ಹೊಸ ವರ್ಷದಲ್ಲಿ ಟಿವಿಎಸ್ ಅಕುಲಾ 310 ಬಿಡುಗಡೆ

ಬಿಎಂಡಬ್ಲ್ಯು ಸಹಯೋಗದಲ್ಲಿ ಅಭಿವೃದ್ಧಿಪಡಿಸಿರುವ ಟಿವಿಎಸ್ ಅಕುಲಾ ಭಾರತೀಯ ಕ್ರೀಡಾ ಬೈಕ್ ಪ್ರೇಮಿಗಳನ್ನು ಆಕರ್ಷಿಸಲಿದೆ ಎಂಬುದರಲ್ಲಿ ಸಂಶಯವೇ ಇಲ್ಲ.

By Nagaraja

ದೇಶದ ಮುಂಚೂಣಿಯ ದ್ವಿಚಕ್ರ ವಾಹನ ಸಂಸ್ಥೆಯಾಗಿರುವ ಟಿವಿಎಸ್ ಮೋಟಾರು ಕಂಪನಿ, 2017 ವರ್ಷಾರಂಭದಲ್ಲಿ ಅತಿ ನೂತನ ಅಕುಲಾ 310 ಬೈಕ್ ಬಿಡುಗಡೆಗೊಳಿಸಿದೆ. ನೂತನ ಟಿವಿಎಸ್ ಬೈಕ್ ಅಪಾಚಿ ಆರ್ ಟಿಆರ್ 300 ಎಂದೆನಿಸಿಕೊಳ್ಳುವುದು ಬಹುತೇಕ ಖಚಿತವೆನಿಸಿದ್ದು, 2017 ಫೆಬ್ರವರಿ ಅಥವಾ ಮಾರ್ಚ್ ತಿಂಗಳಲ್ಲಿ ಬಿಡುಗಡೆಯಾಗಲಿದೆ.

ಹೊಸ ವರ್ಷದಲ್ಲಿ ಟಿವಿಎಸ್ ಅಕುಲಾ 310 ಬಿಡುಗಡೆ

ಜರ್ಮನಿಯ ಐಕಾನಿಕ್ ಬಿಎಂಡಬ್ಲ್ಯು ಮೊಟೊರಾಡ್ ಸಹಯೋಗದಲ್ಲಿ ಟಿವಿಎಸ್ ಸಂಸ್ಥೆಯು ಅತಿ ನೂತನ ಅಕುಲಾ 310 ಕ್ರೀಡಾ ಬೈಕನ್ನು ಅಭಿವೃದ್ಧಿಪಡಿಸಿದೆ.

ಹೊಸ ವರ್ಷದಲ್ಲಿ ಟಿವಿಎಸ್ ಅಕುಲಾ 310 ಬಿಡುಗಡೆ

ಇದೇ ತಳಹದಿಯಲ್ಲಿ ನಿರ್ಮಾಣವಾಗಿರುವ ಜಿ310ಆರ್, ಟಿವಿಎಸ್ ಅಕುಲಾದ ಬೆನ್ನಲ್ಲೇ ದೇಶವನ್ನು ತಲುಪಲಿದೆ.

ಹೊಸ ವರ್ಷದಲ್ಲಿ ಟಿವಿಎಸ್ ಅಕುಲಾ 310 ಬಿಡುಗಡೆ

2016 ಆಟೋ ಎಕ್ಸ್ ಪೋದಲ್ಲೂ ಪ್ರದರ್ಶನ ಕಂಡಿರುವ ಅಕುಲಾ 310, ವಿಶ್ಲೇಷಕರ ಮೆಚ್ಚುಗೆಗೂ ಪಾತ್ರವಾಗಿತ್ತು. ಇಲ್ಲಿ ಅಕುಲಾ ಎಂಬುದು ತಿಮಿಂಗಲ ಎಂಬ ಅರ್ಥವನ್ನು ನೀಡುತ್ತದೆ.

ಹೊಸ ವರ್ಷದಲ್ಲಿ ಟಿವಿಎಸ್ ಅಕುಲಾ 310 ಬಿಡುಗಡೆ

ಜರ್ಮನಿಯ ಐಕಾನಿಕ್ ಸಂಸ್ಥೆಯ ಜೊತೆಗಾರಿಕೆಯಲ್ಲಿ ನೂತನ ಬೈಕ್ ಅಭಿವೃದ್ಧಿಪಡಿಸಲಾಗಿದೆ. ಇದರಲ್ಲಿ ಜರ್ಮನಿಯ ಸಂಸ್ಥೆ ಅಭಿವೃದ್ಧಿಪಡಿಸಿದ ಚಾಸೀ ಮತ್ತು ಎಂಜಿನ್ ಬಳಕೆಯಾಗಲಿದೆ.

ಹೊಸ ವರ್ಷದಲ್ಲಿ ಟಿವಿಎಸ್ ಅಕುಲಾ 310 ಬಿಡುಗಡೆ

ಅಷ್ಟೇ ಯಾಕೆ ಬ್ರೇಕಿಂಗ್ ಮತ್ತು ಸಸ್ಪೆನ್ಷನ್ ವ್ಯವಸ್ಥೆಗಳು ಸಮಾನವಾಗಿರಲಿದೆ. ಆದರೂ ನೋಟದಲ್ಲಿ ಎರಡು ಬೈಕ್ ಗಳು ವೈವಿಧ್ಯತೆಯನ್ನು ಕಾಪಾಡಿಕೊಂಡಿದೆ.

ಹೊಸ ವರ್ಷದಲ್ಲಿ ಟಿವಿಎಸ್ ಅಕುಲಾ 310 ಬಿಡುಗಡೆ

ಬಿಎಂಡಬ್ಲ್ಯು ಜಿ310ಆರ್ ಬೈಕ್ ಗಿಂತಲೂ ವಿಭಿನ್ನವಾಗಿರುವ ಅಕುಲಾ ಸಂಪೂರ್ಣ ಫೇರಿಂಗ್ ವಿನ್ಯಾಸವನ್ನು ಮೈಗೂಡಿಸಿಕೊಂಡು ಬರಲಿದೆ.

ಹೊಸ ವರ್ಷದಲ್ಲಿ ಟಿವಿಎಸ್ ಅಕುಲಾ 310 ಬಿಡುಗಡೆ

ಹೊಸೂರುನಲ್ಲಿ ಸ್ಥಿತಗೊಂಡಿರುವ ಟಿವಿಎಸ್ ಘಟಕದಲ್ಲಿ ಈ ಎರಡು ಬೈಕ್ ಗಳು ನಿರ್ಮಾಣವಾಗಲಿದೆ ಎಂಬುದಿಲ್ಲಿ ಗಮನಾರ್ಹ.

ಹೊಸ ವರ್ಷದಲ್ಲಿ ಟಿವಿಎಸ್ ಅಕುಲಾ 310 ಬಿಡುಗಡೆ

ಟಿವಿಎಸ್ ಅಕುಲಾದಲ್ಲಿರುವ 313 ಸಿಸಿ ಲಿಕ್ವಿಡ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ 28 ಎನ್ ಎಂ ತಿರುಗುಬಲದಲ್ಲಿ 34 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಆರು ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿರುತ್ತದೆ.

ಹೊಸ ವರ್ಷದಲ್ಲಿ ಟಿವಿಎಸ್ ಅಕುಲಾ 310 ಬಿಡುಗಡೆ

ಅಂದ ಹಾಗೆ ಟಿವಿಎಸ್ ಅಕುಲಾ 1.50 ಲಕ್ಷ ರು.ಗಳಿಂದ 1.75 ಲಕ್ಷ ರು.ಗಳ ಬೆಲೆ ಪರಿಧಿಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಇದು ನೇರವಾಗಿ ಕೆಟಿಎಂ ಆರ್ ಸಿ 200 ಮಾದರಿಗೆ ಪ್ರತಿಸ್ಪರ್ಧೆಯನ್ನು ಒಡ್ಡಲಿದೆ.

More from DriveSpark

Article Published On: Saturday, November 5, 2016, 3:00 [IST]
English summary
TVS Apache RTR 300 To Be Launched In February-March 2017
Read more on ಟಿವಿಎಸ್
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+