ನವದೆಹಲಿಯಲ್ಲಿ ಟಿವಿಎಸ್ ಫೋರ್ ಸ್ಟ್ರೋಕ್ ಎಕ್ಸ್‌ಎಲ್ 100 ಬಿಡುಗಡೆ
ಸಣ್ಣ ವ್ಯಾಪಾರಿಗಳಿಗೆ ಅತಿ ಹೆಚ್ಚು ಉಪಯುಕ್ತವೆನಿಸಿರುವ ಟಿವಿಎಸ್ ಎಕ್ಸ್ ಎಲ್ ಈಗಲೂ ಮಾರುಕಟ್ಟೆಯಲ್ಲಿ ಗಮನಾರ್ಹ ಮಾರಾಟವನ್ನು ಕಾಯ್ದುಕೊಂಡಿದೆ. ಪ್ರತಿ ತಿಂಗಳು ಅತಿ ಹೆಚ್ಚು ಮಾರಾಟವಾಗುತ್ತಿರುವ ದ್ವಿಚಕ್ರ ವಾಹನಗಳ ಪೈಕಿ ಅಗ್ರ 10ರ ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತಿರುವ ಟಿವಿಎಸ್ ಮೊಪೆಡ್ ಸ್ಕೂಟರ್ ಈಗ ಫೋರ್ ಸ್ಟ್ರೋಕ್ ಆವೃತ್ತಿಯನ್ನು ಪಡೆದುಕೊಂಡಿದೆ.
ರಾಷ್ಟ್ರ ರಾಜಧಾನಿ ನವದೆಹಲಿಯನ್ನು ಟಿವಿಎಸ್ ಎಕ್ಸ್ ಎಲ್ 100 ಫೋರ್ ಸ್ಟ್ರೋಕ್ ಆವೃತ್ತಿಯು ಬಿಡುಗಡೆಯಾಗಿದ್ದು, ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 30,174 ರು.ಗಳಷ್ಟು ದುಬಾರಿಯೆನಿಸಲಿದೆ.

99.7 ಸಿಸಿ ಫೋರ್ ಸ್ಟ್ರೋಕ್ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿರುವ ಟಿವಿಎಸ್ ಎಕ್ಸ್‌ಎಲ್ 100 ಗರಿಷ್ಠ 4.1 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಇಂಧನ ಕ್ಷಮತೆಯಲ್ಲೂ ಯಾವುದೇ ರಾಜಿಗೂ ತಯಾರಾಗ ಟಿವಿಎಸ್ ಎಕ್ಸ್ ಎಲ್ 100 ಪ್ರತಿ ಲೀಟರ್ ಗೆ 67 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರುತ್ತದೆ.

ಹಾಗೆಯೇ ಟಿವಿಎಸ್ ಎಕ್ಸ್ ಎಲ್ 100 ಗಂಟೆಗೆ ಗರಿಷ್ಠ 60 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ.

ಹಿಂದಿನ ಮಾದರಿಗಳಿಗೆ ಹೋಲಿಸಿದಾಗ ನೂತನ ಟಿವಿಎಸ್ ಎಕ್ಸ್ ಎಲ್ ಹೆಚ್ಚು ಆರಾಮದಾಯಕ ಆಸನಗಳನ್ನು ಪಡೆದಿದೆ. ಹಿಂದುಗಡೆ ತೆಗೆಯಬಹುದಾದ ಸೀಟು, ಹೆಚ್ಚು ಅಗಲ ಮತ್ತು ಉದ್ದವನ್ನು ಕಾಪಾಡಿಕೊಂಡಿದೆ.

ಸುಲಭವಾಗಿ ಕಿಕ್ ಸ್ಟ್ಯಾರ್ಟ್ ಮಾಡಬಹುದಾದ ಟಿವಿಎಸ್ ಎಕ್ಸ್ ಎಲ್ ಹೊರಮೈಯಲ್ಲಿ ಹೆಚ್ಚು ಆಕರ್ಷಕ ನೋಟವನ್ನು ಕಾಪಾಡಿಕೊಂಡಿದೆ.

ಈಗಿನ ಗ್ರಾಹಕರ ಬೇಡಿಕೆಗೆ ಅನುಸಾರವಾಗಿ ಕೈಗೆಟುಕುವ, ಹೆಚ್ಚು ವಿಶ್ವಾಸಾರ್ಹ, ಸುಲಭ ಸವಾರಿ ಮತ್ತು ಬಹು ಸೌಲಭ್ಯದ ಎಕ್ಸ್ ಎಲ್ ಮಾದರಿಯನ್ನು ಮಾರುಕಟ್ಟೆಗೆ ಬಿಡಲಾಗಿದೆ.

ಅಂದ ಹಾಗೆ ಐದು ಆಕರ್ಷಕ ಬಣ್ಣಗಳ ಆಯ್ಕೆಗಳಲ್ಲಿ ಟಿವಿಎಸ್ ಎಕ್ಸ್ ಎಲ್ 100 ಲಭ್ಯವಾಗಲಿದೆ. ಅವುಗಳೆಂದರೆ, ಕಪ್ಪು, ಕೆಂಪು, ಹಸಿರು, ನೀಲಿ ಮತ್ತು ಬೂದು.

ಟಿವಿಎಸ್ ಎಕ್ಸ್ ಎಲ್ 100 ಈಗ ಟಿವಿಎಸ್ ಎಕ್ಸ್ ಎಲ್ ಸೂಪರ್ ಮತ್ತು ಟಿವಿಎಸ್ ಎಕ್ಸ್ ಎಲ್ ಸೂಪರ್ ಹೆವಿ ಡ್ಯೂಟಿ ಜೊತೆ ಡೀಲರ್ ಶಿಪ್ ಗಳಲ್ಲಿ ಲಭ್ಯವಾಗಲಿದೆ.


Click it and Unblock the Notifications








