ಯಮಹಾ 150 ಸಿಸಿ ಪ್ರೀಮಿಯಂ ಸ್ಕೂಟರ್ ಭಾರತಕ್ಕೆ

By Nagaraja

ಮಗದೊಂದು ಆಕರ್ಷಕ ಸ್ಕೂಟರ್ ಭಾರತೀಯ ಮಾರುಕಟ್ಟೆಗೆ ಎಂಟ್ರಿ ಕೊಡಲು ಸಜ್ಜಾಗುತ್ತಿದೆ. ಅದುವೇ ಯಮಹಾ ಎನ್ ವೈಎಕ್ಸ್150. ಪ್ರಸಕ್ತ ಸಾಲಿನಲ್ಲೇ ಇಂಡೋನೇಷ್ಯಾ ಮಾರುಕಟ್ಟೆಗೆ ಪ್ರವೇಶಿಸಿರುವ ಯಮಹಾ ಎನ್ ವೈಎಕ್ಸ್ 150 ನಿಕಟ ಭವಿಷ್ಯದಲ್ಲೇ ಭಾರತಕ್ಕೂ ಎಂಟ್ರಿ ಕೊಡಲಿದೆ. ಇದರಂತೆ ಟೆಸ್ಟಿಂಗ್ ಪ್ರಕ್ರಿಯೆ ಭರದಿಂದ ಸಾಗುತ್ತಿದೆ.

ಯಮಹಾ 150 ಸಿಸಿ ಪ್ರೀಮಿಯಂ ಸ್ಕೂಟರ್ ಭಾರತಕ್ಕೆ

ಯಮಹಾ ಮೋಟಾರುಸೈಕಲ್ ವಿನ್ಯಾಸದಿಂದ ಪ್ರೇರಣೆ ಪಡೆದಿರುವ ಯಮಹಾ ಎನ್ ವೈಎಕ್ಸ್150, ಡ್ಯುಯಲ್ ಹೆಡ್ ಲೈಟ್ ಕ್ಲಸ್ಟರ್, ಎಕ್ಸಾಸ್ಟ್, ಟೈಲ್ ಲೈಟ್ ಕ್ಲಸ್ಟರ್ ಮತ್ತು ಎಲ್ ಇಡಿ ಬ್ರೇಕ್ ಲೈಟ್ಸ್ ಗಳನ್ನು ಪಡೆದಿದೆ.

ಯಮಹಾ 150 ಸಿಸಿ ಪ್ರೀಮಿಯಂ ಸ್ಕೂಟರ್ ಭಾರತಕ್ಕೆ

ಯಮಹಾ ಎನ್ ಮ್ಯಾಕ್ಸ್ ಗಿಂತಲೂ ಕೆಳದರ್ಜೆಯಲ್ಲಿ ಗುರುತಿಸಿಕೊಳ್ಳಲಿರುವ ಎನ್ ವೈಎಕ್ಸ್ 150, ತನ್ನ ಹಿರಿಯ ಸೋದರನಿಗೆ ಸಮಾನವಾಗಿ 155 ಸಿಸಿ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಎಂಜಿನ್ ಪಡೆಯಲಿದೆ.

ಯಮಹಾ 150 ಸಿಸಿ ಪ್ರೀಮಿಯಂ ಸ್ಕೂಟರ್ ಭಾರತಕ್ಕೆ

ಇದರ ಎಂಜಿನ್ 14.4 ಎನ್ ಎಂ ತಿರುಗುಬಲದಲ್ಲಿ 14.88 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ ವಿ ಬೆಲ್ಟ್ ಸಿವಿಟಿ ಗೇರ್ ಬಾಕ್ಸ್ ಇದರಲ್ಲಿರುತ್ತದೆ.

ಯಮಹಾ 150 ಸಿಸಿ ಪ್ರೀಮಿಯಂ ಸ್ಕೂಟರ್ ಭಾರತಕ್ಕೆ

ಎನ್ ಮ್ಯಾಕ್ಸ್ ನಲ್ಲಿರುವುದಕ್ಕೆ ಸಮಾನವಾಗಿ ಮುಂದುಗಡೆ ಪೆಡಲ್ ಆಕಾರದ ಡಿಸ್ಕ್ ಬ್ರೇಕ್ ಹಾಗೂ ಹಿಂದುಗಡೆ ಡ್ರಮ್ ಬ್ರೇಕ್ ಪಡೆಯಲಿದೆ. ಇನ್ನು ಎಬಿಎಸ್ ಮತ್ತು ಅಲಾಯ್ ಚಕ್ರಗಳು ಜೋಡಣೆಯಾಗಲಿದೆ.

ಯಮಹಾ 150 ಸಿಸಿ ಪ್ರೀಮಿಯಂ ಸ್ಕೂಟರ್ ಭಾರತಕ್ಕೆ

ಇನ್ನು ಯಮಹಾ ಎನ್ ವೈಎಕ್ಸ್ 150 ಸ್ಕೂಟರ್, 1955 ಎಂಎಂ ಉದ್ದ, 745 ಎಂಎಂ ಅಗಲ, 1115 ಎಂಎಂ ಎತ್ತರ ಮತ್ತು 1350 ಎಂಎಂ ಚಕ್ರಾಂತರವನ್ನು ಪಡೆಯಲಿದೆ.

ಯಮಹಾ 150 ಸಿಸಿ ಪ್ರೀಮಿಯಂ ಸ್ಕೂಟರ್ ಭಾರತಕ್ಕೆ

ವೈಶಿಷ್ಟ್ಯಗಳ ಬಗ್ಗೆ ಮಾತನಾಡುವುದಾದ್ದಲ್ಲಿ ಸ್ಮಾರ್ಟ್ ಎಂಟ್ರಿ ಸಿಸ್ಟಂ ಜೊತೆ ಬಟನ್ ವಿಧದ ಅಲ್ ಲಾಕ್ ಫ್ಯೂಯಲ್ ಲಿಡ್, ಅಂಡರ್ ಸೀಟು ಸ್ಟೋರೆಜ್, 5.8 ಇಂಚುಗಳ ಎಲ್ ಸಿಡಿ ಇನ್ಸ್ಟ್ರುಮೆಂಟ್ ಕ್ಲಸ್ಟರ್ ವ್ಯವಸ್ಥೆಯಿರಲಿದೆ.

ಯಮಹಾ 150 ಸಿಸಿ ಪ್ರೀಮಿಯಂ ಸ್ಕೂಟರ್ ಭಾರತಕ್ಕೆ

ಸೀಟು ಕೆಳಗಡೆ 25 ಲೀಟರ್ ಗಳ ಸ್ಟೋರೆಜ್ ಜಾಗ ಹೊಂದಿರುವ ನೂತನ ಸ್ಕೂಟರ್ 127 ಕೆ.ಜಿ ಗಳಷ್ಟು ತೂಕವನ್ನು ಹೊಂದಿರುತ್ತದೆ.

ಯಮಹಾ 150 ಸಿಸಿ ಪ್ರೀಮಿಯಂ ಸ್ಕೂಟರ್ ಭಾರತಕ್ಕೆ

ಇನ್ನುಳಿದಂತೆ ಎಲ್ ಸಿಡಿ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಕೀಲೆಸ್ ಸ್ಟ್ಯಾರ್ಟ್ ಸಿಸ್ಟಂ ವ್ಯವಸ್ಥೆಯೂ ಇದರಲ್ಲಿರುತ್ತದೆ.

ಯಮಹಾ 150 ಸಿಸಿ ಪ್ರೀಮಿಯಂ ಸ್ಕೂಟರ್ ಭಾರತಕ್ಕೆ

ಅಂದ ಹಾಗೆ ವರ್ಷಾರಂಭದಲ್ಲಿ ನಡೆದ 2016 ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನ ಕಂಡಿರುವ ಯಮಹಾ ಎನ್ ವೈಎಕ್ಸ್ 150 ಸ್ಕೂಟರ್, ಭಾರತದಲ್ಲಿ ಪ್ರೀಮಿಯಂ ಸ್ಕೂಟರ್ ಗಳ ಸಾಲಿನಲ್ಲಿ ಗುರುತಿಸಿಕೊಳ್ಳಲಿದೆ.

ಯಮಹಾ 150 ಸಿಸಿ ಪ್ರೀಮಿಯಂ ಸ್ಕೂಟರ್ ಭಾರತಕ್ಕೆ

ಭಾರತದಲ್ಲಿ ಬಿಡುಗಡೆಯಾದ್ದಲ್ಲಿ ಯಮಹಾ ಎನ್ ವೈಎಕ್ಸ್150 ಪ್ರೀಮಿಯಂ ಸ್ಕೂಟರ್ ಪಿಯಾಜಿಯೊ ಎಪ್ರಿಲಿಯಾ ಎಸ್ ಆರ್ 150 ಮಾದರಿಗೆ ಪೈಪೋಟಿಯನ್ನು ಒಡ್ಡಲಿದೆ.

Article Published On: Saturday, October 15, 2016, 9:28 [IST]
English summary
Yamaha NVX 150 Scooter Spotted Testing
Read more on ಯಮಹಾ yamaha
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+