ಅತಿ ಶೀಘ್ರದಲ್ಲೇ ಟಿವಿಎಸ್ ವಿಕ್ಟರ್ ಕಮ್ ಬ್ಯಾಕ್
ಚೆನ್ನೈ ತಳಹದಿಯ ದೇಶದ ಮುಂಚೂಣಿಯ ವಾಹನ ತಯಾರಿಕ ಸಂಸ್ಥೆಯಾಗಿರುವ ಟಿವಿಎಸ್ ಮೋಟಾರ್ಸ್ ಅತಿ ಶೀಘ್ರದಲ್ಲೇ ವಿಕ್ಟರ್ ಬೈಕ್ ಅನ್ನು ಮರು ಬಿಡುಗಡೆ ಮಾಡಲಿದೆ.
ಈ ಮುಖಾಂತರ ಎಂಟ್ರಿ ಲೆವೆಲ್ ಪ್ರಯಾಣಿಕ ಬೈಕ್ ವಿಭಾಗದಲ್ಲಿ ಅತಿ ಹೆಚ್ಚು ಮಾರಾಟವನ್ನು ಗಿಟ್ಟಿಸಿಕೊಳ್ಳುವ ಇರಾದೆಯಲ್ಲಿದೆ.

ನೂತನ ಟಿವಿಎಸ್ ವಿಕ್ಟರ್ ಮುಂಬರುವ ಜನವರಿ 20ರಂದು ಬಿಡುಗಡೆಯಾಗಲಿದೆ. ಇದು 110 ಸಿಸಿ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದೆ.
ಟಿವಿಎಸ್ ಮೋಟಾರ್ಸ್ ಪಾಲಿಗೆ ವಿಕ್ಟರ್ ಅತಿ ವಿಶಿಷ್ಟವಾದ ಮಾದರಿಯಾಗಿದ್ದು, ಸಂಪೂರ್ಣವಾಗಿ ದೇಶೀಯವಾಗಿ ನಿರ್ಮಿಸಿದೆ.
ಅದೇ ಹೊತ್ತಿ ಅತಿ ನೂತನ ಅಪಾಚೆ ಬೈಕ್ ಬಿಡುಗಡೆ ಮಾಡುವ ಇರಾದೆಯನ್ನು ಟಿವಿಎಸ್ ಹೊಂದಿದೆ. ಇವೆಲ್ಲವೂ 2016ನೇ ಸಾಲಿನಲ್ಲಿ ಪುನರಾಗಮನ ಮಾಡಿಕೊಳ್ಳಲು ನೆರವಾಗಲಿದೆ.


Click it and Unblock the Notifications








