ಭಾರತವನ್ನು ತಲುಪಿದ ಯಮಹಾ ಎಂಟಿ-125; ಬಿಡುಗಡೆ ಯಾವಾಗ?

By Nagaraja

ಯಮಹಾದ ಪ್ರಭಾವಶಾಲಿ ಸ್ಟ್ರೀಟ್ ಫೈಟರ್ ಬೈಕ್ ಗಳಲ್ಲಿ ಒಂದಾಗಿರುವ ಎಂಟಿ-125 ಭಾರತ ಘಟಕವನ್ನು ತಲುಪಿದೆ. ಇದರೊಂದಿಗೆ ನಿಕಟ ಭವಿಷ್ಯದಲ್ಲೇ ಭಾರತದಲ್ಲಿ ಬಿಡುಗಡೆಯಾಗವು ನಿರೀಕ್ಷೆಯೂ ಇಮ್ಮಡಿಯಾಗಿದೆ.

ಪ್ರಸ್ತುತ ಜಪಾನ್ ಮೂಲದ ಯಮಹಾ ಸಂಸ್ಥೆಯು ಎಂಟಿ-125 ಬೈಕನ್ನು ಯುರೋಪ್ ನಲ್ಲಿ ಮಾತ್ರ ಒದಗಿಸುತ್ತಿದೆ. ಈಗ ಅಧ್ಯಯನ ಮತ್ತು ಅಭಿವೃದ್ಧಿ ಅವಶ್ಯಕತೆಗಳಿಗಾಗಿ ಭಾರತವನ್ನು ತಲುಪಿದೆ ಎನ್ನಲಾಗಿದೆ.

ಯಮಹಾ ಎಂಟಿ-125 ಭಾರತಕ್ಕೆ

ಸದ್ಯಕ್ಕೆ ಯಮಹಾ ಎಂಟಿ125 ಭಾರತದಲ್ಲಿ ಬಿಡುಗಡೆಯಾಗಲಿದೆಯೇ ಎಂಬುದಕ್ಕೆ ಸಂಬಂಧಪಟ್ಟಂತೆ ಯಾವುದೇ ಸೂಚನೆಯು ಲಭ್ಯವಾಗಿಲ್ಲ. ಬ್ರಿಟನ್ ನಿಂದ ಆಮದು ಮಾಡಲಾಗಿರುವ ಬೈಕ್ ಎಬಿಎಸ್ ತಂತ್ರಗಾರಿಕೆಯನ್ನು ಹೊಂದಿರುತ್ತದೆ.

ಯಮಹಾ ಎಂಟಿ-125 ಭಾರತಕ್ಕೆ

ಅಂದ ಹಾಗೆ ಯಮಹಾ ಎಂಟಿ-125, ಇಎಫ್‌ಐ, ಎಸ್‌ಒಎಚ್‌ಸಿ ಜೊತೆಗೆ 124.7 ಸಿಸಿ ಲಿಕ್ವಿಡ್ ಕೂಲ್ಡ್ ಸಿಂಗಲ್ ಸಿಲಿಂಡರ್ ನಿಂದ ನಿಯಂತ್ರಿಸಲ್ಪಡುತ್ತದೆ. ಇದು 12.4 ಎನ್ ಎಂ ತಿರುಗುಬಲದಲ್ಲಿ 15 ಅಶ್ವಶಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದ್ದು, ಆರು ಸ್ಪೀಡ್ ಗೇರ್ ಬಾಕ್ಸ್ ಲಗತ್ತಿಸಲಾಗಿದೆ.

ಯಮಹಾ ಎಂಟಿ-125 ಭಾರತಕ್ಕೆ

ಸ್ಟೀಲ್ ಡೆಲ್ಟಾಬಾಕ್ಸ್ ಫ್ರೇಮ್ ಹೊಂದಿರುವ ಯಮಹಾ ಎಂಟಿ125 ಸ್ಟ್ರೀಟ್ ಫೈಟರ್, ಅಪ್ ಸೈಡ್ ಡೌನ್ ಟೆಲಿಸ್ಕಾಪಿಕ್ ಫಾರ್ಕ್ ಜೊತೆ 130 ಎಂಎಂ ಟ್ರಾವೆಲ್ ಮತ್ತು ಮೊನೊಶಾಕ್ ವಿಧದ ರಿಯರ್ ಸಸ್ಪೆನ್ಷನ್ ಜೊತೆಗೆ 114 ಎಂಎಂ ಟ್ರಾವೆಲ್ ಪಡೆದಿದೆ.

ಯಮಹಾ ಎಂಟಿ-125 ಭಾರತಕ್ಕೆ

ಅಂತೆಯೇ ಮುಂದುಗಡೆ 292 ಎಂಎಂ ಡಿಸ್ಕ್ ಬ್ರೇಕ್ ಹಾಗೂ ಹಿಂದುಗಡೆ 230 ಎಂಎಂ ಡಿಸ್ಕ್ ಬ್ರೇಕ್ ಜೊತೆಗೆ ಡ್ಯುಯಲ್ ಎಬಿಎಸ್ ಲಭ್ಯವಾಗಲಿದೆ.

ಚಕ್ರಗಳು

ಚಕ್ರಗಳು

ಮುಂದುಗಡೆ: 100/80-17 M/C

ಹಿಂದುಗಡೆ: 130/70-17 M/C

ಆಯಾಮ (ಎಂಎಂ)

ಆಯಾಮ (ಎಂಎಂ)

ಉದ್ದ: 1955

ಅಗಲ: 740

ಎತ್ತರ: 1040

ಚಕ್ರಾಂತರ: 1355

ಗ್ರೌಂಡ್ ಕ್ಲಿಯರನ್ಸ್: 140

ಸೀಟು ಎತ್ತರ: 810

ಇಂಧನ ಟ್ಯಾಂಕ್: 11.5 ಲೀಟರ್

ಯಮಹಾ ಎಂಟಿ-125 ಭಾರತಕ್ಕೆ

ಇನ್ನು ಬೆಲೆಗೆ ಸಂಬಂಧಪಟ್ಟ ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ. ಈ ಸಂಬಂಧ ತಾಜಾ ಸುದ್ದಿಗಳಿಗಾಗಿ ಡ್ರೈವ್ ಸ್ಪಾರ್ಕ್ ಓದುತ್ತಿರಿ.

ಇವನ್ನೂ ಓದಿ

ಕಿಡಿ ಹೊತ್ತಿಸಿದ ಯಮಹಾ ಎಂಟಿ 09 ಸ್ಟ್ರೀಟ್ ಫೈಟರ್

Article Published On: Monday, February 29, 2016, 9:08 [IST]
English summary
Yamaha MT-125 Comes To Indian Shore For R&D Purpose
Read more on ಯಮಹಾ yamaha
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+