ವಾಹನ ಪ್ರೇಮಿಗಳಿಗೆ ರಾಯಲ್ ಎನ್‌ಫೀಲ್ಡ್ ದೃಶ್ಯ ವಿಸ್ಮಯ
ಹೊಸ ವರ್ಷದಲ್ಲಿ ತಾಜಾತನ ಕಾಪಾಡಿಕೊಳ್ಳುವ ಇರಾದೆಯಲ್ಲಿರುವ ದೇಶದ ಐಕಾನಿಕ್ ದ್ವಿಚಕ್ರ ವಾಹನ ಸಂಸ್ಥೆ ರಾಯಲ್ ಎನ್‌ಫೀಲ್ಡ್ ಎಂಟು ಹೊಸ ಬಣ್ಣಗಳ ಆಯ್ಕೆಗಳನ್ನು ನೀಡಲು ನಿರ್ಧರಿಸಿದೆ.
ಇದರೊಂದಿಗೆ ಮುಂದಿನ ದಿನಗಳಲ್ಲಿ ರಾಯಲ್ ಎನ್ ಫೀಲ್ಡ್ ಬೈಕ್ ಗಳು ಮತ್ತಷ್ಟು ವರ್ಣಮಯದೊಂದಿಗೆ ಕಂಗೊಳಿಸಲಿದೆ. ಯುವ ಗ್ರಾಹಕರನ್ನು ಹೆಚ್ಚೆಚ್ಚು ಆಕರ್ಷಿಸುವುದರೊಂದಿಗೆ ಹೊಸ ಅನುಭವ ನೀಡುವುದು ಸಂಸ್ಥೆಯ ಇರಾದೆಯಾಗಿದೆ.

ಯಾವೆಲ್ಲ ಮಾದರಿಗಳಿಗೆ ಹೊಸ ಬಣ್ಣಗಳು ?
ರಾಯಲ್ ಎನ್‌ಫೀಲ್ಡ್ ಸಂಸ್ಥೆಯ ಐಕಾನಿಕ್ ಮಾದರಿಗಳಾದ ಕ್ಲಾಸಿಕ್ 350, ಎಲೆಕ್ಟ್ರಾ 350, ಕ್ಲಾಸಿಕ್ 500 ಹಾಗೂ ಬುಲೆಟ್ 500 ಮಾದರಿಗಳಿಗೆ ಹೊಸ ಬಣ್ಣಗಳನ್ನು ಬಳಿಯಲಾಗುವುದು.

ದೃಶ್ಯ ವಿಸ್ಮಯ
ಕೇವಲ ಬಣ್ಣಗಳು ಮಾತ್ರವಲ್ಲದೆ ಕೆಲವೊಂದು ಗಮನಾರ್ಹ ಬದಲಾವಣೆಗಳು ರಾಯಲ್ ಎನ್ ಫೀಲ್ಡ್ ಬೈಕ್ ಗಳಲ್ಲಿ ಕಂಡುಬರಲಿದೆ. ಇದು ವಾಹನ ಪ್ರೇಮಿಗಳಗೆ ನೈಜ ದೃಶ್ಯ ವಿಸ್ಮಯವಾಗಲಿದೆ.

ಬದಲಾವಣೆ
ಹೊಸ ಬಣ್ಣಗಳ ಜೊತೆಗೆ ಆಯ್ದ ಮಾದರಿಗಳಲ್ಲಿ ನೂತನ ಸ್ಟಿಕ್ಕರ್, ಕ್ರೋಮ್ ಲೊಗೊ, ಹೆಡ್ ಲೈಟ್ ಕೇಸಿಂಗ್, ಫಾರ್ಕ್ ಕವರ್ ಮತ್ತು ಸೀಟುಗಳಿಗೆ ಹೊಸ ಕವರ್ ಗಳು ಲಭ್ಯವಾಗಲಿದೆ.

ಹೊಸ ಬಣ್ಣಗಳು ಇಂತಿದೆ
ರಾಯಲ್ ಎನ್‌ಫೀಲ್ಡ್ ಎಲೆಕ್ಟ್ರಾ 350 - ಮೆರಿಡಿಯನ್ ಬ್ಲೂ ಮತ್ತು ಮಾರ್ಸಲಾ ರೆಡ್,
ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 - ಫಂಕಿ ಮಿಂಟ್ ಮತ್ತು ಚೆಸ್ಟ್ ನಟ್,
ರಾಯಲ್ ಎನ್‌ಫೀಲ್ಡ್ ಬುಲೆಟ್ 500 - ಮಾರ್ಶ್ ಗ್ರೇ,
ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 500 - ಸ್ವಾಡ್ರಾನ್ ಬ್ಲೂ, ಕ್ರೋಮ್ ಗ್ರಾಫೈಟ್ ಮತ್ತು ಕ್ರೋಮ್ ಗ್ರೀನ್

ಎಂಜಿನ್
ಹಾಗಿದ್ದರೂ ಎಂಜಿನ್ ತಾಂತ್ರಿಕತೆಗಳಲ್ಲಿ ಯಾವುದೇ ಬದಲಾವಣೆಗಳು ಕಂಡು ಬರುವುದಿಲ್ಲ. ಈ ಎಲ್ಲ ಮಾದರಿಗಳಲ್ಲೂ ಈಗಿರುವ ಎಂಜಿನ್ ಬಲವೇ ಮುಂದುವರಿಯಲಿದೆ.

ಚೆನ್ನೈ
ಅಂದ ಹಾಗೆ ಚೆನ್ನೈ ಘಟಕದಲ್ಲಿ ರಾಯಲ್ ಎನ್ ಫೀಲ್ಡ್ ಬೈಕ್ ಗಳು ಉತ್ಪಾದನೆಯಾಗಲಿದೆ. ಈ ಎಲ್ಲ ಬದಲಾವಣೆಗಳು ಗ್ರಾಹಕರು ಜನವರಿ ತಿಂಗಳಿಂದಲೇ ಲಭ್ಯವಾಗಲಿದೆ.


Click it and Unblock the Notifications