ನವದೆಹಲಿಯಲ್ಲಿ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಮಾರಾಟಕ್ಕೆ ನಿಷೇಧ

By Nagaraja

ಈಗಷ್ಟೇ ಮಾರುಕಟ್ಟೆ ಪ್ರವೇಶಿಸಿರುವ ರಾಯಲ್ ಎನ್ ಫೀಲ್ಡ್ ಹಿಮಾಲಯನ್ ಮಾರಾಟಕ್ಕೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಿಷೇಧ ಹೇರಲಾಗಿದೆ. ಹ್ಹಾಂ! ಅದ್ಯಾಕೆ ಇಂತಹದೊಂದು ನೀತಿ ಅನುಸರಿಸಲಾಗಿದೆ ಎಂದು ಗಾಬರಿಯಾಗದಿರಿ.

Also Read: ಭಾರತ್ ಸ್ಟೇಜ್ ಎಮಿಷನ್ ಸ್ಟ್ಯಾಂಡರ್ಡ್: ಒಂದು ಪುಟ್ಟ ರೌಂಡಪ್

ವಿಷಯ ಏನೆಂದರೆ 2016 ಎಪ್ರಿಲ್ ಒಂದರಿಂದ ಜಾರಿಗೆ ಬರುವಂತೆಯೇ ಭಾರತ್ ಸ್ಟೇಜ್ 4 ಮಾಲಿನ್ಯ ಮಟ್ಟ ಕಾಪಾಡುವ ದ್ವಿಚಕ್ರ ವಾಹನಗಳಿಗೆ ಮಾತ್ರ ರಸ್ತೆಗಿಳಿಯಲು ದೆಹಲಿ ಸರಕಾರ ಅನುವು ಮಾಡಿಕೊಟ್ಟಿದೆ. ಇದರಿಂದಾಗಿ ರಾಯಲ್ ಎನ್ ಫೀಲ್ಡ್ ಹಿಮಾಲಯನ್ ಹಿನ್ನಡೆ ಅನುಭವಿಸಿದೆ.

ನವದೆಹಲಿಯಲ್ಲಿ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಮಾರಾಟಕ್ಕೆ ನಿಷೇಧ

ರಾಯಲ್ ಎನ್ ಫೀಲ್ಡ್ ಹಿಮಾಲಯನ್ ಜೊತೆ ಜೊತೆಗೆ ಈಗಷ್ಟೇ ಬಿಡುಗಡೆಯಾಗಿರುವ ಬಜಾಜ್ ವಿ ಮತ್ತು ಸುಜುಕಿ ಆಕ್ಸೆಸ್ 125 ದ್ವಿಚಕ್ರ ವಾಹನಗಳಿಗೂ ನಿಷೇಧ ಹೇರಲಾಗಿದೆ. ಈ ಎಲ್ಲ ಮಾದರಿಗಳು ಭಾರತ್ ಸ್ಟೇಜ್ 3 ಮಾನ್ಯತಾ ಮಟ್ಟವಿದೆ.

ನವದೆಹಲಿಯಲ್ಲಿ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಮಾರಾಟಕ್ಕೆ ನಿಷೇಧ

2017 ಎಪ್ರಿಲ್ 01ರ ವರೆಗೆ ಬಿಎಸ್ 4 ಮಾನ್ಯತಾ ಮಟ್ಟಕ್ಕೆ ವರ್ಗಾವಣೆ ಮಾಡಿಕೊಳ್ಳಲು ಕಾಲಾವಧಿ ಮಾಡಿಕೊಡಲಾಗಿದೆ.

ಏನಿದು ನಿಮಯ ?

ಏನಿದು ನಿಮಯ ?

'ಭಾರತ್ ಸ್ಟೇಜ್ ಎಮಿಷನ್ ಸ್ಟ್ಯಾಂಡರ್ಡ್' (Bharat stage emission standards) ಎಂಬುದು ಆಂತರಿಕ ದಹನಕಾರಿ ಎಂಜಿನ್ (internal combustion engine) ವಾತಾವರಣಕ್ಕೆ ಬಿಡುಗಡೆ ಮಾಡುವ ಮಾಲಿನ್ಯಕಾರಕ ಹೊಗೆ ನಿಯಂತ್ರಿಸಲು ಭಾರತ ಸರಕಾರವು ಹೊರತಂದಿರುವ ಕಾನೂನಾತ್ಮಕ ಮಾಪನವಾಗಿದೆ.

ನವದೆಹಲಿಯಲ್ಲಿ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಮಾರಾಟಕ್ಕೆ ನಿಷೇಧ

ಯುರೋಪ್ ನಲ್ಲಿ ಜಾರಿಗೆ ಬಂದಿರುವುದಕ್ಕೆ ಸಮಾನವಾಗಿ ಭಾರತದಲ್ಲೂ ಭಾರತ್ ಸ್ಟೇಜ್ ಸುರಕ್ಷಾ ಗುಣಮಟ್ಟತೆಯನ್ನು ಅನುಸರಿಸಲಾಗುತ್ತಿದೆ. ಹೊಸದಾಗಿ ನಿರ್ಮಾಣವಾಗುವ ಪ್ರತಿಯೊಂದು ವಾಹನವು ಈ ಸುರಕ್ಷಾ ಮಾಪನವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿದೆ.

ನವದೆಹಲಿಯಲ್ಲಿ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಮಾರಾಟಕ್ಕೆ ನಿಷೇಧ

ಭಾರತವೀಗ ಭಾರತ್ ಸ್ಟೇಜ್ IV (ಬಿಎಸ್ IV) ಎಮಿಷನ್ ಸ್ಟ್ಯಾಂಡರ್ಡ್ ಗೆ ಕಾಲಿಡುತ್ತಿದ್ದು, 2017 ಎಪ್ರಿಲ್ ಒಂದರಂದು ಜಾರಿಗೆ ಬರಲಿದೆ.

ನವದೆಹಲಿಯಲ್ಲಿ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಮಾರಾಟಕ್ಕೆ ನಿಷೇಧ

ಅಂದ ಹಾಗೆ 411 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್ ನಿಯಂತ್ರಿಸಲ್ಪಡುವ ರಾಯಲ್ ಎನ್ ಫೀಲ್ಡ್ ಹಿಮಾಲಯನ್ 32 ಎನ್ ಎಂ ತಿರುಗುಬಲದಲ್ಲಿ 24.5 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಅಲ್ಲದೆ ಐದು ಸ್ಪೀಡ್ ಗೇರ್ ಬಾಕ್ಸ್ ಇರಲಿದೆ.

ಇವನ್ನೂ ಓದಿ...

ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಅಬ್ಬರದ ಬಿಡುಗಡೆ; ಬೆಂಗಳೂರು ಬೆಲೆ ಎಷ್ಟು?

Article Published On: Thursday, March 17, 2016, 18:29 [IST]
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+