2016-17ರಲ್ಲಿ ಬಿಡುಗಡೆಯಾಗಲಿರುವ 7 ಬಜಾಜ್ ಬೈಕ್ಸ್; ಯಾವುದು ಗೊತ್ತೇ?

By Nagaraja

ಪ್ರತಿಯೊಂದು ದ್ವಿಚಕ್ರ ವಾಹನ ಸಂಸ್ಥೆಗಳು ನೂತನ ಹಾಗೂ ಪರಿಷ್ಕೃತ ಮಾದರಿಗಳನ್ನು ಬಿಡುಗಡೆ ಮಾಡುವುದರಲ್ಲಿ ಕಾರ್ಯ ಮಗ್ನವಾಗಿದೆ. ಇದರಿಂದ ದೇಶದ ಮುಂಚೂಣಿಯ ಬಜಾಜ್ ಆಟೋ ಕೂಡಾ ಹೊರತಾಗಿಲ್ಲ. ಬಜಾಜ್ ಬೈಕ್ ಗಳನ್ನು ಪರಿಗಣಿಸಿದಾಗ ಪಲ್ಸರ್, ಅವೆಂಜರ್ ಜೊತೆಗೆ ಪ್ಲಾಟಿನಾ ಶ್ರೇಣಿಯ ಬೈಕ್ ಗಳು ರಾರಾಜಿಸುತ್ತಿದೆ. ಈ ಸಾಲಿಗೀಗ ನೂತನ ಬಜಾಜ್ ವಿ15 ಸಹ ಸೇರ್ಪಡೆಯಾಗಿದೆ.

ಗರಿಷ್ಠ ಮಾರಾಟವನ್ನು ಗುರಿಯಾಗಿರಿಸಿಕೊಂಡಿರುವ ಬಜಾಜ್, ಹಂತ ಹಂತವಾಗಿ ಹೊಸ ಹೊಸ ಮಾದರಿಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ. ಇದರಂತೆ 2016-17ನೇ ಸಾಲಿನಲ್ಲಿ ಏಳು ಹೊಸ ಬೈಕ್ ಗಳನ್ನು ಬಿಡುಗಡೆ ಮಾಡಲಿದೆ. ಅದ್ಯಾವುದು ಗೊತ್ತೇನು? ಮುಂದಕ್ಕೆ ಓದಿ...

01. ಬಜಾಜ್ ಅವೆಂಜರ್ 400

01. ಬಜಾಜ್ ಅವೆಂಜರ್ 400

ಇತ್ತೀಚೆಗಷ್ಟೇ ಅವೆಂಜರ್ ಶ್ರೇಣಿಯ ಬೈಕ್ ಗಳಿಗೆ ಹೊಸ ಸ್ಪರ್ಶವನ್ನು ಕೊಟ್ಟಿರುವ ಬಜಾಜ್ ಆಟೋ, ಹೆಚ್ಚು ಶಕ್ತಿಶಾಲಿ ಅವೆಂಜರ್ ಬಿಡುಗಡೆ ಮಾಡುವ ಇರಾದೆಯಲ್ಲಿದೆ. ತನ್ಮೂಲಕ ಶಕ್ತಿಶಾಲಿ ಕ್ರೂಸರ್ ಬೈಕ್ ವಿಭಾಗದಲ್ಲಿ ತನ್ನ ಸಾನಿಧ್ಯವನ್ನು ತೋರ್ಪಡಿಸಲಿದೆ.

ಬಜಾಜ್ ಅವೆಂಜರ್ 400

ಬಜಾಜ್ ಅವೆಂಜರ್ 400

400 ಸಿಸಿ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಬಜಾಜ್ ಅವೆಂಜರ್ ಹೆಚ್ಚು ಸ್ಪರ್ಧಾತ್ಮಕ ಬೆಲೆಗಳಲ್ಲಿ ಮಾರುಕಟ್ಟೆಯನ್ನು ತಲುಪಲಿದೆ. ಇದು ಪಲ್ಸಲ್ ಸಿಎಸ್400 ನಲ್ಲಿರುವುದಕ್ಕೆ ಸಮಾನವಾದ ಎಂಜಿನ್ ಪಡೆಯಲಿದ್ದು, 35 ಎನ್ ಎಂ ತಿರುಗುಬಲದಲ್ಲಿ 43 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಅಂದಾಜು ಬೆಲೆ: 1.50 ಲಕ್ಷ ರು.

ನಿರೀಕ್ಷಿತ ಬಿಡುಗಡೆ: 2016 ವರ್ಷಾಂತ್ಯದಲ್ಲಿ

02. ಬಜಾಜ್ ಪಲ್ಸರ್ ಆರ್‌ಎಸ್400 (ಎಸ್‌ಎಸ್400)

02. ಬಜಾಜ್ ಪಲ್ಸರ್ ಆರ್‌ಎಸ್400 (ಎಸ್‌ಎಸ್400)

ನೂತನ ಪಲ್ಸರ್ ಆರ್‌ಎಸ್400 ಅಥವಾ ಎಸ್‌ಎಸ್400 ಆಗುವುದೇ ಎಂಬುದು ಇನ್ನು ಖಚಿತತೆಯಿಲ್ಲದಿದ್ದರೂ ಸ್ಪರ್ಧಾತ್ಮಕ ಬೆಲೆಗಳಲ್ಲಿ ಕ್ರೀಡಾ ಬೈಕ್ ಸ್ನೇಹಿಗಳಿಗೆ ಪರಿಪೂರ್ಣ ಆಯ್ಕೆಯಾಗಿರಲಿದೆ.

ಬಜಾಜ್ ಪಲ್ಸರ್ ಆರ್‌ಎಸ್400 (ಎಸ್‌ಎಸ್400)

ಬಜಾಜ್ ಪಲ್ಸರ್ ಆರ್‌ಎಸ್400 (ಎಸ್‌ಎಸ್400)

ಇದರಲ್ಲಿರುವ 375 ಸಿಸಿ ಎಂಜಿನ್ 35 ಎನ್ ಎಂ ತಿರುಗುಬಲದಲ್ಲಿ 43 ಅಶ್ವಶಕ್ತಿಯನ್ನು ಉತ್ಪಾದಿಸಲಿದ್ದು, ಆರು ಸ್ಪೀಡ್ ಗೇರ್ ಬಾಕ್ಸ್ ಪಡೆಯಲಿದೆ.

ಅಂದಾಜು ಬೆಲೆ: 1.50 ಲಕ್ಷ ರು.ಗಳಿಂದ 2 ಲಕ್ಷ ರು.

ನಿರೀಕ್ಷಿತ ಬಿಡುಗಡೆ: 2016 ವರ್ಷಾಂತ್ಯ ಅಥವಾ 2017 ಆರಂಭದಲ್ಲಿ

03. ಬಜಾಜ್ ಪಲ್ಸರ್ ಸಿಎಸ್400

03. ಬಜಾಜ್ ಪಲ್ಸರ್ ಸಿಎಸ್400

ಬಜಾಜ್ ಪಲ್ಸರ್ ಕ್ರೂಸರ್ ಸ್ಪೋರ್ಟ್ಸ್ ಬೈಕ್ ಈಗಾಗಲೇ ತನ್ನ ಆಗಮನವನ್ನು ಖಚಿತ ಪಡಿಸಿದ್ದು, ಯಾವುದೇ ಕ್ಷಣ ಬೇಕಾದರೂ ಬಿಡುಗಡೆಯಾಗಬಹುದು. ಇದು ವಾಹನ ಪ್ರೇಮಿಗಳಿಗೆ ಅದ್ಭುತ ಚಾಲನಾ ಅನುಭವ ನೀಡುವುದಂತೂ ಗ್ಯಾರಂಟಿ. ಈ ಎಲ್ಲದರ ಮುಖಾಂತರ ತನ್ನ ಪಲ್ಸರ್ ಶ್ರೇಣಿಯ ಬೈಕ್ ಗಳನ್ನು ಮತ್ತಷ್ಟು ಗಟ್ಟಿಪಡಿಸಲಿದೆ.

ಬಜಾಜ್ ಪಲ್ಸರ್ ಸಿಎಸ್400

ಬಜಾಜ್ ಪಲ್ಸರ್ ಸಿಎಸ್400

ಬಜಾಜ್ ಪಲ್ಸರ್ ಸಿಎಸ್400 ಬೈಕ್ 375 ಸಿಸಿ ಎಂಜಿನ್ ಜೊತೆಗೆ ಆರು ಸ್ಪೀಡ್ ಗೇರ್ ಬಾಕ್ಸ್ ಪಡೆಯಲಿದೆ. ಪ್ರಸ್ತುತ ಬೈಕ್ ವಿಶಿಷ್ಟತೆಗಳಿಂದ ತುಂಬಿ ತುಳುಕಲಿದ್ದು, ವಿಮರ್ಶಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಅಂದಾಜು ಬೆಲೆ: 1.50 ಲಕ್ಷ ರು.ಗಳಿಂದ 1.75 ಲಕ್ಷ ರು.

ನಿರೀಕ್ಷಿತ ಬಿಡುಗಡೆ: ಜುಲೈ-ಆಗಸ್ಟ್ 2016

04. ಬಜಾಜ್ ಪಲ್ಸರ್ ಸಿಎಸ್200

04. ಬಜಾಜ್ ಪಲ್ಸರ್ ಸಿಎಸ್200

ತನ್ನ ಹಿರಿಯ ಸೋದರನ ಅದೇ ವಿನ್ಯಾಸವನ್ನು ಮೈಗೂಡಿಸಿಕೊಂಡು ಬರಲಿರುವ ಬಜಾಜ್ ಪಲ್ಸರ್ ಸಿಎಸ್200, ತನ್ನ ಪ್ರತಿಸ್ಪರ್ಧಿಗಳಿಗೆ ತಕ್ಕ ಉತ್ತರವಾಗಲಿದೆ. ಕ್ರೀಡಾ ಬೈಕ್ ಶೈಲಿಯು ಇದರ ಪ್ರಮುಖ ಆಕರ್ಷಣೆಯಾಗಲಿದೆ.

ಬಜಾಜ್ ಪಲ್ಸರ್ ಸಿಎಸ್200

ಬಜಾಜ್ ಪಲ್ಸರ್ ಸಿಎಸ್200

199.5 ಸಿಸಿ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಬಜಾಜ್ ಪಲ್ಸರ್ ಸಿಎಸ್200, 18.6 ಎನ್ ಎಂ ತಿರುಗುಬಲದಲ್ಲಿ 24.3 ಅಶ್ವಶಕ್ತಿ ಉತ್ಪಾದಿಸಲಿದ್ದು, ಆರು ಸ್ಪೀಡ್ ಗೇರ್ ಬಾಕ್ಸ್ ಪಡೆಯಲಿದೆ.

ಅಂದಾಜು ಬೆಲೆ: 1.2 ಲಕ್ಷ ರು.ಗಳಿಂದ 1.5 ಲಕ್ಷ ರು.

ನಿರೀಕ್ಷಿತ ಬಿಡುಗಡೆ: 2016 ವರ್ಷಾಂತ್ಯ/ 2017 ಆರಂಭದಲ್ಲಿ

05. ಬಜಾಜ್ ಪಲ್ಸರ್ 150ಎನ್ ಎಸ್

05. ಬಜಾಜ್ ಪಲ್ಸರ್ 150ಎನ್ ಎಸ್

ಎಂಟ್ರಿ ಲೆವೆಲ್ ಕ್ರೀಡಾ ಬೈಕ್ ಗಳಲ್ಲಿ ತನ್ನ ಶ್ರೇಣಿಯ ಬೈಕ್ ಗಳನ್ನು ಮತ್ತಷ್ಟು ವಿಸ್ತರಿಸಲಿರುವ ಬಜಾಜ್, ಮಗದೊಂದು ಆಕರ್ಷಕ ಎನ್ ಎಸ್ ಮಾದರಿಯನ್ನು ಬಿಡುಗಡೆ ಮಾಡಲಿದೆ.

ಬಜಾಜ್ ಪಲ್ಸರ್ 150ಎನ್ ಎಸ್

ಬಜಾಜ್ ಪಲ್ಸರ್ 150ಎನ್ ಎಸ್

149.5 ಸಿಸಿ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ನೂತನ ಬಜಾಜ್ ಪಲ್ಸರ್ 150ಎನ್ ಎಸ್ 13 ಎನ್ ಎಂ ತಿರುಗುಬಲದಲ್ಲಿ 16.8 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ ಐದು ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿರುತ್ತದೆ.

ಅಂದಾಜು ಬೆಲೆ: 70,000 ರು.ಗಳಿಂದ 80,000 ರು.

ನಿರೀಕ್ಷಿತ ಬಿಡುಗಡೆ: 2016 ವರ್ಷಾಂತ್ಯ

06. ಬಜಾಜ್ ಪಲ್ಸರ್ 180 ಎನ್ ಎಸ್

06. ಬಜಾಜ್ ಪಲ್ಸರ್ 180 ಎನ್ ಎಸ್

ಬಜಾಜ್ ಪಲ್ಸರ್ 200 ಎನ್ ಎಸ್ ಮಾದರಿಗೆ ಸಮಾನವಾದ ವಿನ್ಯಾಸವನ್ನು 180 ಎನ್ ಎಸ್ ಪಡೆದುಕೊಳ್ಳಲಿದೆ. ಇದು 150 ಹಾಗೂ 200 ಸಿಸಿ ವಿಭಾಗದ ನಡುವೆ ಗುರುತಿಸಿಕೊಳ್ಳಲಿದೆ.

ಬಜಾಜ್ ಪಲ್ಸರ್ 180 ಎನ್ ಎಸ್

ಬಜಾಜ್ ಪಲ್ಸರ್ 180 ಎನ್ ಎಸ್

ಬಜಾಜ್ ಪಲ್ಸರ್ 180 ಎನ್ ಎಸ್ ಬೈಕ್ ನಲ್ಲಿರುವ 180 ಸಿಸಿ ಎಂಜಿನ್ 16 ಎನ್ ಎಂ ತಿರುಗುಬಲದಲ್ಲಿ 19ರಿಂದ 21 ಅಶ್ವಶಕ್ತಿ ಉತ್ಪಾದಿಸಲಿದೆ. ಹಾಗೆಯೇ ಐದು ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿರುತ್ತದೆ.

ಅಂದಾಜು ಬೆಲೆ: 75,000 ರು.ಗಳಿಂದ 85,000 ರು.

ನಿರೀಕ್ಷಿತ ಬಿಡುಗಡೆ: 2016 ವರ್ಷಾಂತ್ಯ

07. ಬಜಾಜ್ 2016 ಪ್ಲಾಟಿನಾ

07. ಬಜಾಜ್ 2016 ಪ್ಲಾಟಿನಾ

ಪ್ರಯಾಣಿಕ ಬೈಕ್ ವಿಭಾಗದಲ್ಲೂ ಗರಿಷ್ಠ ಮಾರಾಟವನ್ನು ಗುರಿಯಾಗಿರಿಸಿಕೊಂಡಿರುವ ಬಜಾಜ್, ಮೊದಲೆರಡು ಸ್ಥಾನದಲ್ಲಿರುವ ಹೀರೊ, ಹೋಂಡಾ ಬೈಕ್ ಗಳಿಗೆ ಪ್ರತಿಸ್ಪರ್ಧಿಯಾಗಿ ಪ್ಲಾಟಿನಾವನ್ನು ಮರು ಬಿಡುಗಡೆ ಮಾಡಲಿದೆ. ಇದು ಹೆಚ್ಚು ಗ್ರಾಫಿಕ್ಸ್ ಮತ್ತು ಬಾಡಿ ಪ್ಯಾನೆಲ್ ಗಳನ್ನು ಪಡೆಯಲಿದೆ.

ಬಜಾಜ್ 2016 ಪ್ಲಾಟಿನಾ

ಬಜಾಜ್ 2016 ಪ್ಲಾಟಿನಾ

ನೂತನ ಬಜಾಜ್ ಪ್ಲಾಟಿನಾದಲ್ಲಿ 102 ಸಿಸಿ ಎಂಜಿನ್ 8.6 ಎನ್ ಎಂ ತಿರುಗುಬಲದಲ್ಲಿ ಎಂಟು ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಅಂದಾಜು ಬೆಲೆ: 43,000 ರು.ಗಳಿಂದ 45,000 ರು.

ನಿರೀಕ್ಷಿತ ಬಿಡುಗಡೆ: 2016 ಜುಲೈ-ಸೆಪ್ಟೆಂಬರ್

Article Published On: Thursday, June 16, 2016, 16:53 [IST]
English summary
Bajaj To Launch 7 New Bikes In 2016-17 — Here Is The List
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+