ಟಿವಿಎಸ್ ಅಪಾಚೆ ಆರ್‌ಟಿಆರ್ 200ವಿ ಭರ್ಜರಿ ಬಿಡುಗಡೆ

By Nagaraja

ದೇಶದ ಮುಂಚೂಣಿಯ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆ ಟಿವಿಎಸ್ ಮೋಟಾರ್ಸ್, ಭಾರತ ಮಾರುಕಟ್ಟೆಯಲ್ಲಿ ಅತಿ ನೂತನ ಅಪಾಚೆ ಆರ್‌ಟಿಆರ್ 200ವಿ ಬೈಕ್ ಭರ್ಜರಿ ಬಿಡುಗಡೆ ಮಾಡಿದೆ.

ಪ್ರಾರಂಭಿಕ ಬೆಲೆ: 88,990 ರು. (ಎಕ್ಸ್ ಶೋ ರೂಂ ದೆಹಲಿ)

ಒಂದು ಕಾಲದಲ್ಲಿ ಹೆಚ್ಚಿನ ಯಶಸ್ಸು ಸಾಧಿಸಿರುವ ಅಪಾಚೆ ಗತಕಾಲದ ವೈಭವ ಮರುಕಳಿಸುವ ಇರಾದೆಯೊಂದಿಗೆ ಭರ್ಜರಿ ಪುನರಾಗಮನ ಮಾಡಿಕೊಂಡಿದೆ.

ಟಿವಿಎಸ್ ಅಪಾಚೆ ಆರ್‌ಟಿಆರ್ 200ವಿ ಭರ್ಜರಿ ಬಿಡುಗಡೆ

ಟಿವಿಎಸ್ ಅಪಾಚೆ ಆರ್‌ಟಿಆರ್ 200ವಿ ಭರ್ಜರಿ ಬಿಡುಗಡೆ

  • ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ (ಕಾರ್ಬ್ಯುರೇಟರ್): 88,990 ರು.
  • ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ (ಫ್ಯೂಯಲ್ ಇಂಜೆಕ್ಷನ್): 1.07 ಲಕ್ಷ ರು.
  • ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ (ಎಬಿಎಸ್): 1.15 ಲಕ್ಷ ರು.
  • ಟಿವಿಎಸ್ ಅಪಾಚೆ ಆರ್‌ಟಿಆರ್ 200ವಿ ಭರ್ಜರಿ ಬಿಡುಗಡೆ

    ಈ ಪೈಕಿ ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ ಎಬಿಎಸ್ ಮಾದರಿಯು ಇನ್ನಷ್ಟೇ ಬಿಡುಗಡೆಯಾಗಬೇಕಿದೆ. ಇನ್ನೊಂದೆಡೆ ಫ್ಯೂಯಲ್ ಇಂಜೆಕ್ಟಡ್ ಹಾಗೂ ಕಾರ್ಬ್ಯುರೇಟಡ್ ಆವೃತ್ತಿಯನ್ನು ಮಾರುಕಟ್ಟೆಯನ್ನು ಪ್ರವೇಶಿಸಲಿದೆ.

    ಎಂಜಿನ್ ಮತ್ತು ಗೇರ್ ಬಾಕ್ಸ್

    ಎಂಜಿನ್ ಮತ್ತು ಗೇರ್ ಬಾಕ್ಸ್

    ನೂತನ ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ ಫ್ಯೂಯಲ್ ಇಂಜೆಕ್ಟನ್ ಸಿಸ್ಟಂ ಮಾದರಿಯು 197 ಸಿಸಿ ಒಯಿಲ್ ಮತ್ತು ಏರ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 18 ಎನ್‌ಎಂ ತಿರುಗುಬಲದಲ್ಲಿ 21 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

    ಟಿವಿಎಸ್ ಅಪಾಚೆ ಆರ್‌ಟಿಆರ್ 200ವಿ ಭರ್ಜರಿ ಬಿಡುಗಡೆ

    ಇನ್ನೊಂದೆಡೆ ಕಾರ್ಬ್ಯುರೇಟರ್ ಮಾದರಿಯು 20 ಅಶ್ವಶಕ್ತಿಯನ್ನು ಪಡೆಯಲಿದೆ. ಇವೆರಡು ಸಮಾನವಾಗಿ 5 ಸ್ಪೀಡ್ ಗೇರ್ ಬಾಕ್ಸ್ ಪಡೆಯಲಿದ್ದು, 3.9 ಸೆಕೆಂಡುಗಳಲ್ಲಿ ಗಂಟೆಗೆ 0-60 ಕೀ.ಮೀ. ವೇಗವರ್ಧಿಸಲಿದೆ.

    ಟಿವಿಎಸ್ ಅಪಾಚೆ ಆರ್‌ಟಿಆರ್ 200ವಿ ಭರ್ಜರಿ ಬಿಡುಗಡೆ

    ಪ್ರಮುಖವಾಗಿಯೂ ಕೆಟಿಎಂ ಡ್ಯೂಕ್ 200 ಹಾಗೂ ಪಲ್ಸರ್ ಎಎಸ್ 200 ಮಾದರಿಗಳಿಗೆ ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ ಪ್ರತಿಸ್ಪರ್ಧಿಯಾಗಲಿದೆ.

    ವೈಶಿಷ್ಟ್ಯಗಳು

    ವೈಶಿಷ್ಟ್ಯಗಳು

    ಮುಂಭಾಗದಲ್ಲಿ ಟೆಲಿಸ್ಕಾಪಿಕ್ ಫ್ರಂಟ್ ಫಾರ್ಕ್, ಹಿಂಭಾಗದಲ್ಲಿ ಮೊನೊಶಾಕ್, ಮುಂದೆ ಹಾಗೂ ಹಿಂದುಗಡೆ ಡಿಸ್ಕ್ ಬ್ರೇಕ್ ಗಳನ್ನು ಪಡೆಯಲಿದೆ.

    ವೈಶಿಷ್ಟ್ಯಗಳು

    ವೈಶಿಷ್ಟ್ಯಗಳು

    ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಡೇಟೈಮ್ ರನ್ನಿಂಗ್ ಲೈಟ್ಸ್, ಅಲಾಯ್ ವೀಲ್ಸ್, ವಿಭಜಿತ ಸೀಟು, ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ (ಇನ್ನಷ್ಟೇ ಬಿಡುಗಡೆಯಾಗಬೇಕಿದೆ), ಲ್ಯಾಪ್ ಟೈಮರ್, ಗೇರ್ ಸ್ಥಾನ ಸೂಚಿಸುವ ಇಂಡಿಕೇಟರ್ ಹಾಗೂ ಸರ್ವಿಸ್ ಇಂಡಿಕೇಟರ್ ಲಭ್ಯವಾಗಲಿದೆ. ಇವೆಲ್ಲದರ ಹೊರತಾಗಿ ಐಚ್ಛಿಕ ಪೈರಲ್ಲಿ ಚಕ್ರ ಆಯ್ಕೆ ಮಾಡುವ ಅವಕಾಶವೂ ಇರುತ್ತದೆ.

More from DriveSpark

Article Published On: Wednesday, January 20, 2016, 14:33 [IST]
English summary
TVS Apache RTR 200 4V Launched In India For Rs. 88,990/-
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+