ಟಾಪ್ 10 ಟು ವೀಲರ್ಸ್; ನಿಮ್ಮ ನೆಚ್ಚಿನ ಬ್ರಾಂಡ್ ಯಾವುದು?

By Nagaraja

ಭಾರತೀಯ ಮಾರುಕಟ್ಟೆಯಲ್ಲಿ ನಾಲ್ಕು ಚಕ್ರಗಳ ವಾಹನದಷ್ಟೇ ಜನಪ್ರಿಯತೆಯನ್ನು ದ್ವಿಚಕ್ರ ವಾಹನ ವಿಭಾಗ ಕಾಪಾಡಿಕೊಂಡಿದೆ. ಬಹುತೇಕ ಮಧ್ಯಮ ವರ್ಗದ ಜನತೆಯು ತಮ್ಮ ದೈನಂದಿನ ಸವಾರಿಗಾಗಿ ಬೈಕ್, ಸ್ಕೂಟರ್ ಗಳನ್ನೇ ಹೆಚ್ಚು ಆಶ್ರಯಿಸಿಕೊಂಡಿರುತ್ತಾರೆ. ಇದು ದ್ವಿಚಕ್ರ ವಾಹನ ವಿಭಾಗ ನೆಲೆಯೂರಲು ಕಾರಣವಾಗಿದೆ.

ಅತ್ತ ದೇಶದ ಮುಂಚೂಣಿಯ ಸಂಸ್ಥೆಗಳು ನಿರಂತರ ಅಂತರಾಳದಲ್ಲಿ ಅತ್ಯಾಕರ್ಷಕ ಸ್ಕೂಟರ್, ಬೈಕ್ ಗಳನ್ನು ಬಿಡುಗಡೆ ಮಾಡುವುದರಲ್ಲಿ ಕಾರ್ಯ ಮಗ್ನವಾಗಿದೆ. ಹೀಗೆ 2016ನೇ ಸಾಲಿನ ದೇಶದ ಶ್ರೇಷ್ಠ 10 ದ್ವಿಚಕ್ರ ವಾಹನ ಸಂಸ್ಥೆಗಳ ಬಗ್ಗೆ ಮಾಹಿತಿಯನ್ನು ಕೊಡಲಿದ್ದೇವೆ. ಪ್ರಸ್ತುತ ಪಟ್ಟಿಯಲ್ಲಿ ವಿದೇಶಿ ಸಂಸ್ಥೆಗಳು ಕೂಡಾ ಸ್ಥಾನ ಗಿಟ್ಟಿಸಿಕೊಂಡಿದೆ.

10. ಹಾರ್ಲೆ ಡೇವಿಡ್ಸನ್

10. ಹಾರ್ಲೆ ಡೇವಿಡ್ಸನ್

ಅಮೆರಿಕ ಐಕಾನಿಕ್ ದ್ವಿಚಕ್ರ ವಾಹನ ಬ್ರಾಂಡ್ ಆಗಿರುವ ಹಾರ್ಲೆ ಡೇವಿಡ್ಸನ್, ಪ್ರೀಮಿಯಂ ಮಾರುಕಟ್ಟೆಯಲ್ಲಿ ಭಾರತದಲ್ಲೂ ತನ್ನ ಸಾನಿಧ್ಯವನ್ನು ಗಟ್ಟಿ ಪಡಿಸಿದೆ. ಭಾರತದಲ್ಲಿ ಸ್ಟ್ರೀಟ್ 750 ಕ್ರೂಸರ್ ಬೈಕ್ ನಿಂದ ಹಿಡಿದು, ಸ್ಪೋರ್ಟ್ ಸ್ಟರ್, ಐಯಾನ್ 883, ಸ್ಟ್ರೀಟ್ ಬಾಬ್, ಫಾಟ್ ಬಾಬ್, ಫಾಟ್ ಬಾಯ್ ಮತ್ತು ರೋಡ್ ಕಿಂಗ್ ಮುಂತಾದ ಮಾದರಿಗಳನ್ನು ಮಾರಾಟ ಮಾಡುತ್ತಿದೆ.

09. ಮಹೀಂದ್ರ ಟು ವೀಲರ್ಸ್

09. ಮಹೀಂದ್ರ ಟು ವೀಲರ್ಸ್

ತನ್ನ ಶ್ರೇಣಿಯ ದ್ವಿಚಕ್ರ ವಾಹನಗಳನ್ನು ಪರಿಷ್ಕರಿಸುವ ಇರಾದೆಯಲ್ಲಿರುವ ಮಹೀಂದ್ರ ಸಂಸ್ಥೆಯು ಕೆಲವು ತಿಂಗಳುಗಳ ಹಿಂದೆಯಷ್ಟೇ 300 ಸಿಸಿ ಶಕ್ತಿಶಾಲಿ ಮೊಜೊ ಬೈಕ್ ಬಿಡುಗಡೆಗೊಳಿಸಿತ್ತು. ಭಾರತದಲ್ಲಿ ಮಹೀಂದ್ರ ಸಂಸ್ಥೆಯು ಬೈಕ್ ವಿಭಾಗದಲ್ಲಿ ಸೆಂಚುರೊ ಅದೇ ರೀತಿ ಸ್ಕೂಟರ್ ವಿಭಾಗದಲ್ಲಿ ಗಸ್ಟೊ 125, ಗಸ್ಟೊ 110, ರೊಡಿಯೊ ಯುಝಡ್ ಒ ಮತ್ತು ಡ್ಯುರೊ ಡಿಝಡ್ ಮಾದರಿಗಳನ್ನು ಒದಗಿಸುತ್ತಿದೆ.

08. ಕೆಟಿಎಂ

08. ಕೆಟಿಎಂ

ಆಸ್ಟ್ರೀಯಾ ತಳಹದಿಯ ಕೆಟಿಎಂ, ಭಾರತದಲ್ಲಿ ಬಜಾಜ್ ಆಟೋ ಸಹಯೋಗದಲ್ಲಿ ಮಾರಾಟಗೈಯುತ್ತಿದೆ. ಕೆಟಿಎಂ ಡ್ಯೂಕ್ ಶ್ರೇಣಿಯ ಬೈಕ್ ಗಳಿಗೆ ದೇಶದಲ್ಲಿ ಅದ್ಭುತ ಪ್ರತಿಕ್ರಿಯೆ ದೊರಕುತ್ತಿದ್ದು, ಯುವ ಜನಾಂಗದಲ್ಲಿ ಅಚ್ಚೊತ್ತಿ ನಿಂತಿದೆ.

07. ಸುಜುಕಿ ಮೋಟಾರ್ ಸೈಕಲ್ ಇಂಡಿಯಾ

07. ಸುಜುಕಿ ಮೋಟಾರ್ ಸೈಕಲ್ ಇಂಡಿಯಾ

ಜಿಕ್ಸರ್ ಗಳಂತಹ ಎಂಟ್ರಿ ಲೆವೆಲ್ ಕ್ರೀಡಾ ಬೈಕ್ ಭಾರತಕ್ಕೆ ಕೊಡುಗೆಯಾಗಿ ನೀಡಿರುವ ಜಪಾನ್ ಮೂಲದ ಸುಜುಕಿ ಮೋಟಾರ್ ಸೈಕಲ್ ಇಂಡಿಯಾ ಸಂಸ್ಥೆಯೀಗ ಪುನಶ್ಚೇತನದ ಹಂತದಲ್ಲಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಆಕ್ರಮಣಕಾರಿ ನೀತಿಯನ್ನು ಸುಜುಕಿಯಿಂದ ನಿರೀಕ್ಷೆ ಮಾಡಬಹುದಾಗಿದೆ. ಹಾಗಿದ್ದರೂ ಹೆಚ್ಚು ಸ್ಪರ್ಧಾತ್ಮಕ ಬೆಲೆ ಕಾಪಾಡಿಕೊಂಡಲ್ಲಿ ಸುಜುಕಿಗೆ ಮತ್ತಷ್ಟು ಏಳಿಗೆ ದೊರಕಲಿದೆ ಎಂಬ ಅನಿಸಿಕೆ ನಮ್ಮದ್ದು. ಬೈಕ್ ವಿಭಾಗದಲ್ಲಿ ಜಿಕ್ಸರ್ ಹೊರತಾಗಿ ಹಯಾಟೆ, ಜಿಎಸ್150ಆರ್ ಮತ್ತು ಸ್ಲಿಂಗ್ ಶಾಟ್ ಪ್ಲಸ್ ಮಾದರಿಗಳನ್ನು ಒದಗಿಸುತ್ತಿರುವ ಸುಜುಕಿ ಸಂಸ್ಥೆಯು ಸ್ಕೂಟರ್ ವಿಭಾಗದಲ್ಲಿ ಆಕ್ಸೆಸ್ 125, ಲೆಟ್ಸ್ ಮತ್ತು ಸ್ವಿಸ್ 125 ಮಾದರಿಗಳನ್ನು ಒದಗಿಸುತ್ತಿದೆ.

06. ಯಮಹಾ

06. ಯಮಹಾ

ಕಳೆದ ಕೆಲವು ವರ್ಷಗಳಲ್ಲಿ ಪ್ರತಿಸ್ಪರ್ಧಿಗಳಿಗೆ ಹೋಲಿಸಿದಾಗ ಕೊಂಚ ಹಿನ್ನಡೆ ಅನುಭವಿಸಿರುವ ಯಮಹಾ ಸಂಸ್ಧೆಯು ಅತ್ಯುತ್ತಮ ಬೈಕ್ ಮತ್ತು ಸ್ಕೂಟರ್ ಗಳನ್ನು ಒದಗಿಸುತ್ತಿದೆ. ಬೈಕ್ ವಿಭಾಗದಲ್ಲಿ ವಿ ಮ್ಯಾಕ್ಸ್ ನಿಂದ ಆರಂಭಿಸಿ ಎಂಟಿ-09, ವೈಝಡ್ ಎಫ್ ಆರ್3, ವೈಝಡ್ ಎಫ್ ಆರ್15ಎಸ್, ಫೇಜರ್ ಎಫ್1, ಎಫ್ ಝಡ್- ಎಫ್1 ಮತ್ತು ಸ್ಕೂಟರ್ ವಿಭಾಗದಲ್ಲಿ ಫಾಸಿನೋ, ಆಲ್ಪಾ ಮತ್ತು ರೇ ಝಡ್ ಆವೃತ್ತಿಗಳನ್ನು ಒದಗಿಸುತ್ತಿದೆ.

05. ರಾಯಲ್ ಎನ್ ಫೀಲ್ಡ್

05. ರಾಯಲ್ ಎನ್ ಫೀಲ್ಡ್

ವರ್ಷದಿಂದ ವರ್ಷಕ್ಕೆ ತನ್ನ ಐಕಾನಿಕ್ ಪಟ್ಟವನ್ನು ಮತ್ತಷ್ಟು ಸದೃಢಗೊಳಿಸುತ್ತಿರುವ ರಾಯಲ್ ಎನ್ ಫೀಲ್ಡ್, ಇತ್ತೀಚೆಗಷ್ಟೇ ಅತಿ ನೂತನ ಹಿಮಾಲಯನ್ ಬೈಕ್ ಬಿಡುಗಡೆಗೊಳಿಸಿತ್ತು. ರಾಯಲ್ ಎನ್ ಫೀಲ್ಡ್ ದೇಶದಲ್ಲಿ ಕಾಂಟಿನೆಂಟಲ್ ಜಿಟಿಯಿಂದ ಆರಂಭಿಸಿ ಥಂಡರ್ ಬರ್ಡ್ 500, ಥಂಡರ್ ಬರ್ಡ್ 350, ಕ್ಲಾಸಿಕ್ 500, ಕ್ಲಾಸಿಕ್ 350, ಬುಲೆಟ್ 500, ಬುಲೆಟ್ 350, ಬುಲೆಟ್ ಎಲೆಕ್ಟ್ರಾ ಮುಂತಾದ ಅತ್ಯಾಕರ್ಷಕ ಕ್ಲಾಸಿಕ್ ಬೈಕ್ ಗಳನ್ನು ಒದಗಿಸುತ್ತಿದೆ.

04. ಟಿವಿಎಸ್ ಮೋಟಾರ್ ಕಂಪನಿ

04. ಟಿವಿಎಸ್ ಮೋಟಾರ್ ಕಂಪನಿ

ಆಕ್ಟಿವಾಗೆ ಸೆಡ್ಡು ನೀಡುವ ರೀತಿಯಲ್ಲಿ ಜೂಪಿಟರ್ ಗಳಂತಹ ಯಶಸ್ವಿ ಸ್ಕೂಟರ್ ಗಳನ್ನು ಉತ್ಪಾದಿಸಿದ ಶ್ರೇಯಸ್ಸು ಹೊಂದರುವ ದೇಶದ ಮುಂಚೂಣಿಯ ಟಿವಿಎಸ್ ಮೋಟಾರ್ ಸಂಸ್ಥೆಯು ಬೈಕ್ ಗಿಂತಲೂ ಮಿಗಿಲಾಗಿ ಸ್ಕೂಟರ್ ವಿಭಾಗದಲ್ಲಿ ತನ್ನ ಸಾನಿಧ್ಯವನ್ನು ಬಲಪಡಿಸಿದೆ. ಬೈಕ್ ವಿಭಾಗದಲ್ಲಿ ಅಪಾಚಿ ಆರ್ ಟಿಆರ್200ವಿ, ನೂತನ ವಿಕ್ಟರ್, ಸ್ಟಾರ್ ಸಿಟಿ ಪ್ಲಸ್, ಫಿನಿಕ್ಸ್ ಮತ್ತು ಸ್ಪೋರ್ಟ್ ಮಾದರಿಗಳನ್ನು ಒದಗಿಸುತ್ತಿರುವ ಟಿವಿಎಸ್ ಸ್ಕೂಟರ್ ವಿಭಾಗದಲ್ಲಿ ಜೂಪಿಟರ್ ಹೊರತಾಗಿ ವಿಗೊ, ಸ್ಕೂಟಿ ಜೆಸ್ಟ್ 110, ಸ್ಕೂಟಿ ಪೆಪ್ ಪ್ಲಸ್ ಮುಂತಾದ ಆವೃತ್ತಿಗಳನ್ನು ನೀಡುತ್ತಿದೆ.

03. ಬಜಾಜ್ ಆಟೋ

03. ಬಜಾಜ್ ಆಟೋ

ತನ್ನ ಶ್ರೇಣಿಯ ಮಾದರಿಗಳನ್ನು ಒಂದೊಂದಾಗಿ ಪರಿಷ್ಕರಿಸುತ್ತಿರುವ ಬಜಾಜ್ ಆಟೋ ಪಲ್ಸರ್ ಶ್ರೇಣಿಯಿಂದ ಹಿಡಿದು ಅವೆಂಜರ್, ಡಿಸ್ಕವರ್, ಪ್ಲಾಟಿನಾ, ಸಿಟಿ 100 ಹೀಗೆ ಎಲ್ಲ ವಿಭಾಗದಲ್ಲೂ ಅತ್ಯುತ್ತಮ ಮಾದರಿಗಳನ್ನು ಒದಗಿಸುತ್ತಿದೆ. ಶಕ್ತಿಶಾಲಿ ಕವಾಸಕಿ ನಿಂಜಾ 650ಆರ್ ಮತ್ತು ನಿಂಜಾ 300 ಮಾರಾಟವನ್ನು ಬಜಾಜ್ ಆಟೋ ನಿರ್ವಹಿಸುತ್ತಿರುವುದು ಗಮನಾರ್ಹ.

02. ಹೋಂಡಾ ಟು ವೀಲರ್ಸ್

02. ಹೋಂಡಾ ಟು ವೀಲರ್ಸ್

ದೇಶದಲ್ಲಿ ಹೀರೊ ಜೊತೆಗಿನ ಪಾಲುದಾರಿಕೆ ಕಡಿದುಕೊಂಡ ಬಳಿಕ ತನ್ನದೇ ಆದ ಮಾರಾಟ ವಲಯ ಸೃಷ್ಟಿ ಮಾಡಿರುವ ಹೋಂಡಾ ಸಾಧಿಸಿರುವ ಪ್ರಗತಿ ನಿಜಕ್ಕೂ ಶ್ಲಾಘನೀಯ. ಇದರಿಂದ ತಿಳಿಯುವುದೇನೆಂದರೆ ಯಾವ ಹಂತದಲ್ಲಿ ಬೇಕಾದರೂ ಹೀರೊ ಅಗ್ರಸ್ಥಾನಕ್ಕೆ ಕುತ್ತು ಸಂಭವಿಸಲಿದೆ. ಬೈಕ್ ವಿಭಾಗದಲ್ಲಿ ಸಿಬಿಆರ್ 250ಆರ್ ನಿಂದ ತೊಡಗಿ ಸಿಬಿಆರ್150ಆರ್, ಸಿಬಿ ಯೂನಿಕಾರ್ನ್160, ಸಿಬಿ ಶೈನ್ ಎಸ್ ಪಿ, ಸಿಬಿ ಹಾರ್ನೆಟ್ 160ಆರ್, ಲಿವೊ ಮತ್ತು ಡ್ರೀಮ್ ಶ್ರೇಣಿಯ ಬೈಕ್ ಗಳನ್ನು ಒದಗಿಸುತ್ತಿರುವ ಹೋಂಡಾ ಸ್ಕೂಟರ್ ವಿಭಾಗದಲ್ಲಿ ಆಕ್ಟಿವಾ 125, ಆಕ್ಟಿವಾ ತ್ರಿಜಿ, ಡಿಯೊ, ಎವಿಯೇಟರ್ ಮತ್ತು ಆಕ್ಟಿವಾ ಐ ಮಾದರಿಗಳನ್ನು ನೀಡುತ್ತಿದೆ.

01. ಹೀರೊ ಮೊಟೊಕಾರ್ಪ್

01. ಹೀರೊ ಮೊಟೊಕಾರ್ಪ್

'ಮೇಡ್ ಇನ್ ಇಂಡಿಯಾ' ದ್ವಿಚಕ್ರ ವಾಹನ ಸಂಸ್ಥೆಯಾಗಿರುವ ಹೀರೊ ಮೊಟೊಕಾರ್ಪ್ ಈಗಲೂ ಅಗ್ರಸ್ಥಾನದಲ್ಲಿ ಮುಂದುವರಿದಿದ್ದು, ಮೈಲೇಜ್, ನಿರ್ವಹಣೆಯಲ್ಲಿ ಅತಿ ಹೆಚ್ಚು ನಿಷ್ಠಾವಂತಿಕೆಯನ್ನು ಕಾಪಾಡಿಕೊಂಡಿದೆ. ದೇಶದ ನಂ.1 ದ್ವಿಚಕ್ರ ವಾಹನ ಸಂಸ್ಥೆ ಹೀರೊ, ಬೈಕ್ ವಿಭಾಗದಲ್ಲಿ ಕರಿಜ್ಮಾ ಝಡ್ ಎಂಆರ್ ನಿಂದ ಹಿಡಿದು ಎಕ್ಸ್ ಟ್ರೀಮ್, ಹಂಕ್, ಇಂಪಲ್ಸ್, ಅಚೀವರ್, ಇಗ್ನಿಟರ್, ಗ್ಲಾಮರ್, ಪ್ಯಾಶನ್ ಪ್ರೊ, ಎಚ್ ಎಫ್ ಡಿಲಕ್ಸ್, ಎಚ್ ಎಫ್ ಡಾನ್ ಮತ್ತು ವಿವಿಧ ಸ್ಪ್ಲೆಂಡರ್ ಶ್ರೇಣಿಯ ಬೈಕ್ ಗಳನ್ನು ಒದಗಿಸುತ್ತಿದೆ. ಅದೇ ರೀತಿ ಸ್ಕೂಟರ್ ವಿಭಾಗದಲ್ಲಿ ಡ್ಯುಯೆಟ್, ಮ್ಯಾಸ್ಟ್ರೋ ಮತ್ತು ಪ್ಲೆಶರ್ ಮುಂತಾದ ಮಾದರಿಗಳನ್ನು ನೀಡುತ್ತಿದೆ.

More from DriveSpark

Article Published On: Monday, April 25, 2016, 16:16 [IST]
English summary
Top 10 Leading Two-Wheeler Manufacturers In India During 2016
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+