ಇಗೊ ಬರುತ್ತಿದೆ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕ್

Written By:

ಈಗಾಗಲೇ ಆಟೋ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿರುವ ಬಹುನಿರೀಕ್ಷಿತ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಇದೇ ಮುಂಬರುವ ಫೆಬ್ರವರಿ 02ರಂದು ಭರ್ಜರಿ ಬಿಡುಗಡೆ ಕಾಣಲಿದೆ.

ಈ ಮೂಲಕ ದೆಹಲಿಯಲ್ಲಿ ನಡೆಯಲಿರುವ ಪ್ರತಿಷ್ಠಿತ 2016 ಆಟೋ ಎಕ್ಸ್ ಪೋಗಿಂತಲೂ ಮುನ್ನುಡಿಯಾಗಿ ಹೊಸತಾದ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಅಡ್ವೆಂಚರ್ ಬೈಕ್‌ನ ರಂಗ ಪ್ರವೇಶವಾಗಲಿದೆ.

To Follow DriveSpark On Facebook, Click The Like Button
ಸದ್ಯದಲ್ಲೇ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬಿಡುಗಡೆ

ಇತ್ತೀಚೆಗಷ್ಟೇ ಪ್ರಯೋಗಾರ್ಥ ಪರೀಕ್ಷೆಯ ವೇಳೆ ರಾಯಲ್ ಎನ್ ಫೀಲ್ಡ್ ಹಿಮಾಲಯನ್ ಬೈಕ್ ಕ್ಯಾಮೆರಾದ ರಹಸ್ಯ ಕಣ್ಣುಗಳಿಗೆ ಸೆರೆ ಸಿಕ್ಕಿದ್ದವು.

ಸದ್ಯದಲ್ಲೇ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬಿಡುಗಡೆ

ಬಲ್ಲ ಮೂಲಗಳ ಪ್ರಕಾರ ರಾಯಲ್ ಎನ್ ಫೀಲ್ಡ್ ಎರಡು ವೆರಿಯಂಟ್ ಗಳಲ್ಲಿ ಬಿಡುಗಡೆಯಾಗಲಿದೆ. ಅವುಗಳೆಂದರೆ ಅರ್ಬನ್ ಮತ್ತು ಆಫ್ ರೋಡ್.

ಸದ್ಯದಲ್ಲೇ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬಿಡುಗಡೆ

ಈ ಪೈಕಿ ಅರ್ಬನ್ ವೆರಿಯಂಟ್ ಅಲಾಯ್ ವೀಲ್ ಪಡೆದುಕೊಂಡರೆ ಆಫ್ ರೋಡ್ ಮಾದರಿಯಲ್ಲಿ ಸ್ಪೋಕ್ಡ್ ಚಕ್ರಗಳು ಜೋಡಣೆಯಾಗಲಿದೆ. ಇದಲ್ಲದೆ ವಿಂಡ್ ಶೀಲ್ಡ್, ಲಗ್ಗೇಜ್ ಬ್ಯಾಗ್ ಹಾಗೂ ಜೆರ್ರಿ ಕ್ಯಾನ್ ಪ್ರಮುಖ ಆಕರ್ಷಣೆಯಾಗಲಿದೆ.

ಸದ್ಯದಲ್ಲೇ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬಿಡುಗಡೆ

ಎರಡು ವೆರಿಯಂಟ್ ಗಳಲ್ಲೂ ರಾಯಲ್ ಕುಟುಂಬದಿಂದ ನಿರ್ಮಿತ ಹೊಸ ಎಂಜಿನ್ ಜೋಡಣೆಯಾಗಲಿದೆ. ಇದರ 431 ಸಿಸಿ ಸಿಂಗಲ್ ಸಿಲಿಂಡರ್ ಒಯಿಲ್ ಕೂಲ್ಡ್ ಎಸ್‌ಒಎಚ್‌‍ಸಿ (ಸಿಂಗಲ್ ಓವರ್ ಹೆಡ್ ಕ್ಯಾಮ್ ಶಾಫ್ಟ್) ಎಂಜಿನ್ 32 ಎನ್‌ಎಂ ತಿರುಗುಬಲದಲ್ಲಿ 30 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆ 5 ಸ್ಪೀಡ್ ಗೇರ್ ಬಾಕ್ಸ್ ಕಂಡುಬರಲಿದೆ.

ಸದ್ಯದಲ್ಲೇ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬಿಡುಗಡೆ

ಅಂದ ಹಾಗೆ ಎರಡು ಲಕ್ಷ ರು.ಗಳ ಬೆಲೆ ಪರಿಧಿಯಲ್ಲಿ ನೂತನ ರಾಯಲ್ ಎನ್ ಫೀಲ್ಡ್ ಅಡ್ವೆಂಚರ್ ಟೂರರ್ ಬೈಕ್ ಬಿಡುಗಡೆಯಾಗಲಿದೆ.

ಸದ್ಯದಲ್ಲೇ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬಿಡುಗಡೆ

ಇನ್ನುಳಿದಂತೆ ಚೆನ್ನೈನಲ್ಲಿ ಸ್ಥಿತಗೊಂಡಿರುವ ಘಟಕದಲ್ಲಿ ನಿರ್ಮಾಣವಾಗಲಿರುವ ನೂತನ ರಾಯಲ್ ಎನ್ ಫೀಲ್ಡ್ ಅಡ್ವೆಂಚರ್ ಟೂರರ್ ಬೈಕ್ ನಲ್ಲಿ ಎಲ್ ಇಡಿ ಟೈಲ್ ಲ್ಯಾಂಪ್, ಮೊನೊ ಶಾಕ್, ಸಿಟ್ಟಿಂಗ್ ವ್ಯವಸ್ಥೆ, ಮೇಲ್ಮುಖವಾದ ಎಕ್ಸಾಸ್ ಸಿಸ್ಟಂ, ಹೊಸ ಇಂಧನ ಟ್ಯಾಂಕ್ ಮತ್ತು ವಿಭಜಿತ ಸೀಟುಗಳು ಕಂಡುಬರಲಿದೆ.

English summary
Royal Enfield Himalayan Launch Date Confirmed For Feb 2
Story first published: Tuesday, January 12, 2016, 17:01 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark