ, ಉದ್ದವಾದ ವೀಲ್ ಬೇಸ್, ವರ್ಧಿತ ಗ್ರೌಂಡ್ ಕ್ಲಿಯರನ್ಸ್, 5 ವಿಧಗಳಲ್ಲಿ ಹೊಂದಾಣಿಸಬಹುದಾದ ಸಸ್ಷೆನ್ಷನ್ ಹಾಗೂ ಐದು ವಿಭಜಿತ ಅಲಾಯ್ ಜೊತೆಗೆ ಡಿಸ್ಕ್ ಬ್ರೇಕ್ ಗಳ ಸೌಲಭ್ಯವಿರಲಿದೆ.

ವೈಶಿಷ್ಟ್ಯಗಳು
5 ಸ್ಪೀಡ್ ಗೇರ್ ಬಾಕ್ಸ್ (1-N-2-3-4-5),
ಕ್ರೋಮ್ ಫಿನಿಶ್ ಮಫ್ಲರ್ ಕವರ್,
ವಿಭಜಿತ ಅಲಾಯ್ ವೀಲ್ ಜೊತೆ ಡಿಸ್ಕ್ ಬ್ರೇಕ್,
ಆಕರ್ಷಕ ಹೊರಮೈ ನೋಟ,
ಡಿಜಿಟಲ್ ಸ್ಪೀಡೋ ಮೀಟರ್,
ಸ್ಟೈಲಿಷ್ ಟ್ಯಾಂಕ್ ವಿನ್ಯಾಸ

ವೆರಿಯಂಟ್, ಬೆಲೆ ಮಾಹಿತಿ (ಆನ್ ರೋಡ್, ಬೆಂಗಳೂರು)
ಸಿಬಿಎಸ್: 78,220 ರು.
ಡಿಎಲ್ ಎಕ್ಸ್: 75,931 ರು.
ಸ್ಟ್ಯಾಂಡರ್ಡ್:73,070 ರು.

2015 ನವೆಂಬರ್ ತಿಂಗಳಲ್ಲಿ ಸಿಬಿ ಶೈನ್ ಎಸ್ ಪಿ ಆವೃತ್ತಿಯನ್ನು ಬಿಡುಗಡೆಗೊಳಿಸಲಾಗಿತ್ತು. ಇದರಲ್ಲಿರುವ 125 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್ 10.3 ಎನ್ ಎಂ ತಿರುಗುಬಲದಲ್ಲಿ 10.57 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲೂ ಜನ ಮೆಚ್ಚುಗೆಗೆ ಪಾತ್ರವಾಗಿರುವ ಹೋಂಡಾ ಸಿಬಿ ಶೈನ್ ಪ್ರತಿ ಲೀಟರ್ ಗೆ 67 ಕೀ.ಮೀ. ಗಳಷ್ಟು ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿರುತ್ತದೆ.

ಆಯಾಮ (ಎಂಎಂ)
ಉದ್ದ: 2007
ಅಗಲ: 762
ಎತ್ತರ: 1085
ಚಕ್ರಾಂತರ: 1266
ಗ್ರೌಂಡ್ ಕ್ಲಿಯರನ್ಸ್: 160
ಭಾರ: 124 ಕೆ.ಜಿ.
ಇಂಧನ ಟ್ಯಾಂಕ್ ಸಾಮರ್ಥ್ಯ: 10.5 ಲೀಟರ್

ಬಣ್ಣದ ಆಯ್ಕೆಗಳು - ಗೆನಿ ಗ್ರೇ ಮೆಟ್ಯಾಲಿಕ್, ಅಥ್ಲೆಟಿಕ್ ಬ್ಲೂ ಮೆಟ್ಯಾಲಿಕ್, ಪಿಯರ್ಲ್ ಅಮೇಜಿಂಗ್ ವೈಟ್, ಬ್ಲ್ಯಾಕ್ ಮತ್ತು ರೆಬೆಲ್ ರೆಡ್ ಮೆಟ್ಯಾಲಿಕ್.


Click it and Unblock the Notifications








