ಟಿವಿಎಸ್ ಅಪಾಚೆ ಆರ್‌ಟಿಆರ್ 310ಎಸ್ ಬೈಕಿನ ಬಿಡುಗಡೆ ದಿನಾಂಕ ನಿಗದಿ

Written By:

ಭಾರತೀಯ ರಸ್ತೆಗಳಲ್ಲಿ ಹಲವಾರು ಬಾರಿ ಪರೀಕ್ಷೆ ವೇಳೆ ಕಾಣಿಸಿಕೊಂಡಿದ್ದ ಅಪಾಚೆ ಆರ್‌ಟಿಆರ್ 310ಎಸ್ ಬೈಕಿನ ಬಿಡುಗಡೆ ದಿನಾಂಕ ಹತ್ತಿರ ಬಂದಿದ್ದು, ಈ ಬಗ್ಗೆ ಅಧಿಕೃತ ಮಾಹಿತಿಯೊಂದು ಹೊರಬಿದ್ದಿದೆ.

ಅಪಾಚೆ ಆರ್‌ಟಿಆರ್ 310ಎಸ್ ಬೈಕಿನ ಬಿಡುಗಡೆ ದಿನಾಂಕ ನಿಗದಿ ಮಾಡಿದ ಟಿವಿಎಸ್

ಭಾರತದ ದ್ವಿಚಕ್ರ ವಾಹನ ತಯಾರಕ ಕಂಪೆನಿಯಾದ ಟಿವಿಎಸ್ ದೇಶದಲ್ಲಿ ಮೊದಲ ಬಾರಿಗೆ ಸಂಪೂರ್ಣವಾಗಿ ಅಂದಗೊಂಡಿರುವ ಅಪಾಚೆ ಆರ್‌ಟಿಆರ್ 310ಎಸ್ ಮೋಟಾರ್‌ಸೈಕಲ್ ಬಿಡುಗಡೆಗೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಈ ಮೋಟಾರ್‌ಸೈಕಲ್ 2017ರ ನವೆಂಬರ್ ತಿಂಗಳ ಮಧ್ಯ ಅಥವಾ ಅಂತ್ಯದ ಹೊತ್ತಿಗೆ ಬಿಡುಗಡೆ ಮಾಡಲಾಗುತ್ತದೆ.

ಅಪಾಚೆ ಆರ್‌ಟಿಆರ್ 310ಎಸ್ ಬೈಕಿನ ಬಿಡುಗಡೆ ದಿನಾಂಕ ನಿಗದಿ ಮಾಡಿದ ಟಿವಿಎಸ್

ಈಗಾಗಲೇ ಮೋಟರ್ ಸೈಕಲ್‌ನ ಪೇಟೆಂಟ್ ಚಿತ್ರಗಳು ಸೋರಿಕೆಯಾಗಿದ್ದು, ಬಿಡುಗಡೆಯ ನಂತರ ಟಿವಿಎಸ್ ಕಂಪನಿಯ ಸ್ಥಿರತೆಯ ಬೈಕ್ ವಿಚಾರದಲ್ಲಿ ಅತ್ಯಂತ ಶಕ್ತಿಯುತವಾದ ಮೋಟಾರ್ ಸೈಕಲ್ ಎಂಬ ಖ್ಯಾತಿಯನ್ನು ಈ ಬೈಕ್ ಪಡೆದುಕೊಳ್ಳಲಿದೆ.

ಅಪಾಚೆ ಆರ್‌ಟಿಆರ್ 310ಎಸ್ ಬೈಕಿನ ಬಿಡುಗಡೆ ದಿನಾಂಕ ನಿಗದಿ ಮಾಡಿದ ಟಿವಿಎಸ್

ಅಸ್ತಿತ್ವದಲ್ಲಿರುವ 313ಸಿಸಿ ಸಿಂಗಲ್ ಸಿಲಿಂಡರ್ ಫ್ಯುಯೆಲ್ ಇಂಜೆಕ್ಟ್ ಎಂಜಿನ್ ಅಳವಡಿಕೆಯೊಂದಿಗೆ ಈ ಬೈಕ್ ಹೊರಬರಲಿದ್ದು, 28 ಎನ್ಎಂ ತಿರುಗುಬಲದಲ್ಲಿ 34 ಬಿಎಚ್‌ಪಿ ಟಾರ್ಕ್ ಉತ್ಪಾದಿಸುವಷ್ಟು ಸಾಮರ್ಥ್ಯ ಹೊಂದಿದೆ.

ಅಪಾಚೆ ಆರ್‌ಟಿಆರ್ 310ಎಸ್ ಬೈಕಿನ ಬಿಡುಗಡೆ ದಿನಾಂಕ ನಿಗದಿ ಮಾಡಿದ ಟಿವಿಎಸ್

ಟಿವಿಎಸ್ ಸಂಸ್ಥೆಯು ಆಂತರಿಕ ಪುನರ್ರಚನೆಯನ್ನು ಮಾಡಲು ಮುಂದಾಗಿದೆ ಎನ್ನಲಾಗಿದ್ದು, ಪ್ರೀಮಿಯಂ ಮೋಟಾರ್‌ಸೈಕಲ್ ಮತ್ತು ರಫ್ತುಗಳನ್ನು ನಿಭಾಯಿಸಲು ಹೊಸ ವಿಭಾಗವನ್ನು ಸೃಷ್ಟಿಸಿದೆ ಎಂದು ವರದಿಯಾಗಿದೆ.

ಅಪಾಚೆ ಆರ್‌ಟಿಆರ್ 310ಎಸ್ ಬೈಕಿನ ಬಿಡುಗಡೆ ದಿನಾಂಕ ನಿಗದಿ ಮಾಡಿದ ಟಿವಿಎಸ್

ಹೊಸ ವಿಭಾಗವು ಅಪಾಚೆ ಬ್ರಾಂಡ್ ಒಳಗೊಂಡಿರಲಿದೆ ಹಾಗು ಸದ್ಯ ಮೋಟಾರ್ ಸೈಕಲ್ ಮಾರುಕಟ್ಟೆ ಮತ್ತು ಪ್ರೀಮಿಯಂ ವರ್ಗದ ಅಂತರರಾಷ್ಟ್ರೀಯ ವ್ಯಾಪಾರದ ಮುಖ್ಯಸ್ಥರಾದ ಅರುಣ್ ಸಿದ್ಧಾರ್ಥ್ ಅವರು ಈ ಹೊಸ ಶಾಖೆ ಮುಖ್ಯಸ್ಥರಾಗಿ ಮುಂದುವರೆಯಲಿದ್ದಾರೆ ಎಂಬ ಮಾಹಿತಿ ಹೊರಬಂದಿದೆ.

ಅಪಾಚೆ ಆರ್‌ಟಿಆರ್ 310ಎಸ್ ಬೈಕಿನ ಬಿಡುಗಡೆ ದಿನಾಂಕ ನಿಗದಿ ಮಾಡಿದ ಟಿವಿಎಸ್

ಭಾರತೀಯ ರಸ್ತೆ ಸ್ಥಿತಿಗೆ ಸರಿಹೊಂದುವಂತೆ ಈ ಟಿವಿಎಸ್ ಬೈಕಿನ ಎಂಜಿನ್ ಟ್ಯೂನ್ ಮಾಡಲಾಗಿದ್ದು, ಇದಲ್ಲದೆ ಈ ಮೋಟಾರ್ ಸೈಕಲ್ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ವಿಭಜಿತ ಸೀಟ್‌ಗಳನ್ನು ಪಡೆಯುತ್ತದೆ.

ಅಪಾಚೆ ಆರ್‌ಟಿಆರ್ 310ಎಸ್ ಬೈಕಿನ ಬಿಡುಗಡೆ ದಿನಾಂಕ ನಿಗದಿ ಮಾಡಿದ ಟಿವಿಎಸ್

ಅನಾವರಣಗೊಂಡ ನಂತರ ಈ ಬೈಕ್, ಕೆಟಿಎಂ ಆರ್‌ಸಿ 390, ಬೆನೆಲ್ಲಿ 302 ಆರ್, ಕಾವಾಸಾಕಿ ನಿಂಜಾ 300 ಮತ್ತು ಯಮಹಾ YZF-R3 ನಂತಹ ಬಲಿಷ್ಠ ಬೈಕುಗಳೊಂದಿಗೆ ಸ್ಪರ್ಧೆ ನೆಡೆಸಲಿದೆ. ಈ ಮೋಟಾರ್ ಸೈಕಲ್ 2 ಲಕ್ಷಕ್ಕಿಂತ ಕಡಿಮೆ ಬೆಲೆ ಪಡೆಯಬಹುದು ಎಂದು ನಿರೀಕ್ಷಿಸಲಾಗಿದೆ.

English summary
Indian two-wheeler manufacturer TVS is gearing up for the launch of its first fully faired motorcycle in the country. the Apache RR 310S will be launched by mid or late-November 2017.
Story first published: Tuesday, September 19, 2017, 16:03 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark