ದ್ವಿಚಕ್ರ ವಿಭಾಗದಲ್ಲಿ ಬಜಾಜ್ ಸಂಸ್ಥೆಯನ್ನು ಹಿಂದಿಕ್ಕಿದ ಹೋಂಡಾ

ಬಜಾಜ್ ಆಟೊವನ್ನು ಹಿಂದಿಕ್ಕುವ ಮೂಲಕ ಹೋಂಡಾ ಹೊಸ ಮೈಲಿಗಳನ್ನು ತಲುಪುವ ಮೂಲಕ ದೇಶದ ಎರಡನೆಯ ಅತಿದೊಡ್ಡ ಮೋಟಾರ್‌ಸೈಕಲ್ ತಯಾರಕ ಕಂಪನಿಯಾಗಿ ಹೊರ ಹೊಮ್ಮಿದೆ.

By Girish

ಭಾರತೀಯ ದೈತ್ಯ ದ್ವಿಚಕ್ರ ತಯಾರಕ ಸಂಸ್ಥೆಯಾದ ಬಜಾಜ್ ಆಟೊವನ್ನು ಹಿಂದಿಕ್ಕುವ ಮೂಲಕ ಹೋಂಡಾ ಹೊಸ ಮೈಲಿಗಳನ್ನು ತಲುಪುವ ಮೂಲಕ ದೇಶದ ಎರಡನೆಯ ಅತಿದೊಡ್ಡ ಮೋಟಾರ್‌ಸೈಕಲ್ ತಯಾರಕ ಕಂಪನಿಯಾಗಿ ಹೊರ ಹೊಮ್ಮಿದೆ.

ದ್ವಿಚಕ್ರ ವಿಭಾಗದಲ್ಲಿ ಬಜಾಜ್ ಸಂಸ್ಥೆಯನ್ನು ಹಿಂದಿಕ್ಕಿದ ಹೋಂಡಾ

ಜಪಾನ್ ವಾಹನ ತಯಾರಕ ಸಂಸ್ಥೆಯಾದ ಹೋಂಡಾ 2018 ವರ್ಷದ ಮೊದಲಾರ್ಧದಲ್ಲಿ ಅಂದರೆ ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ ಆರು ತಿಂಗಳ ಅವಧಿಯಲ್ಲಿ 10.48 ಲಕ್ಷ ಮೋಟರ್ ಸೈಕಲ್‌ಗಳನ್ನು ಮಾರಾಟ ಮಾಡಿದ್ದು, ಇದೇ ಅವಧಿಯಲ್ಲಿ ಬಜಾಜ್ ಆಟೋ ಕೇವಲ 10.10 ಲಕ್ಷ ಮೋಟರ್ ಸೈಕಲ್‌ಗಳನ್ನು ಮಾತ್ರ ಮಾರಾಟ ಮಾಡಿದೆ.

ದ್ವಿಚಕ್ರ ವಿಭಾಗದಲ್ಲಿ ಬಜಾಜ್ ಸಂಸ್ಥೆಯನ್ನು ಹಿಂದಿಕ್ಕಿದ ಹೋಂಡಾ

ಹಲವು ದಶಕಗಳಿಂದ ಭಾರತದ ದ್ವಿಚಕ್ರ ವಾಹನ ವಿಭಾಗದಲ್ಲಿ ರಾಜನಂತೆ ಮೆರೆಯುತ್ತಿರುವ ಹೀರೋ ಮೋಟೋಕಾರ್ಪ್ ಈ 6 ತಿಂಗಳ ಅವಧಿಯಲ್ಲಿ 33.44 ಲಕ್ಷ ವಾಹನಗಳನ್ನು ಮಾರಾಟ ಮಾಡಿದ್ದು, ಹೋಂಡಾ ಸಂಸ್ಥೆಗಿಂತ ಮೂರು ಪಟ್ಟು ಹೆಚ್ಚು ಎನ್ನಬಹುದು.

ದ್ವಿಚಕ್ರ ವಿಭಾಗದಲ್ಲಿ ಬಜಾಜ್ ಸಂಸ್ಥೆಯನ್ನು ಹಿಂದಿಕ್ಕಿದ ಹೋಂಡಾ

ಹೀಗಿದ್ದರೂ ಸಹ ಸ್ವಯಂಚಾಲಿತ ಸ್ಕೂಟರ್ ಸೆಗ್ಮೆಂಟ್‌ನಲ್ಲಿ ಟಿವಿಎಸ್ ಮೋಟಾರ್ಸ್ ಸಂಸ್ಥೆಗೆ ಎರಡನೇ ಸ್ಥಾನವನ್ನು ಬಿಟ್ಟುಕೊಡುವ ಮೂಲಕ ಹೀರೊ ಸಂಸ್ಥೆ ತನ್ನೆ ನೆಲ ಕಂಡುಕೊಳ್ಳಲು ತಡವರಿಸುತ್ತಿದ್ದು ಎನ್ನಬಹುದು.

Recommended Video

[Kannada] 2017 Honda CBR650F Launched In India - DriveSpark
ದ್ವಿಚಕ್ರ ವಿಭಾಗದಲ್ಲಿ ಬಜಾಜ್ ಸಂಸ್ಥೆಯನ್ನು ಹಿಂದಿಕ್ಕಿದ ಹೋಂಡಾ

ಕಳೆದ ವರ್ಷದಿಂದ ಬಜಾಜ್ ಆಟೊ ಮಾರಾಟದಲ್ಲಿ ದೊಡ್ಡ ಪ್ರಮಾಣದ ಕುಸಿತವನ್ನು ಕಂಡಿದ್ದು, ಹೋಂಡಾ ಸದ್ಯ ಸ್ವಯಂಚಾಲಿತ ಸ್ಕೂಟರ್ ವಿಭಾಗದಲ್ಲಿ ಮಾರುಕಟ್ಟೆಯ ನಾಯಕನಾಗಿ ಮೆರೆಯುತ್ತಿದೆ. 2020ರ ಹೊತ್ತಿಗೆ ಭಾರತದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಹೊರ ಹೊಮ್ಮಲಿದೆ.

ದ್ವಿಚಕ್ರ ವಿಭಾಗದಲ್ಲಿ ಬಜಾಜ್ ಸಂಸ್ಥೆಯನ್ನು ಹಿಂದಿಕ್ಕಿದ ಹೋಂಡಾ

ಕಳೆದ ವರ್ಷ ಇದೇ ಅವಧಿಯಲ್ಲಿ ಬಜಾಜ್ 11.28 ಲಕ್ಷ ಮೋಟರ್ ಸೈಕಲ್‌ಗಳನ್ನು ಮಾರಾಟ ಮಾಡಿದ್ದು, ಹೋಂಡಾ 8.75 ಲಕ್ಷ ಬೈಕ್‌ಗಳನ್ನು ಮಾರಾಟ ಮಾಡಿದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಹೋಂಡಾ ಕಂಪನಿಯು ಹೆಚ್ಚಿನ ಮಾರುಕಟ್ಟೆ ಪಾಲನ್ನು ಗಳಿಸಿದ್ದು, ಬಜಾಜ್ ತನ್ನ ಮಾರುಕಟ್ಟೆ ಪಾಲನ್ನು ಕಳೆದುಕೊಂಡಿದೆ.

ದ್ವಿಚಕ್ರ ವಿಭಾಗದಲ್ಲಿ ಬಜಾಜ್ ಸಂಸ್ಥೆಯನ್ನು ಹಿಂದಿಕ್ಕಿದ ಹೋಂಡಾ

ಇದಲ್ಲದೆ, ಬೃಹತ್ ಮಾರಾಟದ ಬೆಳವಣಿಗೆಯನ್ನು ನಿರೀಕ್ಷಿಸಿದ್ದರೂ ಸಹ ಬಜಾಜ್ ಸಂಸ್ಥೆಯು ಸ್ವಯಂಚಾಲಿತ ಸ್ಕೂಟರ್‌ಗಳನ್ನು ಮಾರಾಟ ಮಾಡುವಲ್ಲಿ ವಿಫಲವಾಗಿದೆ ಎನ್ನಬಹುದು. ಬಜಾಜ್ ಸಂಸ್ಥೆಯು ಪ್ರೀಮಿಯಂ ಬೈಕ್ ವಿಭಾಗದ ಮೇಲೆ ಹೆಚ್ಚಾಗಿ ಅವಲಂಬಿತವಾಗಿದ್ದು, ಈ ವಿಭಾಗದಲ್ಲಿ ಈ ಸಂಸ್ಥೆಯ ಲಾಭಾಂಶ ಹೆಚ್ಚಾಗಿದೆ ಹಾಗು ಬಜಾಜ್ ಅನೇಕ ಮಾದರಿಗಳನ್ನು ಹೊಂದಿದೆ.

ದ್ವಿಚಕ್ರ ವಿಭಾಗದಲ್ಲಿ ಬಜಾಜ್ ಸಂಸ್ಥೆಯನ್ನು ಹಿಂದಿಕ್ಕಿದ ಹೋಂಡಾ

ಸಾಮೂಹಿಕ ಮಾರುಕಟ್ಟೆಗೆ ಹೆಚ್ಚು ಉತ್ಪನ್ನಗಳನ್ನು ಉತ್ಪಾದಿಸುವ ಕಡೆ ಹೋಂಡಾ ಕೇಂದ್ರೀಕರಿಸಿದ್ದು, ಅದೇ ರೀತಿ ಬಜಾಜ್ ತನ್ನ ಪ್ರೀಮಿಯಂ ಮೋಟಾರ್ ಸೈಕಲ್ ಉತ್ಪಾದನೆಯ ಕಡೆ ಕೇಂದ್ರೀಕರಿಸಲಿದೆ. ಮುಂಬರುವ ದಿನಗಳಲ್ಲಿ ಬಜಾಜ್ ಮತ್ತು ಟ್ರಯಂಪ್ ಸಹಭಾಗಿತ್ವದಲ್ಲಿ ಹೊಸ ದ್ವಿಚಕ್ರಗಳನ್ನು 2020ರಲ್ಲಿ ಬಿಡುಗಡೆಗೊಳಿಸಲು ಮುಂದಾಗಿದ್ದು, ಮಾರುಕಟ್ಟೆ ಸ್ಥಿತಿಯು ಬದಲಾಗುವ ಸಂಭವವಿದೆ.

More from DriveSpark

Article Published On: Friday, October 27, 2017, 20:18 [IST]
English summary
Honda is now India’s second largest motorcycle maker, and the Japanese company just beat Indian giant Bajaj Auto to achieve this. Honda sold 10.48 lakh motorcycles in the first half of business year 2018 (FY2018) – the six month period from April to September. Bajaj Auto could only manage sales of 10.10 lakh motorcycles in the same period.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+