ಬೈಕ್ ಪ್ರೇಮಿಗಳೇ, ಹೊಸ 'ಅಪಾಚೆ' ಬರಮಾಡಿಕೊಳ್ಳಲು ಸಜ್ಜಾಗಿರಿ!
ಬಿಡುಗಡೆಗೂ ಇನ್ನೇನು ಎರಡು ದಿನಗಳು ಮಾತ್ರ ಬಾಕಿ ಉಳಿದಿರುವಂತೆಯೇ ನೂತನ ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ ಬೈಕ್ ಗೆ ಸಂಬಂಧಪಟ್ಟ ಸಂಪೂರ್ಣ ಮಾಹಿತಿಗಳು ಬಹಿರಂಗಗೊಂಡಿದೆ.
Also Read: ಟಿವಿಎಸ್ ಜೊತೆಗಾರಿಕೆಯಲ್ಲಿ ಬಿಎಂಡಬ್ಲ್ಯು 300 ಸಿಸಿ ಬೈಕ್ ಭಾರತಕ್ಕೆ
ನೂತನ ಟಿವಿಎಸ್ ಆಪಾಚೆ ಆರ್‌ಟಿಆರ್ 200 4ವಿ ಇದೇ ಬರುವ 2016 ಜನವರಿ 20ರಂದು ಭರ್ಜರಿ ಬಿಡುಗಡೆ ಕಾಣಲಿದೆ. ಇದಕ್ಕೂ ಮುಂಚಿತವಾಗಿ ಅಂತರ್ಜಾಲದಲ್ಲಿ ಆಕರ್ಷಕ ಚಿತ್ರಗಳು ಹಾಗೂ ವೈಶಿಷ್ಟ್ಯಗಳು ಲೀಕ್ ಆಗಿವೆ.

ನೂತನ 2016 ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ ಮುಂಭಾಗ ಹಾಗೂ ಹಿಂಭಾಗದಲ್ಲಿ ಸ್ಟ್ಯಾಂಡರ್ಡ್ ಫಾರ್ಕ್, ಮೊನೊಶಾಕ್, ಪೆಡಲ್ ಡಿಸ್ಕ್ ಬ್ರೇಕ್ ಹಾಗೂ ವಿಭಜಿತ ಫೈವ್ ಸ್ಪೋಕ್ ಅಲಾಯ್ ವೀಲ್ ಮುಂತಾದ ವೈಶಿಷ್ಟ್ಯಗಳನ್ನು ಪಡೆಯಲಿದೆ.

ಎಂಜಿನ್ ತಾಂತ್ರಿಕತೆ
ಅತಿ ನೂತನ ಟಿವಿಎಸ್ ಆಪಾಚೆ ಆರ್‌ಟಿಆರ್ 200 4ವಿ ಬೈಕ್ 197.75 ಸಿಸಿ ಸಿಂಗಲ್ ಸಿಲಿಂಡರ್ ಒಯಿಲ್ ಕೂಲ್ಡ್ ಎಂಜಿನ್ ನಿಂದ ನಿಯಂತ್ರಿಸ್ಪಡಲಿದ್ದು, 18.1 ಎನ್‌ಎಂ (7,000 rpm) ತಿರುಗುಬಲದಲ್ಲಿ 20.23 ಅಶ್ವಶಕ್ತಿಯನ್ನು (8,500 rpm) ಉತ್ಪಾದಿಸಲಿದೆ.

ಇನ್ನುಳಿದಂತೆ ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ವಿಭಜಿತ ಸೀಟು, ಮೊನೊ ಹ್ಯಾಲಗನ್ ಹೆಡ್ ಲ್ಯಾಂಪ್ ಜೊತೆ 'ಸಿ' ಆಕಾರದ ಎಲ್‌ಇಡಿ ಡೇಟೈಮ್ ರನ್ನಿಂಗ್ಸ್ ಲೈಟ್ಸ್ ಕಂಡುಬರಲಿದೆ.

ಟಿವಿಎಸ್ ಅಪಾಚೆ ಆರ್‌ಟಿಆರ್ 200 ಅಂದಾಜು ಒಂದು ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ. ಒಂದು ವೇಳೆ ಎಬಿಎಸ್ ಸ್ಟ್ಯಾಂಡರ್ಡ್ ಆಗಿ ದೊರಕಿದ್ದಲ್ಲಿ 1.3 ಲಕ್ಷ ರು.ಗಳಷ್ಟು ಬೆಲೆ ಬಾಳಲಿದೆ.

- ಕೆರ್ಬ್ ಭಾರ 148 ಕೆ.ಜಿ
- ಗೇರ್ ಬಾಕ್ಸ್: 5 ಸ್ಪೀಡ್
- ಇಗ್ನಿಷನ್ ಸಿಸ್ಟಂ: ಡ್ಯುಯಲ್ ಮೋಡ್ ಡಿಜಿಟಲ್ (ಐಡಿಐ)
- ಸ್ಟ್ಯಾರ್ಟಿಂಗ್ ಸಿಸ್ಟಂ: ಸೆಲ್ಪ್

ಚಿತ್ರಗಳಲ್ಲಿ...
ಟಿವಿಎಸ್ ಆಪಾಚೆ ಆರ್‌ಟಿಆರ್ 200 4ವಿಹೆಡ್ ಲ್ಯಾಂಪ್

ಚಿತ್ರಗಳಲ್ಲಿ...
ಟಿವಿಎಸ್ ಆಪಾಚೆ ಆರ್‌ಟಿಆರ್ 200 4ವಿ ವಿಭಜಿತ 5 ಸ್ಪೋಕ್ ಅಲಾಯ್ ವೀಲ್

ಚಿತ್ರಗಳಲ್ಲಿ...
ಟಿವಿಎಸ್ ಆಪಾಚೆ ಆರ್‌ಟಿಆರ್ 200 4ವಿ ಬಣ್ಣಗಳು

ಚಿತ್ರಗಳಲ್ಲಿ...
ಟಿವಿಎಸ್ ಆಪಾಚೆ ಆರ್‌ಟಿಆರ್ 200 4ವಿ ಬಣ್ಣಗಳು

ಚಿತ್ರಗಳಲ್ಲಿ...
ಟಿವಿಎಸ್ ಆಪಾಚೆ ಆರ್‌ಟಿಆರ್ 200 4ವಿ ಬಣ್ಣಗಳು

ಚಿತ್ರಗಳಲ್ಲಿ...
ಟಿವಿಎಸ್ ಆಪಾಚೆ ಆರ್‌ಟಿಆರ್ 200 4ವಿ ಬಣ್ಣಗಳು

ಹೊಸ ವರ್ಷದಲ್ಲಿ ಧೋನಿ-ಪ್ರಭು 'ಲುಂಗಿ' ಡ್ಯಾನ್ಸ್ ಮುಂದಕ್ಕೆ ಓದಿ


Click it and Unblock the Notifications








