ಹೊಸ ಬಣ್ಣದ ಆಯ್ಕೆಯಲ್ಲಿ ಎಪ್ರಿಲಿಯಾ ಎಸ್ಆರ್ 150 ಬಲಿಷ್ಠ ಸ್ಕೂಟರ್ ಬಿಡುಗಡೆಯಾಗುತ್ತಾ ?

ಭಾರತದಲ್ಲಿ ಇಟಲಿಯ ದ್ವಿಚಕ್ರ ವಾಹನ ತಯಾರಕ ಎಪ್ರಿಲಿಯಾ ಕಂಪನಿಯು ಕಳೆದ ವರ್ಷದ ಆಗಸ್ಟ್‌ನಲ್ಲಿ ತನ್ನ ಎಸ್ಆರ್ 150 ಸ್ಕೂಟರ್ ಅನ್ನು ಕೈಗೆಟುಕುವ ಬೆಲೆಯಲ್ಲಿ ಬಿಡುಗಡೆ ಮಾಡಿತ್ತು, ಇದು ದೇಶದಲ್ಲಿ ಅತ್ಯಂತ ಶಕ್ತಿಯುತ ಸ್ಕೂಟರ್ ಆಗಿದೆ.

By Girish

ನಂತರ ಈ ವರ್ಷದ ಫೆಬ್ರವರಿ ತಿಂಗಳಿನಲ್ಲಿ ಎಪ್ರಿಲಿಯಾ ಹೊಸ ರೇಸ್ ಆವೃತ್ತಿಯೊಂದಿಗೆ ಸ್ಕೂಟರ್ ಅನ್ನು ನವೀಕರಿಸಿತ್ತು. ಈ ವಾಹನವು ಯಾಂತ್ರಿಕ ಮತ್ತು ಸೌಂದರ್ಯವರ್ಧಕ ನವೀಕರಣಗಳನ್ನು ಒಳಗೊಂಡಿತ್ತು. ಈಗ, ಎಪ್ರಿಲಿಯಾ ಇನ್ನೊಂದು ಅಪ್‌ಡೇಟ್ ಬಿಡುಗಡೆಗೊಳಿಸಲು ಸಿದ್ಧವಾಗಿದೆ ಎಂಬ ಮಾಹಿತಿ ಸಿಕ್ಕಿದೆ.

ಹೊಸ ಬಣ್ಣದ ಆಯ್ಕೆಯಲ್ಲಿ ಎಪ್ರಿಲಿಯಾ ಎಸ್ಆರ್ 150 ಬಲಿಷ್ಠ ಸ್ಕೂಟರ್ ಬಿಡುಗಡೆಯಾಗುತ್ತಾ ?

ಹೌದು, ನಾಲ್ಕು ಹೊಸ ಬಣ್ಣದ ಆಯ್ಕೆಗಳನ್ನು ಪಡೆದ ಎಪ್ರಿಲಿಯಾ ಎಸ್ಆರ್‌ಟಿ 150 ಸ್ಕೂಟರ್ ಪುಣೆಯ ಮಾರಾಟಗಾರರ ಸ್ಟಾಕ್‌ಯಾರ್ಡ್‌ನಲ್ಲಿ ಗುರುತಿಸಿಕೊಂಡಿದೆ ಹಾಗು ಎಲ್ಲಾ ಮಾದರಿಗಳಲ್ಲಿಯೂ ಸಹ ಗ್ರಾಫಿಕ್ಸ್ ಒಂದೇ ಆಗಿರಲಿದೆ.

ಹೊಸ ಬಣ್ಣದ ಆಯ್ಕೆಯಲ್ಲಿ ಎಪ್ರಿಲಿಯಾ ಎಸ್ಆರ್ 150 ಬಲಿಷ್ಠ ಸ್ಕೂಟರ್ ಬಿಡುಗಡೆಯಾಗುತ್ತಾ ?

ಸದ್ಯ ಬಿಡುಗಡೆಗೆ ಸಿದ್ದವಾಗಿರುವ ಎಪ್ರಿಲಿಯಾ ಎಸ್ಆರ್‌ಟಿ 150 ಸ್ಕೂಟರ್, ಮೆಟಾಲಿಕ್ ಗ್ರೀನ್, ಲೋಹೀಯ ಸಿಲ್ವರ್, ಮೆಟಾಲಿಕ್ ಲೈಟ್ ಬ್ಲೂ ಮತ್ತು ಮೆಟಾಲಿಕ್ ಡಾರ್ಕ್ ಬ್ಲೂ ಎಂಬ ನಾಲ್ಕು ಹೊಸ ಬಣ್ಣಗಳಲ್ಲಿ ಕಾಣಿಸಿಕೊಂಡಿದೆ.

ಹೊಸ ಬಣ್ಣದ ಆಯ್ಕೆಯಲ್ಲಿ ಎಪ್ರಿಲಿಯಾ ಎಸ್ಆರ್ 150 ಬಲಿಷ್ಠ ಸ್ಕೂಟರ್ ಬಿಡುಗಡೆಯಾಗುತ್ತಾ ?

ಪ್ರಸ್ತುತ ಎಪ್ರಿಲಿಯಾವು ಎಸ್ಆರ್ 150 ಕೇವಲ ಮ್ಯಾಟ್ ಬ್ಲ್ಯಾಕ್ ಮತ್ತು ಹೊಳಪು ವೈಟ್ ಕೆಂಪು ಡೆಕಲ್ಸ್ ಮತ್ತು ದ್ವಿ-ಟೋನ್ ಬಣ್ಣದ ಯೋಜನೆಗಳೊಂದಿಗೆ ಭಾರತದಲ್ಲಿ ಮಾರಾಟವಾಗುತ್ತಿದೆ. ಎಪ್ರಿಲಿಯಾ ಎಸ್ಆರ್ 150 ರೇಸ್ ಎಡಿಷನ್ ಓಟದ ಲೇವಿಯೊಂದಿಗೆ ಮೇಜ್ ಗ್ರೇ ಬಣ್ಣವನ್ನು ಹೊಂದಿದೆ.

ಹೊಸ ಬಣ್ಣದ ಆಯ್ಕೆಯಲ್ಲಿ ಎಪ್ರಿಲಿಯಾ ಎಸ್ಆರ್ 150 ಬಲಿಷ್ಠ ಸ್ಕೂಟರ್ ಬಿಡುಗಡೆಯಾಗುತ್ತಾ ?

ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುವ ಅತ್ಯಂತ ಶಕ್ತಿಯುತ ಎಸ್ಆರ್ 150 ಸ್ಕೂಟರಿನ ನಾಲ್ಕು ಹೊಸ ಬಣ್ಣಗಳು ವಾಹನದ ಸ್ಪೋರ್ಟಿ ಲುಕ್ ಹೆಚ್ಚಿಸಲು ಸಹಾಯ ಮಾಡುತ್ತವೆ. ಹೊಸ ಬಣ್ಣ ಆಯ್ಕೆಗಳ ಹೊರತಾಗಿ, ಉಳಿದ ಅಂಶಗಳು ಪ್ರಸ್ತುತ ಮಾರಾಟವಾಗುತ್ತಿರುವ ಮಾದರಿಗೆ ಹೊಲಲಿದೆ.

ಹೊಸ ಬಣ್ಣದ ಆಯ್ಕೆಯಲ್ಲಿ ಎಪ್ರಿಲಿಯಾ ಎಸ್ಆರ್ 150 ಬಲಿಷ್ಠ ಸ್ಕೂಟರ್ ಬಿಡುಗಡೆಯಾಗುತ್ತಾ ?

ಎಪ್ರಿಲಿಯಾ ಎಸ್ಆರ್ 150 ಸ್ಕೂಟರ್, 154.8 ಸಿಸಿ ಎಂಜಿನ್ ಪಡೆದುಕೊಂಡಿದೆ ಮತ್ತು 10.25 ಬಿಎಚ್‌ಪಿ ಮತ್ತು 11.40 ಎನ್ಎಂ ಗರಿಷ್ಠ ಟಾರ್ಕ್ ಹೊರ ಹಾಕುತ್ತದೆ. ಸ್ಕೂಟರು ಮುಂಭಾಗದಲ್ಲಿ ಹೈಡ್ರಾಲಿಕ್ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಹೈಡ್ರಾಲಿಕ್ ಶಾಕ್ ಅಬ್ಸರ್ಬರ್ ಅಳವಡಿಸಲಾಗಿದೆ.

ಹೊಸ ಬಣ್ಣದ ಆಯ್ಕೆಯಲ್ಲಿ ಎಪ್ರಿಲಿಯಾ ಎಸ್ಆರ್ 150 ಬಲಿಷ್ಠ ಸ್ಕೂಟರ್ ಬಿಡುಗಡೆಯಾಗುತ್ತಾ ?

14 ಇಂಚಿನ ಮಿಶ್ರಲೋಹದ ಚಕ್ರಗಳನ್ನು ಹೊಂದಿರುವ ಏಕೈಕ ಸ್ಕೂಟರ್ ಎಸ್ಆರ್ 150 ಆಗಿದ್ದು, ಇದು ಉತ್ತಮ ನಿರ್ವಹಣೆಗೆ ಸಹಾಯ ಮಾಡುತ್ತದೆ. ಎಪ್ರಿಲಿಯಾ ಎಸ್ಆರ್ 150 ಸ್ಕೂಟರ್ ರೂ.69,600 ಎಕ್ಸ್ ಶೋರೂಂ(ದೆಹಲಿ) ದರದಲ್ಲಿ ಲಭ್ಯವಿದೆ.

Most Read Articles

Kannada
English summary
The new Aprilia SRT 150 has spotted with four new colour options at a dealership stockyard in Pune.
Story first published: Friday, November 17, 2017, 14:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X