ಪಲ್ಸರ್ ಪ್ರೇಮಿಗಳಿಗೆ ಖುಷಿಸುದ್ದಿ; ಬಿಡುಗಡೆಯಾಗಿದೆ ಹೊಸ ಪಲ್ಸರ್ ಆರ್.ಎಸ್ 200

Written By:

ಬೈಕ್ ಪ್ರೇಮಿಗಳಿಗೆ ಪಲ್ಸರ್ ಬೈಕೆಂದರೆ ಏನೋ ಮೋಹ. ದೇಶದ ನಂ.1 ಕ್ರೀಡಾ ಬೈಕ್ ಗಳನ್ನು ಕೊಡುಗೆಯಾಗಿ ನೀಡಿರುವ ಮುಂಚೂಣಿಯ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆ ಬಜಾಜ್ ಈಗ ತನ್ನ ಜನಪ್ರಿಯ ಪಲ್ಸರ್ ಆರ್.ಎಸ್ 200 ಬೈಕ್ ಬಿಡುಗಡೆಗೊಳಿಸಿದೆ.

To Follow DriveSpark On Facebook, Click The Like Button
 ಹೊಸ 2017 ಪಲ್ಸರ್ ಆರ್.ಎಸ್ 200 ಸದ್ಯ 2 ಬಣ್ಣಗಳಲ್ಲಿ ಲಭ್ಯವಿದ್ದು, ಗ್ರಾಫೈಟ್ ಬ್ಲ್ಯಾಕ್ ಮತ್ತು ರೇಸಿಂಗ್ ನೀಲಿ ಬಣ್ಣದೊಂದಿಗೆ ಹಿಂದಿನಗಿಂತಲೂ ಹೆಚ್ಚು ಆಕರ್ಷಣೆಯಿಂದ ಕೂಡಿದೆ, ಹಳೆಯ ಆವೃತ್ತಿಯ ಬಣ್ಣಗಳ ಆಯ್ಕೆಯನ್ನು ನೀಡಲಾಗುವುದಿಲ್ಲ ಎಂದು ಕಂಪನಿ ತಿಳಿಸಿದೆ.

ಹೊಸ ವರ್ಷದ ಆರಂಭದಲ್ಲಿಯೇ ಬಿಡುಗಡೆಯಾಗಬೇಕಿದ್ದ ಬಜಾಜ್ ಆಟೋ ಕಂಪನಿಯ ಹೊಸ ವಿನ್ಯಾಸದ ಆರ್.ಎಸ್ 200 ಬೈಕ್ ಕೊಂಚ ತಡವಾಗಿ ಬಿಡುಗಡೆಗೊಂಡಿದೆ. ಹೊಸ ತಂತ್ರಜ್ಞಾನದ ಇರುವ ಬಿ.ಎಸ್-IV ಕಂಪ್ಲೈಂಟ್ ಎಂಜಿನ್ ಹೊಂದಿರುವ ಬೈಕ್ ಇದಾಗಿದ್ದು, ಎರಡು ಉತ್ತೇಜಕ ಬಣ್ಣಗಳಲ್ಲಿ ಬಿಡುಗಡೆಗೊಂಡಿದ್ದು, ನಿಮಗೆ ಬೇಕಾದ ಬಣ್ಣವನ್ನು ಆಯ್ದುಕೊಳ್ಳಬಹುದಾಗಿದೆ. ಸಂಪೂರ್ಣವಾಗಿ ಉನ್ನತೀಕರಣಗೊಳಿಸಿರುವ ಈ ಹೊಸ ಪಲ್ಸರ್ ಹೊಸ ತಲೆಮಾರಿಗೆ ಹೇಳಿ ಮಾಡಿಸಿದ ಬೈಕ್ ಎನ್ನಬಹುದು.

ಪಲ್ಸರ್ ಪ್ರೇಮಿಗಳಿಗೆ ಖುಷಿಸುದ್ದಿ; ಬಿಡುಗಡೆಯಾಗಿದೆ ಹೊಸ ಪಲ್ಸರ್ ಆರ್.ಎಸ್ 200

ಹೊಸ 2017 ಪಲ್ಸರ್ ಆರ್.ಎಸ್ 200 ಸದ್ಯ 2 ಬಣ್ಣಗಳಲ್ಲಿ ಲಭ್ಯವಿದ್ದು, ಗ್ರಾಫೈಟ್ ಬ್ಲ್ಯಾಕ್ ಮತ್ತು ರೇಸಿಂಗ್ ನೀಲಿ ಬಣ್ಣದೊಂದಿಗೆ ಹಿಂದಿನಗಿಂತಲೂ ಹೆಚ್ಚು ಆಕರ್ಷಣೆಯಿಂದ ಕೂಡಿದೆ, ಹಳೆಯ ಆವೃತ್ತಿಯ ಬಣ್ಣಗಳ ಆಯ್ಕೆಯನ್ನು ನೀಡಲಾಗುವುದಿಲ್ಲ ಎಂದು ಕಂಪನಿ ತಿಳಿಸಿದೆ.

ಪಲ್ಸರ್ ಪ್ರೇಮಿಗಳಿಗೆ ಖುಷಿಸುದ್ದಿ; ಬಿಡುಗಡೆಯಾಗಿದೆ ಹೊಸ ಪಲ್ಸರ್ ಆರ್.ಎಸ್ 200

ಈ ಬೈಕ್‌ನ ಅನುಕೂಲಗಳು ಈ ಮಾದರಿಯನ್ನು ಮತ್ತಷ್ಟು ವಿಶೇಷಗೊಳಿಸಲಾಗಿದೆ. ಬೈಕ್ ಅನ್ನು ಬಲಿಷ್ಠಗೊಳಿಸುವುದರ ಜೊತೆಗೆ ರಸ್ತೆಯ ಮೇಲೆ ಬೈಕನ್ನು ಓಡಿಸುವಾಗ ಹೆಚ್ಚು ರೋಚಕ ಅನ್ನಿಸುತ್ತದೆ.

ಪಲ್ಸರ್ ಪ್ರೇಮಿಗಳಿಗೆ ಖುಷಿಸುದ್ದಿ; ಬಿಡುಗಡೆಯಾಗಿದೆ ಹೊಸ ಪಲ್ಸರ್ ಆರ್.ಎಸ್ 200

ಪಲ್ಸರ್ ಆರ್.ಎಸ್ 200 ಬೈಕಿನ ಮುಂಬಾಗದಲ್ಲಿ ಸಾಕಷ್ಟು ಬದಲಾವಣೆ ತರಲಾಗಿದ್ದು, ಫೋರ್ಕ್ ಹತ್ತಿರ, ಫೇರಿಂಗ್ ಪ್ಯಾನಲ್ ಗಳಲ್ಲಿ ಮತ್ತು ಟೈಲ್ ವಿಭಾಗದಲ್ಲಿ ಸಿಲ್ವರ್ ಮತ್ತೆ ನೀಲಿ ಬಣ್ಣಗಳನ್ನು ಹೆಚ್ಚು ಬಳಸಲಾಗಿದ್ದು, ನೋಡುಗರ ಕಣ್ಣಿಗೆ ಮುದ ನೀಡಲಿದೆ. ರೇಸಿಂಗ್ ನೀಲಿ ಬಣ್ಣದ ಬೈಕ್ ನೀಲಿ ಬಣ್ಣದ ಅಲಾಯ್ ಚಕ್ರಗಳನ್ನು ಹೊಂದಿದ್ದು, ಮತ್ತೊಂದು ಬಣ್ಣದ ಬೈಕ್ ಕಪ್ಪು ಬಣ್ಣದ ಅಲಾಯ್ ಚಕ್ರ ಹೊಂದಿರಲಿದೆ. ಎಂಟ್ರಿ ಲೆವೆಲ್ ಕ್ರೀಡಾ ಬೈಕ್ ಗಳ ಸಾಲಿನಲ್ಲಿ ಧೂಳೆಬ್ಬಿಸಿರುವ ಪಲ್ಸರ್ ಈಗ ನೂತನ ಆರ್.ಎಸ್ 200 ಪಲ್ಸರ್ ಬೈಕ್ ಪ್ರೇಮಿಗಳ ಮನಸ್ಸು ಗೆಲ್ಲುವುದರಲ್ಲಿ ಅನುಮಾನವಿಲ್ಲ ಎನ್ನಬಹುದು.

ಪಲ್ಸರ್ ಪ್ರೇಮಿಗಳಿಗೆ ಖುಷಿಸುದ್ದಿ; ಬಿಡುಗಡೆಯಾಗಿದೆ ಹೊಸ ಪಲ್ಸರ್ ಆರ್.ಎಸ್ 200

ನೂತನವಾಗಿ ಬಿಡುಗಡೆಯಾಗಿರೋ ಪಲ್ಸರ್ ಆರ್.ಎಸ್ 200ನಲ್ಲಿ ಈ ಹಿಂದಿನ ಮಾದರಿಯ ಕೆಲವು ವಿಶೇಷತೆಗಳನ್ನು ನೂತನ ಮಾದರಿಯಲ್ಲೂ ಮುಂದುವರೆಸಲಾಗಿದೆ. ಈಗ ಆಗಮನವಾಗಿರುವ ಪಲ್ಸರ್ ಆರ್.ಎಸ್ 200 ಬೈಕ್ ಸ್ಟ್ಯಾಂಡರ್ಡ್ ಹಾಗೂ ಎಬಿಎಸ್ ಮಾದರಿಗಳಲ್ಲೂ ಲಭ್ಯವಾಗಲಿದೆ.

ಪಲ್ಸರ್ ಪ್ರೇಮಿಗಳಿಗೆ ಖುಷಿಸುದ್ದಿ; ಬಿಡುಗಡೆಯಾಗಿದೆ ಹೊಸ ಪಲ್ಸರ್ ಆರ್.ಎಸ್ 200

ವಿಶೇಷವಾಗಿ ಟ್ಯೂನ್ ಗೊಳಿಸಲಾಗಿರುವ ಈ ಬೈಕ್ ನ ಎಂಜಿನ್ 199.5 ಸಿಸಿ ಎಂಜಿನ್ ಸಾಮರ್ಥ್ಯ ಹೊಂದಿದೆ. ಒಂದು ಸಿಲಿಂಡರ್ ಹೊಂದಿರುವ ಬೈಕ್ ಇದಾಗಿದ್ದು, ಈ ಬೈಕ್ 18.16ಎನ್ಎಂ ತಿರುಗುಬಲದಲ್ಲಿ 24 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಪಲ್ಸರ್ ಪ್ರೇಮಿಗಳಿಗೆ ಖುಷಿಸುದ್ದಿ; ಬಿಡುಗಡೆಯಾಗಿದೆ ಹೊಸ ಪಲ್ಸರ್ ಆರ್.ಎಸ್ 200

ಇನ್ನು ಬೈಕ್ ನ ಬೆಲೆಯ ವಿಚಾರಕ್ಕೆ ಬರುವುದಾದರೆ ಸ್ಟ್ಯಾಂಡರ್ಡ್ ವೆರಿಯೆಂಟ್ ಬೈಕ್ ನ ಬೆಲೆ ರೂ. 1,21,881 (ದೆಹಲಿ ಎಕ್ಸ್ ಶೋ ರೂಂ) ಲಕ್ಷ ಮತ್ತು ಎಬಿಎಸ್ ಹೊಂದಿರುವ ಬೈಕ್ ನ ಬೆಲೆ ರೂ. 1,33,883 (ದೆಹಲಿ ಎಕ್ಸ್ ಶೋ ರೂಂ) ಎಂದು ಕಂಪನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಪಲ್ಸರ್ ಪ್ರೇಮಿಗಳಿಗೆ ಖುಷಿಸುದ್ದಿ; ಬಿಡುಗಡೆಯಾಗಿದೆ ಹೊಸ ಪಲ್ಸರ್ ಆರ್.ಎಸ್ 200

ನೂತನ ಆರ್.ಎಸ್ 200 ಸ್ಟೈಲ್‌ನಲ್ಲಿ ಮಾತ್ರವಲ್ಲದೆ ಎಂಜಿನ್‌ ಹಾಗೂ ಕಾರ್ಯಕ್ಷಮತೆಗಳಲ್ಲಿಯೂ ವಿಶೇಷವಾಗಿದೆ. ವಿನೂತನ ಮಾದರಿಯಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಬಜಾಜ್ ಪಲ್ಸರ್ ಆರ್.ಎಸ್ 200 ಬೈಕ್, ನೋಡೋದಕ್ಕೆ ಸಿಕ್ಕಾಪಟ್ಟೆ ಸ್ಟೈಲಿಶ್ ಆಗಿದೆ. ಸಂಪೂರ್ಣವಾಗಿ ಉನ್ನತೀಕರಣಗೊಳಿಸಿರುವ ಈ ಹೊಸ ಪಲ್ಸರ್ ಹೊಸ ತಲೆಮಾರಿಗೆ ಹೇಳಿ ಮಾಡಿಸಿದ್ದು. ಇನ್ನೂ ನೂತನ ತಂತ್ರಜ್ಞಾನ ಹೊಂದಿರುವ ಪಲ್ಸರ್ ಆರ್.ಎಸ್ 200 ಸಾಹಸಿ ಬೈಕ್ ಪ್ರಿಯರಿಗೆ ಸಖತ್ ಕ್ರೇಜ್ ಹುಟ್ಟಿಸಲಿದೆ.

ಬಜಾಜ್ ಪಲ್ಸರ್ 200ಎನ್ಎಸ್‌ಗೆ ತೀವ್ರ ಸ್ಪರ್ಧೆ ಒಡ್ಡಲಿರುವ ಟಿವಿಎಸ್ ಅಪಾಚಿ ಆರ್‌ಟಿಆರ್ 200 4ವಿ ಬೈಕ್ ಫೋಟೋಗಳನ್ನು ವೀಕ್ಷಿಸಲು ಈ ಕೆಳಗಿನ ಗ್ಯಾಲರಿಯನ್ನು ಕ್ಲಿಕ್ಕಿಸಿ.

English summary
Bajaj Auto has launched the updated Pulsar RS200 with new colour scheme and BS-IV compliant engine. The motorcycle is priced at Rs 1,21,881 ex-showroom (Delhi).
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark