ಟಿವಿಎಸ್ ಅಪಾಚಿ ಆರ್‌ಟಿಆರ್ 200 ಫೇರ್ಡ್ ಆವೃತ್ತಿ ಬರುತ್ತಾ?
ಕ್ರೀಡಾ ಪ್ರೇಮಿಗಳ ಮನ ಸೊರೆಗೈದಿರುವ ಟಿವಿಎಸ್ ಅಪಾಚಿ ಆರ್‌ಟಿಆರ್ 200 ಮಾದರಿಯು ಹೊಸ ರೂಪವನ್ನು ಪಡೆದುಕೊಳ್ಳಲು ಸಿದ್ಧವಾಗುತ್ತಿದೆ. ಬಲ್ಲ ಮೂಲಗಳ ನೂತನ ಟಿವಿಎಸ್ ಅಪಾಚಿ ಆರ್‌ಟಿಆರ್ 200 ಫೇರ್ಡ್ ಆವೃತ್ತಿಯು ಭಾರತದಲ್ಲೂ ಬಿಡುಗಡೆಯಾಗಲಿದೆ.
ಇದಕ್ಕೂ ಪೂರ್ವಭಾವಿಯಾಗಿ ನೆರೆಯ ಇಂಡೋನೇಷ್ಯಾದಲ್ಲಿ ಮಾರ್ಪಾಡುಗೊಳಿಸಿರುವ ಅಪಾಚಿ ಆರ್‌ಟಿಆರ್ 200 ಪ್ರತ್ಯಕ್ಷಗೊಂಡಿದೆ. ಈ ಎಲ್ಲದರ ಮುಖಾಂತರ ಸಾಹಸಿ ಬೈಕರುಗಳನ್ನು ತನ್ನತ್ತ ಸೆಳೆದುಕೊಳ್ಳುತ್ತಿದೆ.

ಸ್ವಿಚ್, ಗೇರ್, ಹೆಡ್ ಲ್ಯಾಂಪ್, ಟೈಲ್ ಲೈಟ್ ಹಾಗೂ ಸೀಟಿನ ವಿನ್ಯಾಸದಲ್ಲಿ ಹೆಚ್ಚಿನ ಬದಲಾವಣೆಗಳು ಕಂಡು ಬರದಿದ್ದರೂ ಹೆಚ್ಚು ಆಕ್ರಮಣಕಾರಿ ವಿನ್ಯಾಸದ ದೃಷ್ಟಿಕೋನದಲ್ಲಿ ಬಾಡಿ ವಿನ್ಯಾಸದಲ್ಲಿ ಗಮನಾರ್ಹ ಮಾರ್ಪಾಡುಗಳನ್ನು ತರಲಾಗಿದೆ.

ನೂತನ ಟಿವಿಎಸ್ ಅಪಾಚಿ ಆರ್ ಟಿಆರ್ ಫೇರ್ಡ್ ವರ್ಷನ್, ಮುಂಭಾಗದಲ್ಲಿ ಟ್ವಿನ್ ಡಿಸ್ಕ್, ಫಾರ್ಕ್ ಪ್ರೊಟೆಕ್ಟಿವ್ ಕವರ್, ದೊಡ್ಡದಾದ ವಿಂಡ್ ಶೀಲ್ಡ್ ಮುಂತಾದ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ.

ಇಂಡೋನೇಷ್ಯಾ ಸ್ಥಳೀಯ ಡೀಲರುಗಳ ಬಳಿ ಇದನ್ನು ಪ್ರದರ್ಶನಕ್ಕಿಡಲಾಗಿದೆ. ಇದು ಟಿವಿಎಸ್ ಶ್ರೇಣಿಯ ಬೈಕ್ ಗಳಿಗೆ ಹೊಸ ಆಯಾಮವನ್ನು ತುಂಬಿದೆ.

ಇನ್ನೊಂದೆಡೆ ಅಕುಲಾ 310 ಕಾನ್ಸೆಪ್ಟ್ ಬೈಕ್ ನಿಂದ ಸ್ಪೂರ್ತಿ ಪಡೆದುಕೊಂಡು ಸಂಪೂರ್ಣವಾದ ಫೇರ್ಡ್ ಅಪಾಚಿ 300 ಆವೃತ್ತಿಯ ನಿರ್ಮಾಣದಲ್ಲೂ ಟಿವಿಎಸ್ ಗಮನ ಕೇಂದ್ರಿಕರಿಸುತ್ತಿದೆ.

ಒಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಶಕ್ತಿಶಾಲಿ ಕ್ರೀಡಾ ಬೈಕ್ ಗಳ ವಿಭಾಗದಲ್ಲಿ ಹೊಸ ಹೊಸ ಬದಲಾವಣೆಗಳು ಕಂಡುಬರುವುದು ಖಚಿತವೆನಿಸಿದೆ. ಇಲ್ಲೂ ಟಿವಿಎಸ್ ತನ್ನ ಸಾನಿಧ್ಯವನ್ನು ಗಟ್ಟಿಸುವತ್ತ ಗಮನ ಹರಿಸಿದೆ.


Click it and Unblock the Notifications








