ಬಿಡುಗಡೆಗೂ ಮುನ್ನ ಟಿವಿಎಸ್ ಅಪಾಚೆ ರಹಸ್ಯ ಚಿತ್ರಗಳು ಲೀಕ್
ಟಿವಿಎಸ್ ಅಪಾಚೆ ಆರ್‌ಟಿಆರ್ 200 ಸಿಸಿ ಬೈಕ್ ಬಿಡುಗಡೆಗೂ ಮುನ್ನ ರಹಸ್ಯ ಚಿತ್ರಗಳು ಲೀಕ್ ಆಗಿವೆ. ಬಲ್ಲ ಮೂಲಗಳ ಪ್ರಕಾರ ಈ ಬಹುನಿರೀಕ್ಷಿತ ಬೈಕ್ ಮುಂಬರುವ 2016 ಜನವರಿ 20ರಂದು ಬಿಡುಗಡೆಯಾಗಲಿದೆ.
ಪ್ರಮುಖವಾಗಿಯೂ ಕೆಟಿಎಂ ಡ್ಯೂಕ್ 200 ಹಾಗೂ ಹೋಂಡಾ ಸಿಬಿಆರ್250ಆರ್ ಸವಾಲನ್ನು ಎದರಿಸಲಿರುವ ಟಿವಿಎಸ್ ಅಪಾಚೆ ಆರ್‌ಟಿಆರ್ 200 ತನ್ನ ಸಾನಿಧ್ಯವನ್ನು ತೋರ್ಪಡಿಸುವುದು ಅಷ್ಟು ಸುಲಭದ ಮಾತಲ್ಲ.

ತನ್ನ ಪ್ರತಿಸ್ಪರ್ಧಿಗಳಿಗೆ ಹೋಲಿಸಿದಾಗ ಟಿವಿಎಸ್ ಅಪಾಚೆ ಆರ್‌ಟಿಆರ್ 200 ಅಗ್ಗದ ದರ, ಹೆಚ್ಚು ವೇಗ ಹಾಗೂ ಒಟ್ಟಾರೆಯಾಗಿ ಬಹುಬೇಗನೇ ವಾಹನ ಪ್ರೇಮಿಗಳನ್ನು ಆಕರ್ಷಿಸುವ ವಿನ್ಯಾಸ ಪಡೆದುಕೊಂಡಿದೆ.
ಚಿತ್ರಕೃಪೆ: MOTOROIDS

ಟಿವಿಎಸ್ ಅಪಾಚೆ ಆರ್‌ಟಿಆರ್ 200 ಅಂದಾಜು ಒಂದು ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ. ಒಂದು ವೇಳೆ ಎಬಿಎಸ್ ಸ್ಟ್ಯಾಂಡರ್ಡ್ ಆಗಿ ದೊರಕಿದ್ದಲ್ಲಿ 1.3 ಲಕ್ಷ ರು.ಗಳಷ್ಟು ಬೆಲೆ ಬಾಳಲಿದೆ.
ಚಿತ್ರಕೃಪೆ: MOTOROIDS
ವಾಹನ ವಿಶ್ಲೇಷಕರ ಪ್ರಕಾರ ಟಿವಿಎಸ್ ಅಪಾಚೆ ಆರ್‌ಟಿಆರ್ 200 ಕೂಡಾ ಅತ್ಯುತ್ತಮ ಚಲನಶೀಲತೆಯನ್ನು ಕಾಪಾಡಿಕೊಳ್ಳಲಿದೆ.
ಚಿತ್ರಕೃಪೆ: MOTOROIDS
ಇದು ಏರ್ ಕೂಲ್ಡ್ ಎಂಜಿನ್ 25ರಿಂದ 26 ತಿರುಗುಬಲದಲ್ಲಿ 28ರಿಂದ 30 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಅಲ್ಲದೆ ಒಯಿಲ್ ಕೂಲರ್ ಎಂಜಿನ್ ಕೂಡಾ ಇರಲಿದೆ.
ಚಿತ್ರಕೃಪೆ: TEAM BHP
ಕ್ರೀಡಾ ಬೈಕ್ ಆಗಿರುವ ಹೊರತಾಗಿಯೂ ಪರಿಣಾಮಕಾರಿ 25ರಿಂದ 30 ಕೀ.ಮೀ. ಮೈಲೇಜ್ ಕಾಪಾಡಿಕೊಳ್ಳುವ ನಿರೀಕ್ಷೆಯಿದೆ.
ಚಿತ್ರಕೃಪೆ: MOTOROIDS

Click it and Unblock the Notifications








