ಜುಲೈ 25ಕ್ಕೆ ಬಿಡುಗಡೆಯಾಗಲಿದೆ ಬೆನೆಲ್ಲಿ ಟೋರ್ನಾಡೋ 302ಆರ್ ಸೂಪರ್ ಬೈಕ್
ಇಟಲಿಯ ಐಕಾನಿಕ್ ಸೂಪರ್ ಬೈಕ್ ಸಂಸ್ಥೆಯಾಗಿರುವ ಬೆನೆಲ್ಲಿ ಭಾರತದಲ್ಲಿ ಇದೇ ತಿಂಗಳು 25ಕ್ಕೆ ಹೊಸದೊಂದು ಸೂಪರ್ ಬೈಕ್ ಪರಿಚಯಿಸುತ್ತಿದ್ದು, ಈಗಾಗಲೇ ಹೊಸ ಬೈಕ್ ಖರೀದಿಗಾಗಿ ಬುಕ್ಕಿಂಗ್ ಶುರುವಾಗಿದೆ.
ಇಟಲಿಯ ಐಕಾನಿಕ್ ಸೂಪರ್ ಬೈಕ್ ಸಂಸ್ಥೆಯಾಗಿರುವ ಬೆನೆಲ್ಲಿ ಭಾರತದಲ್ಲಿ ಇದೇ ತಿಂಗಳು 25ಕ್ಕೆ ಹೊಸದೊಂದು ಸೂಪರ್ ಬೈಕ್ ಪರಿಚಯಿಸುತ್ತಿದ್ದು, ಈಗಾಗಲೇ ಹೊಸ ಬೈಕ್ ಖರೀದಿಗಾಗಿ ಬುಕ್ಕಿಂಗ್ ಶುರುವಾಗಿದೆ.

ಮೋಟಾರ್ ಸ್ಪೋರ್ಟ್ ಬೈಕ್ ಆವೃತ್ತಿಯಲ್ಲಿ ಅತಿಹೆಚ್ಚು ಬೇಡಿಕೆ ಹೊಂದಿರುವ ಬೆನೆಲ್ಲಿ ಬೈಕ್ ಉತ್ಪಾದನಾ ಸಂಸ್ಥೆಯು ಭಾರತೀಯ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಟೋರ್ನಾಡೋ 302ಆರ್ ಸೂಪರ್ ಬೈಕ್ ಅನ್ನು ಬಿಡುಗಡೆ ಮಾಡುತ್ತಿದೆ.

ಬೆನೆಲ್ಲಿ ಟೋರ್ನಾಡೋ 302ಆರ್ ಬೈಕ್ ಆವೃತ್ತಿಯು 300 ಸಿಸಿ ಲಿಕ್ವಿಡ್ ಕೂಲ್ಡ್ ಇನ್‌ಲೈನ್ ಟ್ವಿನ್ ಸಿಲಿಂಡರ್ ಎಂಜಿನ್ ಹೊಂದಿದ್ದು, 35ಬಿಎಚ್‌ಪಿ ಮತ್ತು 27ಎನ್ಎಂ ಟಾರ್ಕ್ ಉತ್ಪಾದನಾ ಸಾಮರ್ಥ್ಯ ಹೊಂದಿದೆ.

ಇದಲ್ಲದೇ ಸ್ಟ್ಯಾಂಡರ್ಡ್ 6-ಸ್ಪೀಡ್ ಗೇರ್‌ಬಾಕ್ಸ್ ಹೊಂದಿರುವ ಬೆನೆಲ್ಲಿ ಟೋರ್ನಾಡೋ 302ಆರ್ ಬೈಕ್, ಮುಂಭಾಗದ ಚಕ್ರದಲ್ಲಿ ಡ್ಯುಯಲ್ ಡಿಸ್ಕ್ ಬ್ರೇಕ್ ಹಾಗೂ ಹಿಂಭಾಗದ ಚಕ್ರದದಲ್ಲಿ ಸಿಂಗಲ್ ಡಿಸ್ಕ್ ಬ್ರೇಕ್ ಪಡೆದುಕೊಂಡಿದೆ.

ಸೂಪರ್ ಬೈಕ್ ಪ್ರಿಯರ ಕೆಟಿಎಂ ಆರ್‌ಸಿ 390, ಕವಾಸಕಿ ನಿಂಜಾ 300 ಮತ್ತು ಯಮಹಾ ಆರ್3 ಬೈಕ್ ಮಾದರಿಗಳಿಗೆ ಪರ್ಯಾಯವಾಗಿ ಬೆನೆಲ್ಲಿ ಟೋರ್ನಾಡೋ 302ಆರ್ ಸಿದ್ದಗೊಂಡಿದ್ದು, ಈಗಾಗಲೇ ಭಾರತದಲ್ಲಿ ಭಾರೀ ಪ್ರಮಾಣದ ಬುಕ್ಕಿಂಗ್ ಪಡೆದುಕೊಳ್ಳಲಾಗಿದೆ.

ಬೆಲೆಗಳು
ಸೂಪರ್ ಬೈಕ್ ಪ್ರಿಯರ ಬೇಡಿಕೆಗೆ ಅನುಗುಣವಾಗಿ ಸಿದ್ದಗೊಂಡಿರುವ ಬೆನೆಲ್ಲಿ ಟೋರ್ನಾಡೋ 302ಆರ್ ಬೈಕ್ ಬೆಲೆಯು ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ.3.2 ಲಕ್ಷದಿಂದ 3.5 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

ಹೀಗಾಗಿ ಭಾರೀ ನೀರಿಕ್ಷೆ ಹುಟ್ಟುಹಾಕಿರುವ ಬೆನೆಲ್ಲಿ ಟೋರ್ನಾಡೋ 302ಆರ್ ಸೂಪರ್ ಬೈಕ್ ಜುಲೈ 25ರಂದು ಗ್ರಾಹಕರ ಕೈಸೆರಲಿದ್ದು, ಬಿಡುಗಡೆಯ ದಿನದಂದು ಲಭ್ಯವಾಗುವ ಮತ್ತಷ್ಟು ಮಾಹಿತಿಗಳು ನಿಮ್ಮ ಡ್ರೈವ್ ಸ್ಪಾರ್ಕ್ ನೀಡಲಿದೆ.


Click it and Unblock the Notifications








