ಅತಿ ಶೀಘ್ರದಲ್ಲೇ ದೇಶದ ಚೊಚ್ಚಲ ವಿದ್ಯುತ್ ಚಾಲಿತ ಬೈಕ್ ಬಿಡುಗಡೆ
ವಾಹನ ಪ್ರೇಮಿಗಳಿಗೆ ಖುಷಿ ಸುದ್ದಿ ಬಂದಿದ್ದು, ದೇಶದ ಚೊಚ್ಚಲ ವಿದ್ಯುತ್ ಚಾಲಿತ ಬೈಕ್ ಬಿಡುಗಡೆಯಾಗಲು ಕ್ಷಣಗಣನೆ ಆರಂಭವಾಗಿದೆ. ಭಾರತದ್ದೇ ತಳಹದಿಯ ಸಂಸ್ಥೆಯಾಗಿರುವ ಟಾರ್ಕ್ ಮೋಟಾರ್ ಸೈಕಲ್ ದೇಶದ ಮೊಟ್ಟ ಮೊದಲ ಎಲೆಕ್ಟ್ರಿಕ್ ಬಿಡುಗಡೆ ಮಾಡಲಿದೆ.
ಭಾರತದ ಮೊತ್ತ ಮೊದಲ ಎಲೆಕ್ಟ್ರಿಕ್ ಬೈಕ್ 'ಟಿ6ಎಕ್ಸ್' ಎಂಬ ಹೆಸರಿನಿಂದ ಅರಿಯಲ್ಪಡಲಿದ್ದು, ಬಹುತೇಕ ನಿರ್ಮಾಣ ಹಂತವನ್ನು ತಲುಪಿದೆ. ಬಲ್ಲ ಮೂಲಗಳ ಪ್ರಕಾರ ಮುಂದಿನ ಒಂದೆರಡು ತಿಂಗಳಲ್ಲಿ ಭರ್ಜರಿ ಬಿಡುಗಡೆಯಾಗಲಿದೆ.

ಮೆಕ್ಯಾನಿಕ್ ಎಂಜಿನಿಯರ್ ಕಪಿಲ್ ಶೆಲ್ಕೆ ಎಂಬವರು 2009ನೇ ಇಸವಿಯಲ್ಲಿ ಈ ಬಹುನಿರೀಕ್ಷಿತ ಟಾರ್ಕ್ ಮೋಟಾರ್ ಸೈಕಲ್ ಸಂಸ್ಥೆಯನ್ನು ಸ್ಥಾಪಿಸಿದ್ದರು. ಅಲ್ಲದೆ ತಮ್ಮದೇ ಗರಡಿಯಲ್ಲಿ ಎಲೆಕ್ಟ್ರಿಕ್ ವಾಹನ ನಿರ್ಮಿಸುವ ಮಹತ್ತರ ಯೋಜನೆಯನ್ನು ಹೊಂದಿದ್ದರು.

ದೇಶದ ಮಾರುಕಟ್ಟೆಯಲ್ಲಿರುವ 125 ಸಿಸಿ ಬೈಕ್ ಗಳಿಗೆ ಸಮಾನವಾಗಿ ಟಾರ್ಕ್ ಮೋಟಾರ್ ಸೈಕಲ್ ರೂಪುಗೊಳ್ಳಲಿದೆ. ಹಾಗಿದ್ದರೂ ತಾಂತ್ರಿಕತೆಗಳು ಇನ್ನಷ್ಟೇ ಬಯಲಾಗಬೇಕಿದೆ.

ಟಾರ್ಕ್ ಮೋಟಾರ್ ಸೈಕಲ್ ಒಮ್ಮೆ ಜಾರ್ಜ್ ಮಾಡಿಸಿದ್ದಲ್ಲಿ 100 ಕೀ.ಮೀ.ಗೂ ಹೆಚ್ಚು ವ್ಯಾಪ್ತಿಯನ್ನು ಕ್ರಮಿಸಲಿದೆ. ಪ್ರಸ್ತುತ ಬೈಕ್ ಗಂಟೆಗೆ 95 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯವನ್ನು ಹೊಂದಿರಲಿದೆ.

ಟಾಕ್ ವಿದ್ಯುತ್ ಚಾಲಿತ ಬೈಕ್ ನ ವಿನ್ಯಾಸ, ಚಾಸೀ, ಬಿಡಿಭಾಗವನ್ನು ಸಂಸ್ಥೆಯ ಇನ್ ಹೌಸ್ ಘಟಕದಲ್ಲೇ ಅಭಿವೃದ್ಧಿಪಡಿಸಲಾಗಿದೆ. ಇದಕ್ಕಾಗಿ ವಿವಿಧ ಸೈಕಲ್ ಬಿಡಿಭಾಗಗಳನ್ನು ಆಮದು ಮಾಡಲಾಗಿತ್ತು.

ಅಷ್ಟೇ ಯಾಕೆ ಟಾರ್ಕ್ ವಿದ್ಯುತ್ ಚಾಲಿತ ಮೋಟಾರ್ ಸೈಕಲ್ ಗಾಗಿ ಸಿಯೆಟ್ ಟೈರ್ಸ್ ಅತಿ ವಿಶೇಷವಾದ ಚಕ್ರಗಳನ್ನು ನಿರ್ಮಿಸುತ್ತಿದೆ.

ಆಧುನಿಕತೆಗೆ ತಕ್ಕಂತೆ ಆನ್ ಬೋರ್ಡ್ ನೇವಿಗೇಷನ್, ಕ್ಲೌಡ್ ಕನೆಕ್ಟಿವಿಟಿ, ಸಂಪೂರ್ಣ ಡಿಜಿಟಲ್ ಪರದೆ ಹಾಗೂ ತ್ವರಿತ ಚಾರ್ಜ್ ವ್ಯವಸ್ಥೆಯನ್ನು ನೂತನ ಎಲೆಕ್ಟ್ರಿಕ್ ಬೈಕ್ ಪಡೆಯಲಿದೆ.

ಇನ್ನು ಮೂಲಸೌಕರ್ಯದತ್ತ ಗಮನ ಕೇಂದ್ರಿಕರಿಸಿರುವ ಟಾರ್ಕ್ ಮೋಟಾರ್ ಸೈಕಲ್, ಪ್ರಾರಂಭಿಕ ಹಂತದಲ್ಲಿ ಬೆಂಗಳೂರು ಸೇರಿದಂತೆ ದೇಶದ ಐದು ಪ್ರಮುಖ ನಗರಗಳಲ್ಲಿ 100ರಷ್ಟು ಚಾರ್ಜಿಂಗ್ ಪಾಯಿಂಟ್ ಗಳನ್ನು ಲಗತ್ತಿಸಲಿದೆ.

ಈ ಸಂಬಂಧ ಹೇಳಿಕೆ ಕೊಟ್ಟಿರುವ ಟಾರ್ಕ್ ಮೋಟಾರ್ ಸೈಕಲ್, ಮೊದಲ ವರ್ಷದಲ್ಲಿ 10,000 ಯುನಿಟ್ ಗಳಷ್ಟು ಎಲೆಕ್ಟ್ರಿಕ್ ಬೈಕ್ ಮಾರಾಟ ಗುರಿಯನ್ನಿಡಲಾಗಿದೆ ಎಂದು ತಿಳಿಸಿದೆ.


Click it and Unblock the Notifications








