ಶಿಖರವನ್ನೇರಲು ಬರುತ್ತಿದೆ ರಾಯಲ್ ಎನ್ ಫೀಲ್ಡ್ ಹಿಮಾಲಯನ್

Written By:

ದೇಶದ ದ್ವಿಚಕ್ರ ವಾಹನ ವಿಭಾಗದಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನುಂಟು ಮಾಡಲಿರುವ ಅತಿ ನೂತನ ರಾಯಲ್ ಎನ್ ಫೀಲ್ಡ್ ಹಿಮಾಲಯನ್ ಇದೇ ಬರುವ 2016 ಮಾರ್ಚ್ 16ರಂದು ಭರ್ಜರಿ ಬಿಡುಗಡೆ ಕಾಣಲಿದೆ.

Also Read: ಇಗೊ ಬರುತ್ತಿದೆ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕ್

ವಾಹನ ಪ್ರೇಮಿಗಳು ಕಾತರದಿಂದ ಕಾದು ಕುಳಿತಿರುವ ಪ್ರಸಕ್ತ ಸಾಲಿನ ಅತಿ ದೊಡ್ಡ ಬಿಡುಗಡೆಗಳಲ್ಲಿ ಇದು ಒಂದಾಗಿದ್ದು, ರಾಯಲ್ ಎನ್ ಫೀಲ್ಡ್ ಬೈಕ್ ಚರಿತ್ರೆಯನ್ನು ಬದಲಾಯಿಸುವಷ್ಟು ಶಕ್ತವಾಗಿದೆ.

ಶಿಖರವನ್ನೇರಲು ಬರುತ್ತಿದೆ ರಾಯಲ್ ಎನ್ ಫೀಲ್ಡ್ ಹಿಮಾಲಯನ್

ನೂತನ ರಾಯಲ್ ಎನ್ ಫೀಲ್ಡ್ ಹಿಮಾಲಯನ್ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 1.8 ಲಕ್ಷ ರು.ಗಳಷ್ಟು ದುಬಾರಿಯೆನಿಸುವ ಸಾಧ್ಯತೆಯಿದೆ.

ಶಿಖರವನ್ನೇರಲು ಬರುತ್ತಿದೆ ರಾಯಲ್ ಎನ್ ಫೀಲ್ಡ್ ಹಿಮಾಲಯನ್

ನಿಮ್ಮ ಮಾಹಿತಿಗಾಗಿ, 2016 ಆಟೋ ಎಕ್ಸ್ ಪೋ ಆರಂಭಕ್ಕೂ ಒಂದು ದಿನ ಮುಂಚಿತವಾಗಿ ರಾಯಲ್ ಎನ್ ಫೀಲ್ಡ್, ಅಧಿಕೃತವಾಗಿ ಹಿಮಾಲಯನ್ ಬೈಕ್ ಅನಾವರಣಗೊಳಿಸಿತ್ತು.

ಶಿಖರವನ್ನೇರಲು ಬರುತ್ತಿದೆ ರಾಯಲ್ ಎನ್ ಫೀಲ್ಡ್ ಹಿಮಾಲಯನ್

ಇದು ಸಂಸ್ಥೆಯಿಂದ ಆಗಮನವಾಗುತ್ತಿರುವ ಮೊದಲ ಅಡ್ವೆಂಚರ್ ಟೂರರ್ ಬೈಕ್ ಆಗಿದ್ದು, ದೇಶದ ಆಫ್ ರೋಡ್ ರೇಸ್ ಚಾಲಕ ಸಿಎಸ್ ಸಂತೋಷ್ ಅವರಿಂದ ಅಗತ್ಯ ಮಾರ್ಗದರ್ಶನ ಪಡೆದುಕೊಂಡು ವಿನ್ಯಾಸಗೊಳಿಸಲಾಗಿದೆ.

ಶಿಖರವನ್ನೇರಲು ಬರುತ್ತಿದೆ ರಾಯಲ್ ಎನ್ ಫೀಲ್ಡ್ ಹಿಮಾಲಯನ್

ನೂತನ ಎನ್ ಫೀಲ್ಡ್ ಹಿಮಾಲನಯನ್ ಬೈಕ್, ಅನಾಲಾಗ್ ಸ್ಪೀಡೋಮೀಟರ್, ಟ್ಯಾಕೋಮೀಟರ್, ಕ್ಲಾಕ್ ಗಾಗಿ ಡಿಜಿಟಲ್ ಪರದೆ, ಓಡೋಮೀಟರ್, ಟ್ರಿಪ್ ಮೀಟರ್ ಜೊತೆ ದಿಕ್ಸೂಚಿ ಮತ್ತು ಅಲ್ಟಿಮೀಟರ್ ರೀಡಿಂಗ್ ಒಳಗೊಂಡ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಪಡೆಯಲಿದೆ.

ಶಿಖರವನ್ನೇರಲು ಬರುತ್ತಿದೆ ರಾಯಲ್ ಎನ್ ಫೀಲ್ಡ್ ಹಿಮಾಲಯನ್

ಇನ್ನು ಮುಂಭಾಗದಲ್ಲಿ ಲಾಂಗ್ ಟ್ರಾವೆಲ್ ಟೆಲಿಸ್ಕಾಪಿಕ್ ಫ್ರಂಟ್ ಫಾರ್ಕ್ ಹಾಗೂ ಮೊನೊಶಾಕ್ ಸಸ್ಪೆನ್ಷನ್ ಇರಲಿದೆ.

ಶಿಖರವನ್ನೇರಲು ಬರುತ್ತಿದೆ ರಾಯಲ್ ಎನ್ ಫೀಲ್ಡ್ ಹಿಮಾಲಯನ್

ಅಂತೆಯೇ ಎರಡು ಬದಿಗಳಲ್ಲಿ ಡಿಸ್ಕ್ ಬ್ರೇಕ್ ಸೌಲಭ್ಯಗಳಿರಲಿದೆ. ಆದರೆ ಎಬಿಎಸ್ ಕೊರತೆ ಕಾಡಲಿದೆ.

ಶಿಖರವನ್ನೇರಲು ಬರುತ್ತಿದೆ ರಾಯಲ್ ಎನ್ ಫೀಲ್ಡ್ ಹಿಮಾಲಯನ್

ಅಂದ ಹಾಗೆ ನೂತನ ರಾಯಲ್ ಎನ್ ಫೀಲ್ಡ್ ಹಿಮಾಲಯನ್ ಏರ್ ಕೂಲ್ಡ್ 411 ಸಿಸಿ ಸಿಂಗಲ್ ಸಿಲಿಂಡರ್ ಎಲ್ ಎಸ್4 ಎಂಜಿನ್ ನಿಂದ ನಿಯಂತ್ರಸ್ಪಡಲಿದ್ದು, 32 ಎನ್ ಎಂ ತಿರುಗುಬಲದಲ್ಲಿ 24.5 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ ಫೈವ್ ಸ್ಪೀಡ್ ಗೇರ್ ಬಾಕ್ಸ್ ಕಂಡುಬರಲಿದೆ.

ಶಿಖರವನ್ನೇರಲು ಬರುತ್ತಿದೆ ರಾಯಲ್ ಎನ್ ಫೀಲ್ಡ್ ಹಿಮಾಲಯನ್

ಡ್ಯುಯಲ್ ಪರ್ಪಸ್ ಆಫ ರೋಡ್ 21 ಇಂಚುಗಳ ಸಿಯೆಟ್ ಸ್ಪೋಕ್ಡ್ ಚಕ್ರಗಳನ್ನು ಇದಕ್ಕೆ ಜೋಡಣೆ ಮಾಡಲಾಗಿದೆ. ಇನ್ನು ಹಿಂದುಗಡೆ 18 ಇಂಚುಗಳ ಸ್ಪೋಕ್ಡ್ ರಿಮ್ ಇರಲಿದೆ.

ಶಿಖರವನ್ನೇರಲು ಬರುತ್ತಿದೆ ರಾಯಲ್ ಎನ್ ಫೀಲ್ಡ್ ಹಿಮಾಲಯನ್

ಒಟ್ಟಿನಲ್ಲಿ 182 ಕೆ.ಜಿ ಭಾರದ ರಾಯಲ್ ಎನ್ ಫೀಲ್ಡ್ ಹಿಮಾಲಯನ್ 15 ಲೀಟರ್ ಇಂಧನ ಟ್ಯಾಂಕ್ ಗಿಟ್ಟಿಸಿಕೊಳ್ಳಲಿದೆ.

ಶಿಖರವನ್ನೇರಲು ಬರುತ್ತಿದೆ ರಾಯಲ್ ಎನ್ ಫೀಲ್ಡ್ ಹಿಮಾಲಯನ್

ಅಂತಿಮವಾಗಿ 220 ಎಂಎಂ ಗ್ರೌಂಡ್ ಕ್ಲಿಯರನ್ಸ್ ಕಾಪಾಡಿಕೊಂಡಿರುವ ರಾಯಲ್ ಎನ್ ಫೀಲ್ಡ್ ಹಿಮಾಲಯನ್ 800 ಎಂಎಂ ಸೀಟು ಎತ್ತರವನ್ನು ಪಡೆದುಕೊಂಡಿದೆ.

ಇವನ್ನೂ ಓದಿ

ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಭರ್ಜರಿ ಎಂಟ್ರಿ

ಡಕಾರ್ ಚಾಂಪ್ ಸಂತೋಷ್ ಮೆಚ್ಚೆಗುಗೆ ಪಾತ್ರವಾದ ಹಿಮಾಲಯನ್ ಬೈಕ್

English summary
Royal Enfield To Launch The Himalayan On 16 March
Story first published: Saturday, March 5, 2016, 16:32 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark