ಪ್ರಸಕ್ತ ಆರ್ಥಿಕ ಸಾಲಿನಲ್ಲೇ ಟಿವಿಎಸ್ ಅಕುಲಾ ಬಿಡುಗಡೆ

By Nagaraja

ಇದೀಗ ಎಲ್ಲವೂ ಅಂತಿಮಗೊಂಡಿದ್ದು, ದ್ವಿಚಕ್ರ ವಾಹನ ಪ್ರೇಮಿಗಳು ಕಾತರದಿಂದ ಕಾದು ಕುಳಿತುಕೊಂಡಿರುವ ಬಹುನಿರೀಕ್ಷಿತ ಟಿವಿಎಸ್ ಅಕುಲಾ ಕ್ರೀಡಾ ಬೈಕ್ ಪ್ರಸಕ್ತ ಆರ್ಥಿಕ ಸಾಲಿನಲ್ಲೇ ಬಿಡುಗಡೆಯಾಗಲಿದೆ.

ಈ ಬಗ್ಗೆ ಸ್ಪಷ್ಟನೆ ಕೊಟ್ಟಿರುವ ಟಿವಿಎಸ್ ಮೋಟಾರು ಕಂಪನಿ ಲಿಮಿಟೆಡ್ ಅಧ್ಯಕ್ಷ ಹಾಗೂ ಸಿಇಒ ಕೆ.ಎನ್. ರಾಧಾಕೃಷ್ಣನ್, ಪ್ರಸಕ್ತ ಆರ್ಥಿಕ ಸಾಲಿನ ಅಂತ್ಯದೊಳಗೆ ನಿಮ್ಮ ನೆಚ್ಚಿನ ಅಕುಲಾ 310 ಸಿಸಿ ಬೈಕ್ ಬಿಡುಗಡೆ ಮಾಡುವುದಾಗಿ ಪ್ರಕಟಿಸಿದ್ದಾರೆ.

ಪ್ರಸಕ್ತ ಆರ್ಥಿಕ ಸಾಲಿನಲ್ಲೇ ಟಿವಿಎಸ್ ಅಕುಲಾ ಬಿಡುಗಡೆ

ನಿಮ್ಮ ಮಾಹಿತಿಗಾಗಿ ಜರ್ಮನಿಯ ಐಕಾನಿಕ್ ಬಿಎಂಡಬ್ಲ್ಯು ಮೊಟೊರಾಡ್ ಜೊತೆಗಾರಿಕೆಯಲ್ಲಿ ಟಿವಿಎಸ್ ಅಕುಲಾ 310 ಸಿಸಿ ಬೈಕನ್ನು ಅಭಿವೃದ್ಧಿಪಡಿಸಲಾಗಿದೆ. ಭಾರತದಲ್ಲಿ ಇದು ಜನಪ್ರಿಯ ಟಿವಿಎಸ್ ಅಪಾಚೆ ಆರ್‌ಟಿಆರ್ 300 ಎಂಬ ಹೆಸರಿನಿಂದ ಮಾರಾಟವಾಗುವ ಸಾಧ್ಯತೆ ಹೆಚ್ಚಾಗಿದೆ.

ಪ್ರಸಕ್ತ ಆರ್ಥಿಕ ಸಾಲಿನಲ್ಲೇ ಟಿವಿಎಸ್ ಅಕುಲಾ ಬಿಡುಗಡೆ

313 ಸಿಸಿ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಟಿವಿಎಸ್ ಅಕುಲಾ, 28 ಎನ್ ಎಂ ತಿರುಗುಬಲದಲ್ಲಿ 34 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ ಆರು ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿರುತ್ತದೆ.

ಪ್ರಸಕ್ತ ಆರ್ಥಿಕ ಸಾಲಿನಲ್ಲೇ ಟಿವಿಎಸ್ ಅಕುಲಾ ಬಿಡುಗಡೆ

ಇದಕ್ಕೂ ಮೊದಲು 2016 ಆಟೋ ಎಕ್ಸ್ ಪೋದಲ್ಲಿ 310 ಸಿಸಿ ರೇಸ್ ಬೈಕನ್ನು ಮೊದಲ ಬಾರಿಗೆ ಪ್ರದರ್ಶನಗೊಳಿಸಿತ್ತು. ಟಿವಿಎಸ್ ಅಕುಲಾದ ಪ್ರವೇಶದ ಬಳಿಕ ಬಿಎಂಡಬ್ಲ್ಯು ಮೊಟೊರಾಡ್ ಸಹ ತನ್ನದೇ ವೈಶಿಷ್ಟ್ಯಗಳೊಂದಿಗೆ 310 ಆರ್ ಬೈಕನ್ನು ದೇಶಕ್ಕೆ ಪರಿಚಯಿಸಲಿದೆ.

ಪ್ರಸಕ್ತ ಆರ್ಥಿಕ ಸಾಲಿನಲ್ಲೇ ಟಿವಿಎಸ್ ಅಕುಲಾ ಬಿಡುಗಡೆ

ತಮಿಳುನಾಡಿನಲ್ಲಿ ಸ್ಥಿತಗೊಂಡಿರುವ ಹೊಸೂರು ಘಟಕದಲ್ಲಿ ಅಕುಲಾ 310 ಕ್ರೀಡಾ ಬೈಕ್ ನಿರ್ಮಾಣವಾಗಲಿದೆ. ಇದು ಪ್ರಮುಖವಾಗಿಯೂ ಕೆಟಿಎಂ ಆರ್‌ಸಿ390, ಕವಾಸಕಿ ನಿಂಜಾ 300 ಮತ್ತು ಯಮಹಾ ಆರ್3 ಮಾದರಿಗಳಿಗೆ ಪೈಪೋಟಿಯನ್ನು ಒಡ್ಡಲಿದೆ.

ಪ್ರಸಕ್ತ ಆರ್ಥಿಕ ಸಾಲಿನಲ್ಲೇ ಟಿವಿಎಸ್ ಅಕುಲಾ ಬಿಡುಗಡೆ

ಯುಎಸ್ ಡಿ ಫ್ರಂಟ್ ಫಾರ್ಕ್, ರಿಯರ್ ಮೊನೊಶಾಕ್, ಡ್ಯುಯಲ್ ಚಾನೆಲ್ ಎಬಿಎಸ್ ಮತ್ತು ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಪಡೆಯಲಿದೆ.

More from DriveSpark

Article Published On: Thursday, August 4, 2016, 17:12 [IST]
English summary
TVS Motors Confirms The Launch Of A 300cc Motorcycle For India
Read more on ಟಿವಿಎಸ್
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+