ದೀಪಾವಳಿ ಬಂಪರ್ ಆಫರ್- ಹೀರೋ ಬೈಕ್ ಖರೀದಿಸಿದ್ರೆ ಒಂದು ಮೇಕೆ ಫ್ರೀ

Written By:

ಹಬ್ಬದ ಸಂದರ್ಭದಲ್ಲಿ ಅಂಗಡಿ ಮಳಿಗೆಗಳಲ್ಲಿ, ಶಾಪಿಂಗ್ ಮಾಲ್‌ಗಳಲ್ಲಿ ಮಾರಾಟ ಪ್ರಮಾಣವನ್ನು ಹೆಚ್ಚಿಸಲು ಗ್ರಾಹಕರಿಗೆ ಸಕತ್ ಆಫರ್ ಗಳನ್ನು ನೀಡುವುದು ನಮಗೆಲ್ಲಾ ಗೊತ್ತೆ ಇದೆ. ಆದ್ರೆ ಚೆನ್ನೈ ಹೀರೋ ಶೋರೂ ಒಂದದಲ್ಲಿ ಹೊಸ ಬೈಕ್ ಬುಕ್ ಮಾಡಿದ್ರೆ ಉಚಿತವಾಗಿ ಮೇಕೆ ನೀಡುವ ಬಂಪರ್ ಆಫರ್ ಪ್ರಕಟಿಸಿರುವುದು ಭಾರೀ ಸುದ್ಧಿಯಾಗಿದೆ.

ದೀಪಾವಳಿ ಬಂಪರ್ ಆಫರ್- ಹಿರೋ ಬೈಕ್ ಖರೀದಿಸಿದ್ರೆ ಒಂದು ಮೇಕೆ ಫ್ರೀ

ಚೆನ್ನೈ ನಗರದಲ್ಲಿರುವ ಶಿವಗಂಗೆ ಹೀರೋ ಮೋಟೋಕಾರ್ಪ್ ಡೀಲರ್ ಒಬ್ಬರು ಇಂತದೊಂದು ವಿಶೇಷ ಆಫರ್ ನ್ನು ಗ್ರಾಹಕರಿಗೆ ನೀಡಿದ್ದು, ಆಫರ್ ಗೊತ್ತಾಗಿದ್ದೆ ತಡ ಒಂದೇ ದಿನ 100 ಕ್ಕೂ ಹೆಚ್ಚು ಮಂದಿ ಬೈಕ್ ಖರೀದಿಗೆ ಬುಕ್ಕಿಂಗ್ ಮಾಡಿದ್ದಾರೆ.

ದೀಪಾವಳಿ ಬಂಪರ್ ಆಫರ್- ಹಿರೋ ಬೈಕ್ ಖರೀದಿಸಿದ್ರೆ ಒಂದು ಮೇಕೆ ಫ್ರೀ

ಈ ಹಿನ್ನೆಲೆ ಬೈಕ್ ಖರೀದಿಗೆ ಗ್ರಾಹಕರು ಮುಗಿಬಿದ್ದಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಹೊಸ ಬೈಕ್‌ಗಾಗಿ ಬುಕ್ ಮಾಡುತ್ತಿದ್ದಂತೆ ಮೇಕೆ ಪೊರೈಸುವುದು ಹೇಗೆ ಎಂದು ತಿಳಿಯದೇ ಮೇಕೆ ನೀಡುವ ಆಫರ್‌ ಅನ್ನೇ ನಿಲ್ಲಿಸಿದ್ದಾರೆ.

ದೀಪಾವಳಿ ಬಂಪರ್ ಆಫರ್- ಹಿರೋ ಬೈಕ್ ಖರೀದಿಸಿದ್ರೆ ಒಂದು ಮೇಕೆ ಫ್ರೀ

ಈ ಬಗ್ಗೆ ಸ್ಥಳೀಯ ಮಾಧ್ಯಮಗಳ ಜೊತೆ ಮಾತನಾಡಿರುವ ಬೈಕ್ ಶೋರಂ ಮಾಲೀಕ, "ಗ್ರಾಹಕರನ್ನು ಸೆಳೆಯಲು ನಾವು ವಿಶೇಷ ಈ ಆಫರ್ ನೀಡಿದ್ದೆವು. ಆದ್ರೆ ಯಾವಾಗ ನಾವು ಆಫರ್ ಪ್ರಕಟಿಸಿದೆವೋ ಬುಕ್ಕಿಂಗ್ ಸಂಖ್ಯೆ ದಿಢೀರ್ ಹೆಚ್ಚಾಯಿತು. ಹೀಗಾಗಿ ನಾವು ಕೂಡಲೇ ಈ ಆಫರ್ ನಿಲ್ಲಿಸಿದ್ದೆವೆ" ಎಂದಿದ್ದಾರೆ.

Recommended Video - Watch Now!
TVS Jupiter Classic Launched In India | In Kannada - DriveSpark ಕನ್ನಡ
ದೀಪಾವಳಿ ಬಂಪರ್ ಆಫರ್- ಹಿರೋ ಬೈಕ್ ಖರೀದಿಸಿದ್ರೆ ಒಂದು ಮೇಕೆ ಫ್ರೀ

ಆದ್ರೆ ನಿಗದಿತ ಅವಧಿಯಲ್ಲಿ ಯಾರು ಹೊಸ ಬೈಕ್‌ಗೆ ಬುಕ್ ಮಾಡಿದ್ದಾರೋ ಅವರಿಗೆಲ್ಲಾ ಮೇಕೆ ಆಫರ್ ಖಚಿತ ಪಡಿಸಿರುವ ಬೈಕ್ ಶೋರಂ ಮಾಲೀಕ, ಸದ್ಯದಲ್ಲೇ ಹೊಸ ಬೈಕ್ ಜೊತೆ ಮೇಕೆಯನ್ನು ಒದಗಿಸುವುದಾಗಿ ಭರವಸೆ ನೀಡಿದ್ದಾರೆ.

ದೀಪಾವಳಿ ಬಂಪರ್ ಆಫರ್- ಹಿರೋ ಬೈಕ್ ಖರೀದಿಸಿದ್ರೆ ಒಂದು ಮೇಕೆ ಫ್ರೀ

ಇನ್ನು ಹೊಸ ಬೈಕ್ ಖರೀದಿ ಮೇಲೆ ಮೇಕೆ ಆಫರ್ ಬಗ್ಗೆ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದು, ಇದೆಲ್ಲಾ ಗಿಮಿಕ್ ಅಂತೆಲ್ಲಾ ಬೈಕ್ ಶೋರಂ ಮಾಲೀಕನ ವಿರುದ್ಧ ಕಿಡಿಕಾರಿದ್ದಾರೆ.

ದೀಪಾವಳಿ ಬಂಪರ್ ಆಫರ್- ಹಿರೋ ಬೈಕ್ ಖರೀದಿಸಿದ್ರೆ ಒಂದು ಮೇಕೆ ಫ್ರೀ

ಒಟ್ಟಿನಲ್ಲಿ ಬೈಕ್ ಮಾರಾಟ ಮಾಡಲು ಹೊಸ ಐಡಿಯಾ ಏನೋ ಚೆನ್ನಾಗಿದೆ. ಆದ್ರೆ ನಿಗದಿತ ಪ್ರಮಾಣದ ಗ್ರಾಹಕರು ಬಂದಾಕ್ಷಣ ಆಫರ್ ನಿಲ್ಲಿಸಿರೋ ಬೈಕ್ ಶೋರಂ ಮಾಲೀಕ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದ್ದು ಮಾತ್ರ ಸುಳ್ಳಲ್ಲ.

English summary
Read in Kannada: Diwali bumper offer – Buy a Hero MotoCorp bike, get a goat free.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark