ಬೆಂಗಳೂರಿನಲ್ಲಿ ಹೊಸ ಟಿವಿಎಸ್ ವಿಕ್ಟರ್ ಬಿಡುಗಡೆ

By Nagaraja

ದೇಶದ ಮುಂಚೂಣಿಯ ದ್ವಿಚಕ್ರ ವಾಹನ ಸಂಸ್ಥೆ ಟಿವಿಎಸ್ ಮೋಟಾರು ಕಂಪನಿ ತನ್ನ ಬಹುನಿರೀಕ್ಷಿತ ವಿಕ್ಟರ್ ಪ್ರಯಾಣಿಕ ಬೈಕನ್ನು ಬೆಂಗಳೂರಿನಲ್ಲಿ ಬಿಡುಗಡೊಳಿಸಿದೆ.

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಬೆಂಗಳೂರು)

  • ಡ್ರಮ್: 51,600 ರು.
  • ಡಿಸ್ಕ್: 53,600 ರು.

ಟಿವಿಎಸ್ ವಿಕ್ಟರ್


ದೃಶ್ಯ ವಿಸ್ಮಯ ಹಾಗೂ ಬಹುಮುಖ ಸಾಮರ್ಥ್ಯದ ಎಕ್ಸ್ ಕ್ಲೂಟಿವ್ ಬೈಕ್ ಇದಾಗಿದೆ. ವಿನ್ಯಾಸ ಭಾಷೆ, ಮುಂಚೂಣಿಯ ಶ್ರೇಣಿಯ ತಂತ್ರಜ್ಞಾನ ಮತ್ತು ಆಕರ್ಷಕ ಗ್ರಾಫಿಕ್ಸ್ ಪರಸ್ಪರ ಹೊಂದಾಣಿಕೆಯನ್ನು ಕಾಣಬಹುದಾಗಿದೆ.

2002ನೇ ಸಾಲಿನಲ್ಲಿ ಮೊದಲ ಬಾರಿಗೆ ಬಿಡುಗಡೆಗೊಂಡಿರುವ ಟಿವಿಎಸ್ ವಿಕ್ಟರ್ ವೈಭವದ ನಾಗಾಲೋಟವನ್ನು ಸೃಷ್ಟಿಸಿತ್ತು. ದೇಶದಲ್ಲಿ ಅತಿ ಹೆಚ್ಚು ಮಾರಾಟವಾಗುವ ಪ್ರಯಾಣಿಕ ವಿಭಾಗದ ಬೈಕ್ ಗಳಲ್ಲಿ ಸ್ಥಾನ ಪಡೆದಿರುವ ಟಿವಿಎಸ್ ವಿಕ್ಟರ್ ಸಂಸ್ಥೆಯಿಂದ ದೇಶೀಯವಾಗಿ ಅಭಿವೃದ್ಧಿಗೊಳಿಸಿದ ಮೊದಲ ಉತ್ಪನ್ನವಾಗಿದೆ.

ಹೊಸ ಅವತಾರದ ಟಿವಿಎಸ್ ವಿಕ್ಟರ್, ಅತ್ಯಾಧುನಿಕ ಶೈಲಿ, ಉತ್ಕೃಷ್ಟ ಎಂಜಿನ್ ಸಾಮರ್ಥ್ಯ ಮತ್ತು ಮುಂಚೂಣಿಯ ಆರಾಮದಾಯಕತೆಯ ಸಂಯೋಜನೆಯಾಗಿದೆ. ಇದು ಸುಧಾರಿತ 3 ವಾಲ್ವ್ ಇಕೊಥ್ರಸ್ಟ್ ಎಂಜಿನ್ ಪಡೆದಿದ್ದು, ಹೆಚ್ಚು ಶಕ್ತಿ ಹಾಗೂ ಇಂಧನ ಕ್ಷಮತೆಯನ್ನು ಕಾಪಾಡಿಕೊಳ್ಳಲಿದೆ.

ಆರಾಮ, ಅನುಕೂಲ, ಸುರಕ್ಷಿತ ಚಾಲನೆ ಮತ್ತು ಗರಿಷ್ಠ ನಿರ್ವಹಣೆ ಅಪೇಕ್ಷಿಸುವ ಗ್ರಾಹಕರಿಗೆ ನೂತನ ಟಿವಿಎಸ್ ವಿಕ್ಟರ್ ಪರಿಪೂರ್ಣ ಆಯ್ಕೆಯಾಗಿರಲಿದೆ. ಟಿವಿಎಸ್ ವಿಕ್ಟರ್ ನಲ್ಲಿರುವ ಅಗಲವಾದ ಆಸನವು ಅನುಕೂಲ ಕಲ್ಪಿಸುತ್ತದೆ. ಹಾಗೆಯೇ ಹೊಸ ಕನ್ನಡಿಗಳು ಮತ್ತು ಇನ್ಸ್ಟ್ರುಮೆಂಟ್ ಪ್ಯಾನೆಲ್ ಲಗತ್ತಿಸಲಾಗಿದೆ. ಅಂತೆಯೇ ಹೊಸತಾದ 55 ವ್ಯಾಟ್ ಗಳ ಪ್ರಕಾಶಮಾನವಾದ ಹೆಡ್ ಲೈಟ್ ಕಂಡುಬರಲಿದೆ.

ಎಂಜಿನ್
ಸಾಮರ್ಥ್ಯ: 109.7 ಸಿಸಿ
ಗರಿಷ್ಠ ಪವರ್: 9.6 ಅಶ್ವಶಕ್ತಿ, 7500 ಆರ್‌ಪಿಎಂ
ಗರಿಷ್ಠ ತಿರುಗುಬಲ: 9.4 ಎನ್‌ಎಂ, 6000 ಆರ್‌ಪಿಎಂ
ಇಂಧನ ವ್ಯವಸ್ಥೆ: ಕಾರ್ಬ್ಯೂರೇಟರ್, ಸಿವಿ ವಿಧ
ಗೇರ್ ಬಾಕ್ಸ್: 4 ಸ್ಪೀಡ್
ಕ್ಲಚ್: ವೆಟ್-ಮಲ್ಟಿ ಪ್ಲೇಟ್ ವಿಧ

ಮೈಲೇಜ್: ಪ್ರತಿ ಲೀಟರ್ ಗೆ 76 ಕೀ.ಮೀ.

ಚಾಸೀ, ಸಸ್ಪೆನ್ಷನ್
ಚಾಸೀ ವಿಧ: ಸಿಂಗಲ್ ಕ್ರಾಡಲ್ ಟ್ಯೂಬುಲರ್ ಫ್ರೇಮ್
ಫ್ರಂಟ್ ಸಸ್ಪೆನ್ಷನ್: ಟೆಲಿಸ್ಕಾಪಿಕ್
ರಿಯರ್ ಸಸ್ಪೆನ್ಷನ್: ಸ್ಪ್ರಿಂಗ್

ಬ್ರೇಕ್
ಮುಂಭಾಗ: ಡ್ರಮ್
ಹಿಂಭಾಗ: ಡಿಸ್ಕ್

ಚಕ್ರಗಳು
ಮುಂಭಾಗ: 2.75 x 17
ಹಿಂಭಾಗ: 3.00 x 17

ಆಯಾಮ (ಎಂಎಂ)
ಉದ್ದ: 1980
ಅಗಲ: 750
ಎತ್ತರ: 1090
ಚಕ್ರಾಂತರ: 1260
ಗ್ರೌಂಡ್ ಕ್ಲಿಯರನ್ಸ್: 175

ಭಾರ
112 ಕೆ.ಜಿ (ಡ್ರಮ್)
113 ಕೆ.ಜಿ (ಡಿಸ್ಕ್)

ಇಂಧನ ಟ್ಯಾಂಕ್: 8 ಲೀಟರ್
ರಿಸರ್ವ್: 2 ಲೀಟರ್

ಬಣ್ಣಗಳು
ರೆಸ್ಟ್ ಫುಲ್ ರೆಡ್,
ಜನರಸ್ ಗ್ರೇ,
ಬ್ಲಿಸ್ ಫುಲ್ ಬ್ಲೂ,
ಬಾಲನ್ಸ್ಡ್ ಬ್ಲ್ಯಾಕ್ ರೆಡ್,
ಸೆರೆನ್ ಸಿಲ್ವರ್,
ಬೀಟಿಫಿಕ್ ಬ್ಲ್ಯಾಕ್ ಸಿಲ್ವರ್

ಪ್ರತಿಸ್ಪರ್ಧಿಗಳು
ಹೋಂಡಾ ಡ್ರೀಮ್ ಯುಗಾ,
ಹೀರೊ ಸ್ಪ್ಲೆಂಡರ್,
ಬಜಾಜ್ ಸಿಟಿ100

More from DriveSpark

Article Published On: Wednesday, March 9, 2016, 16:37 [IST]
English summary
TVS Victor Launched In Bangalore, Prices Start At Rs. 51,600
Read more on ಟಿವಿಎಸ್
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+