ಹಾರ್ಲೆಗೆ ಟಕ್ಕರ್; ಬರುತ್ತಿದೆ ಆರ್‌ಇ ಅತಿ ಶಕ್ತಿಶಾಲಿ 750 ಸಿಸಿ ಬುಲೆಟ್
ರಾಯಲ್ ಎನ್ ಫೀಲ್ಡ್ ಅತ್ಯಂತ ಶಕ್ತಿಶಾಲಿ 750 ಸಿಸಿ ಬುಲೆಟ್ 2017ನೇ ಸಾಲಿನಲ್ಲಿ ಬಿಡುಗಡೆ ಮಾಡುವ ಸಿದ್ಧತೆ ನಡೆಸುತ್ತಿದೆ.
ಭಾರತೀಯ ವಾಹನ ಮಾರುಕಟ್ಟೆಯಲ್ಲಿ ಸರ್ವಕಾಲಿಕ ಶ್ರೇಷ್ಠ ದ್ವಿಚಕ್ರ ವಾಹನ ನಿರ್ಮಾಣ ಸಂಸ್ಥೆಯೆನಿಸಿಕೊಂಡಿರುವ ಚೆನ್ನೈ ಮೂಲದ ಈಚರ್ ಮೋಟರ್ಸ್ ಭಾಗವಾಗಿರುವ ರಾಯಲ್ ಎನ್ ಫೀಲ್ಡ್ ಅತಿ ನೂತನ ಕಾಂಟಿನೆಂಟಲ್ ಜಿಟಿ 750 ಸಿಸಿ ಬುಲೆಟನ್ನು 2017ನೇ ಸಾಲಿನಲ್ಲಿ ಬಿಡುಗಡೆ ಮಾಡಲಿದೆ.

ರಾಯಲ್ ಎನ್ ಫೀಲ್ಡ್ ಕಾಂಟಿನೆಂಟಲ್ ಜಿಟಿ 750 ಸಿಸಿ ಬುಲೆಟ್ ವಿಶ್ವ ಶ್ರೇಷ್ಠ ಹಾರ್ಲೆ ಡೇವಿಡ್ಸನ್ ಸ್ಟ್ರೀಟ್ 750 ಮಾದರಿಗೆ ನೇರ ಎದುರಾಳಿಯಾಗಲಿದೆ.

ರಾಯಲ್ ಎನ್ ಫೀಲ್ಡ್ ನೂತನ 750 ಸಿಸಿ ಬುಲೆಟ್ ಕಾಂಟಿನೆಂಟಲ್ ಜಿಟಿ ಎಂಬ ಹೆಸರಿನಿಂದಲೇ ಗುರುತಿಸಲಿದೆಯೇ ಎಂಬುದು ಇನ್ನಷ್ಟೇ ಸ್ಪಷ್ಟಗೊಳ್ಳಬೇಕಿದೆ.

ಬ್ರಿಟನ್ ನಲ್ಲಿ ಜುಲೈ ತಿಂಗಳಲ್ಲಿ ಟೆಸ್ಟಿಂಗ್ ವೇಳೆ ಸೆರೆ ಸಿಕ್ಕಿರುವ ರಾಯಲ್ ಎನ್ ಫೀಲ್ಡ್ ಕಾಂಟಿನೆಂಟಲ್ ಜಿಟಿ 750 ಸಿಸಿ ಬುಲೈಟ್ ಬಹುತೇಕ ಸಾಮತ್ಯೆಯನ್ನು ಹಂಚಿಕೊಂಡಿದೆ.

ಇದು ಕಾಂಟಿನೆಂಟಲ್ ಜಿಟಿಗೆ ಸಮಾನವಾದ ಟೆಲಿಸ್ಕಾಪಿಕ್ ಫ್ರಂಟ್ ಸಸ್ಪೆನ್ಷನ್, ಹಿಂದುಗಡೆ ಪೈಯೊಲಿ ಗ್ಯಾಸ್ ಚಾರ್ಜ್ಡ್ ಡ್ಯಾಂಪರ್ಸ್, ಡ್ಯುಯಲ್ ಕ್ಯಾಲಿಪರ್ ಫ್ರಂಟ್ ಮತ್ತು ಸಿಂಗಲ್ ಕ್ಯಾಲಿಪರ್ ಡಿಸ್ಕ್ ಬ್ರೇಕ್ ಸೌಲಭ್ಯವಿರಲಿದೆ.

ದೊಡ್ಡದಾದ ಎಂಜಿನ್ ಮತ್ತು ಡ್ಯುಯಲ್ ಎಕ್ಸಾಸ್ಟ್ ಕೊಳವೆಗಳು ನೂತನ ಬುಲೆಟ್ ನಲ್ಲಿ ಕಂಡುಬಂದಿರುವ ಪ್ರಮುಖ ಆಕರ್ಷಣೆಯಾಗಲಿದೆ.

ಇದರಲ್ಲಿರುವ ಹೊಸತಾದ ಟು ಸಿಲಿಂಡರ್ 750 ಸಿಸಿ ಎಂಜಿನ್ 45ರಿಂದ 50 ಅಶ್ವಶಕ್ತಿಯನ್ನು ಉತ್ಪಾದಿಸುವಷ್ಟು ಸಮರ್ಥವಾಗಿರಲಿದೆ.

ಸದ್ಯ ಮಾರಾಟದಲ್ಲಿರುವ ರಾಯಲ್ ಎನ್ ಫೀಲ್ಡ್ ಕಾಂಟಿನೆಂಟಲ್ ಜಿಟಿ 535 ಸಿಸಿ ಎಂಜಿನ್ 29 ಅಶ್ವಶಕ್ತಿಯನ್ನು ಉತ್ಪಾದಿಸುತ್ತಿದೆ. ಇನ್ನೊಂದೆಡೆ ಹಾರ್ಲೆಯಲ್ಲಿರುವ 750 ಸಿಸಿ ಟು ಸಿಲಿಂಡರ್ ಎಂಜಿನ್ 47 ಅಶ್ವಶಕ್ತಿಯನ್ನು ನೀಡುತ್ತದೆ.

ಚೆನ್ನೈನ ಓರಗಡಂ ಘಟಕದ ಸಮೀದಪಲ್ಲೇ ತಲೆಯೆತ್ತಲಿರುವ ನೂತನ ವಲ್ಲಂ ವಡಗಲ್ ಘಟಕದಲ್ಲಿ 2017ನೇ ಸಾಲಿನ ದ್ವಿತಿಯ ತ್ರೈಮಾಸಿಕ ಅವಧಿಯಲ್ಲಿ ನೂತನ ಎನ್ ಫೀಲ್ಡ್ ಬೈಕ್ ನ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗುವುದು.

ಅಂದರೆ ಹೊಚ್ಚ ಹೊಸ ರಾಯಲ್ ಎನ್ ಫೀಲ್ಡ್ ಕಾಂಟಿನೆಂಟಲ್ ಜಿಟಿ 750 ಸಿಸಿ ಬುಲೆಟ್ ಮುಂದಿನ ವರ್ಷವೇ ಮಾರುಕಟ್ಟೆಗೆ ಅಪ್ಪಳಿಸಲಿದೆ ಎಂಬುದು ಬಹುತೇಕ ಖಚಿತವೆನಿಸಿದೆ.


Click it and Unblock the Notifications








