2 ಲಕ್ಷ ಬೆಲೆ ಪರಿಧಿಯೊಳಗೆ ಟಿವಿಎಸ್ ಅಕುಲಾ 310 ಬಿಡುಗಡೆ

ಗರಿಷ್ಠ ತಂತ್ರಜ್ಞಾನವನ್ನು ಒಳಗೊಂಡಿರುವ ಅಕುಲಾ 310 ದೇಶದ ಕ್ರೀಡಾ ಬೈಕ್ ಶ್ರೇಣಿಯಲ್ಲಿ ಧೂಳೆಬ್ಬಿಸುವ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿದೆ.

By Nagaraja

ದೇಶದ ಮುಂಚೂಣಿಯ ದ್ವಿಚಕ್ರ ವಾಹನ ಸಂಸ್ಥೆ ಟಿವಿಎಸ್ ಅತಿ ಶೀಘ್ರದಲ್ಲೇ ಬಹುನಿರೀಕ್ಷಿತ ಅಕುಲಾ 310 ಕ್ರೀಡಾ ಬೈಕನ್ನು ಬಿಡುಗಡೆ ಮಾಡಲಿದೆ. ಜರ್ಮನಿಯ ಐಕಾನಿಕ್ ಬಿಎಂಡಬ್ಲ್ಯು ಮೊಟೊರಾಡ್ ಜೊತೆಗಾರಿಕೆಯಲ್ಲಿ ನೂತನ ಟಿವಿಎಸ್ ಅಕುಲಾ 310 ಬೈಕ್ ಅಭಿವೃದ್ಧಿಪಡಿಸಿರುವುದು ವಿಶೇಷ. ಇದರಲ್ಲಿ ಗರಿಷ್ಠ ತಂತ್ರಗಾರಿಕೆಗಳನ್ನು ಆಳವಡಿಸಲಾಗಿದೆ.

2 ಲಕ್ಷ ಬೆಲೆ ಪರಿಧಿಯೊಳಗೆ ಟಿವಿಎಸ್ ಅಕುಲಾ 310 ಬಿಡುಗಡೆ

ಅಂತೂ ಇಂತೂ ಟಿವಿಎಸ್ ಅಕುಲಾ 310 ಬೈಕ್ ಬಿಡುಗಡೆಗೆ ಕಾಲ ನಿಗದಿಯಾಗಿದ್ದು, 2017 ಫೆಬ್ರವರಿ-ಮಾರ್ಚ್ ವೇಳೆಯಾಗುವಾಗ ಬಿಡುಗಡೆಯಾಗಲಿದೆ.

2 ಲಕ್ಷ ಬೆಲೆ ಪರಿಧಿಯೊಳಗೆ ಟಿವಿಎಸ್ ಅಕುಲಾ 310 ಬಿಡುಗಡೆ

ತಮಿಳುನಾಡಿನ ಹೊಸೂರು ಘಟಕದಲ್ಲಿ ನಿರ್ಮಾಣವಾಗಿರುವ ಟಿವಿಎಸ್ ಅಕುಲಾ 310 ಬೈಕ್ ಅಂದಾಜು ಎರಡು ಲಕ್ಷ ರು.ಗಳ ಬೆಲೆ ಪರಿಧಿಯಲ್ಲಿ ಬಿಡುಗಡೆಯಾಗಲಿದೆ.

2 ಲಕ್ಷ ಬೆಲೆ ಪರಿಧಿಯೊಳಗೆ ಟಿವಿಎಸ್ ಅಕುಲಾ 310 ಬಿಡುಗಡೆ

ಬಿಎಂಡಬ್ಲ್ಯು ಮೊಟೊರಾಡ್ ಭಾರತದಲ್ಲಿ ಬಿಡುಗಡೆ ಮಾಡಲಿರುವ ಜಿ310ಆರ್ ಬೈಕ್ ನ ಸಂಪೂರ್ಣ ಫೇರ್ಡ್ ವರ್ಷನ್ ಇದಾಗಿದೆ. ವರ್ಷಾರಂಭದಲ್ಲಿ ನಡೆದ 2016 ಮೊದಲ ಬಾರಿಗೆ ಪ್ರದರ್ಶನ ಕಂಡಿತ್ತು.

2 ಲಕ್ಷ ಬೆಲೆ ಪರಿಧಿಯೊಳಗೆ ಟಿವಿಎಸ್ ಅಕುಲಾ 310 ಬಿಡುಗಡೆ

ಟಿವಿಎಸ್ ಅಕುಲಾ 310 ಮತ್ತು ಬಿಎಂಡಬ್ಲ್ಯು ಜಿ310ಆರ್ ಬೈಕ್ ಗಳಲ್ಲಿ ಸಮಾನವಾದ ಎಂಜಿನ್, ಚಾಸೀ, ಸ್ವಿಂಗರ್ಮ್ ಇತ್ಯಾದಿ ತಾಂತ್ರಿಕತೆಗಳನ್ನು ಬಳಕೆ ಮಾಡಲಾಗಿದೆ.

2 ಲಕ್ಷ ಬೆಲೆ ಪರಿಧಿಯೊಳಗೆ ಟಿವಿಎಸ್ ಅಕುಲಾ 310 ಬಿಡುಗಡೆ

ಬಿಎಂಡಬ್ಲ್ಯು 310ಆರ್ 28 ಎನ್ ಎಂ ತಿರುಗುಬಲದಲ್ಲಿ 34 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಇದೇ ಎಂಜಿನ್ ಮಾನದಂಡವನ್ನು ಟಿವಿಎಸ್ ಅಕುಲಾ 310 ಗಿಟ್ಟಿಸಿಕೊಳ್ಳುವ ಸಾಧ್ಯತೆಯಿದೆ.

2 ಲಕ್ಷ ಬೆಲೆ ಪರಿಧಿಯೊಳಗೆ ಟಿವಿಎಸ್ ಅಕುಲಾ 310 ಬಿಡುಗಡೆ

ನೂತನ ಅಕುಲಾ 310 ಅಪ್ ಸೈಡ್ ಡೌನ್ ಫಾರ್ಕ್ ಮತ್ತು ಮೊನೊಶಾಕ್ ರಿಯರ್ ಸಸ್ಷೆನ್ಷನ್ ವ್ಯವಸ್ಥೆಯನ್ನು ಪಡೆದಿದೆ.

2 ಲಕ್ಷ ಬೆಲೆ ಪರಿಧಿಯೊಳಗೆ ಟಿವಿಎಸ್ ಅಕುಲಾ 310 ಬಿಡುಗಡೆ

ಹಾಗೆಯೇ 17 ಇಂಚುಗಳ ಸಾಫ್ಟ್ ಕೌಂಪೌಂಡ್ ಮಿಚಿಲಿನ್ ಚಕ್ರಗಳು, ಫ್ರಂಟ್ ಆಂಡ್ ರಿಯರ್ ಪೆಡಲ್ ಡಿಸ್ಕ್ ಮತ್ತು ಡ್ಯುಯಲ್ ಚಾನೆಲ್ ಆ್ಯಂಟಿ ಲಾಕ್ ಬ್ರೇಕಿಂಗ್ ವ್ಯವಸ್ಥೆಯಿಂದ ಜೋಡಿಸಲ್ಪಟ್ಟಿದೆ.

2 ಲಕ್ಷ ಬೆಲೆ ಪರಿಧಿಯೊಳಗೆ ಟಿವಿಎಸ್ ಅಕುಲಾ 310 ಬಿಡುಗಡೆ

ಭಾರತದಲ್ಲಿ ಪ್ರಮುಖವಾಗಿಯೂ ಕೆಟಿಎಂ ಆರ್ ಸಿ 390 ಮತ್ತು ಬೆನೆಲ್ಲಿ ಟೊರ್ನಡೊ 302 ಮಾದರಿಗಳಿಗೆ ನೂತನ ಅಕುಲಾ 310 ಪ್ರತಿಸ್ಪರ್ಧೆಯಾಗಲಿದೆ.

More from DriveSpark

Article Published On: Thursday, November 24, 2016, 12:12 [IST]
English summary
TVS Akula Fans — Get The Party Started: Akula 310 Launch Date Confirmed For India
Read more on ಟಿವಿಎಸ್
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+