2018ರ ಕವಾಸಕಿ ಝೆಡ್‌ಎಕ್ಸ್ 10 ಆರ್‌ಆರ್ ಸೂಪರ್ ಬೈಕ್ ಅನಾವರಣ

Written By:

2018 ಝೆಡ್‌ಎಕ್ಸ್ 10 ಆರ್‌ಆರ್ ಸೂಪರ್ ಸ್ಪೀಡ್ ಬೈಕಿನ ಅಪ್ಡೇಟೆಡ್ ಆವೃತಿಯು ಭಾರತದಲ್ಲಿ ಬಿಡುಗಡೆಗೊಳಿಸಲು ಕವಾಸಕಿ ಸಂಸ್ಥೆಯು ಮುಂದಾಗಿದ್ದು, ಈ ಹೊಸ ಮೋಟಾರ್ ಸೈಕಲ್ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

2018ರ ಕವಾಸಕಿ ಝೆಡ್‌ಎಕ್ಸ್ 10 ಆರ್‌ಆರ್ ಸೂಪರ್ ಬೈಕ್ ಅನಾವರಣ

ಜಪಾನೀ ಮೋಟಾರ್ ಸೈಕಲ್ ತಯಾರಕ ಕವಾಸಕಿ ಸಂಸ್ಥೆಯು 2018 ಝೆಡ್‌ಎಕ್ಸ್ 10 ಆರ್‌ಆರ್ ಸೂಪರ್ ಸ್ಪೀಡ್ ಬೈಕನ್ನು ಬಹಿರಂಗಪಡಿಸಿದೆ. ಈ ಸೂಪರ್ ಬೈಕ್ ಪುನರಾವರ್ತನೆಯು ಇತ್ತೀಚಿಗೆ ಬಿಡುಗಡೆಯಾದ ಡಬ್ಲ್ಯೂಎಸ್‌ಬಿಕೆ ಚಾಂಪಿಯನ್‌ಷಿಪ್ ಜಯಿಸಿರುವ ಮೋಟಾರ್‌ಸೈಕಲ್ ಆಧಾರಿತವಾಗಿದೆ.

2018ರ ಕವಾಸಕಿ ಝೆಡ್‌ಎಕ್ಸ್ 10 ಆರ್‌ಆರ್ ಸೂಪರ್ ಬೈಕ್ ಅನಾವರಣ

ಆದಾಗ್ಯೂ, ಪ್ರಮುಖ ಬದಲಾವಣೆಗಳನ್ನು ಪಡೆದುಕೊಳ್ಳಲಿದೆ ಎಂದು ನಿರೀಕ್ಷಿಸಿದವರಿಗೆ ಖಂಡಿತ ಈ ಮೋಟಾರ್ ಸೈಕಲ್ ನಿರಾಶೆ ಮಾಡಲಿದೆ. ಏಕೆಂದರೆ, ಝೆಡ್‌ಎಕ್ಸ್10 ಆರ್‌ಆರ್ ಬೈಕ್ ಕೇವಲ ಎರಡು 'ಬಣ್ಣ ಬದಲಾವಣೆ' ಪಡೆದು ಬಿಡುಗಡೆಗೊಳ್ಳಲಿದೆ.

2018ರ ಕವಾಸಕಿ ಝೆಡ್‌ಎಕ್ಸ್ 10 ಆರ್‌ಆರ್ ಸೂಪರ್ ಬೈಕ್ ಅನಾವರಣ

6-ಸ್ಪೀಡ್ ಗೇರ್‌ಬಾಕ್ಸ್ ಮೂಲಕ ಹಿಂಬದಿ ಚಕ್ರಕ್ಕೆ ಶಕ್ತಿಯನ್ನು ಕಳುಹಿಸುವ ಪ್ರಸರಣೆಯನ್ನು ಈ ಕಾರು ಹೊಂದಿದ್ದು, ಪೈರೆಲಿ ಸುಪರ್ಕೊರ್ಸಾ ಎಸ್‌ಪಿ ಟೈರ್‌ಗಳನ್ನು ಪಡೆದುಕೊಂಡಿರುವ ಹಗುರವಾದ 7-ಸ್ಪೋಕ್ಸ್ ಮಾರ್ಚಿಸಿನಿ ಚಕ್ರಗಳನ್ನು ಒಳಗೊಂಡಿದೆ.

2018ರ ಕವಾಸಕಿ ಝೆಡ್‌ಎಕ್ಸ್ 10 ಆರ್‌ಆರ್ ಸೂಪರ್ ಬೈಕ್ ಅನಾವರಣ

ಯಾಂತ್ರಿಕವಾಗಿ, ಹೊಸ ಝೆಡ್‌ಎಕ್ಸ್ 10 ಆರ್‌ಆರ್ ಸೂಪರ್ ಬೈಕ್, ಎಂದಿನಂತೆ 998 ಸಿಸಿ ಲಿಕ್ವಿಡ್ ಕೋಲ್ಡ್ 4-ಸ್ಟ್ರೋಕ್ ಇನ್-ಲೈನ್ ನಾಲ್ಕು-ಸಿಲಿಂಡರ್ ಎಂಜಿನ್ ಅಳವಡಿಕೆಯೊಂದಿಗೆ ಬಿಡುಗಡೆಗೊಂಡಿದ್ದು, 11.5 ಆರ್‌ಪಿಎಂನಲ್ಲಿ 113.5 ಎನ್‌ಎಂ ಟಾರ್ಕ್ ಮತ್ತು 137 ಆರ್‌ಪಿಎಂನಲ್ಲಿ 207 ಬಿಎಚ್‌ಪಿ ಶಕ್ತಿಯನ್ನು ಉತ್ಪಾದಿಸುತ್ತದೆ.

2018ರ ಕವಾಸಕಿ ಝೆಡ್‌ಎಕ್ಸ್ 10 ಆರ್‌ಆರ್ ಸೂಪರ್ ಬೈಕ್ ಅನಾವರಣ

ಝೆಡ್‌ಎಕ್ಸ್ 10 ಆರ್‌ಆರ್ ಸೂಪರ್ ಸ್ಪೋರ್ಟ್ಸ್ ಕವಾಸಕಿ ಬೈಕ್ 2018ರ ಅಪ್ಡೇಟ್ ಕೇವಲ ಎರಡು ಸಣ್ಣ ಬದಲಾವಣೆಗಳನ್ನು ಪಡೆದುಕೊಂಡಿದ್ದು, ಬಣ್ಣ ಬದಲಾವಣೆಗೆ ಮಾತ್ರ ಸೀಮಿತವಾಗಿದೆ ಎನ್ನಬಹುದು.

2018ರ ಕವಾಸಕಿ ಝೆಡ್‌ಎಕ್ಸ್ 10 ಆರ್‌ಆರ್ ಸೂಪರ್ ಬೈಕ್ ಅನಾವರಣ

ಈ ಕವಾಸಕಿ ಬೈಕಿನ ಬದಲಾವಣೆಯು ಕಡಿಮೆಯಿದ್ದರೂ ಸಹ, ಸಂಸ್ಥೆಯು ತನ್ನ ಬೈಕುಗಳನ್ನು ಮಾರಾಟ ಮಾಡುವಲ್ಲಿ ಯಾವುದೇ ಸಮಸ್ಯೆಗಳನ್ನು ಎದುರಿಸುವುದಿಲ್ಲ ಎಂಬ ಮಾತು ವಾಹನೋದ್ಯಮದಲ್ಲಿ ಹರಿದಾಡುತ್ತಿದ್ದು, ಈ ಸೂಪರ್ ಬೈಕ್ ಕೇವಲ ರೂ. 22 ಲಕ್ಷ ಬೆಲೆ ಪಡೆದುಕೊಂಡಿದೆ.

English summary
Japanese motorcycle manufacturer Kawasaki has revealed the 2018 ZX 10RR, the latest iteration of its superbike based on its WSBK championship winning motorcycle.
Story first published: Monday, October 9, 2017, 15:51 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark