ಕೇವಲ 4 ತಿಂಗಳ ಅವಧಿಯಲ್ಲಿ 10,000 ಕ್ಲಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡಿದ ಹೋಂಡಾ

ಹೋಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ(ಎಚ್ಎಂಎಸ್ಐ)ಸಂಸ್ಥೆಯು ತನ್ನ ಕ್ಲಿಕ್ ಸ್ಕೂಟರ್ ಉಡಾವಣೆಯೊಂದಿಗೆ ಯುಟಿಲಿಟಿ ಸ್ಕೂಟರ್ ವಿಭಾಗದಲ್ಲಿ ತನ್ನ ಅಸ್ತಿತ್ವವನ್ನು ಬಲಪಡಿಸಿಕೊಂಡಿದೆ ಎನ್ನಬಹುದು.

By Girish

ಈಗಾಗಲೇ ಅನೇಕ ಬ್ರಾಂಡ್‌ಗಳು ಈ ವಿಭಾಗದಲ್ಲಿ ತಮ್ಮ ಉತ್ಪನ್ನಗಳನ್ನು ಬಿಡುಗಡೆಗೊಳಿಸಿವೆ. ಆದಾಗ್ಯೂ ಸಹ ಹೋಂಡಾ ಕ್ಲಿಕ್ ದ್ವಿಚಕ್ರ ವಾಹನವು ತನ್ನ ವಿನ್ಯಾಸ ಮತ್ತು ಬಲಿಷ್ಠ ನಿರ್ಮಾಣದ ಸಹಾಯದಿಂದ ಯುಟಿಲಿಟಿ ಸ್ಕೂಟರ್ ಸೆಕ್ಷನ್‌ನಲ್ಲಿ ಪ್ರಸಿದ್ದಿ ಪಡೆದುಕೊಂಡಿದೆ.

ಕೇವಲ 4 ತಿಂಗಳ ಅವಧಿಯಲ್ಲಿ 10,000 ಕ್ಲಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡಿದ ಹೋಂಡಾ

ಹೋಂಡಾ ಸಂಸ್ಥೆಯು ಬಿಡುಗಡೆಯಾದ ಕೇವಲ ನಾಲ್ಕು ತಿಂಗಳೊಳಗೆ 10,000 ಕ್ಕಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡಿದೆ. ಹಾಗಾದ್ರೆ ಯಾವೆಲ್ಲಾ ಅಂಶಗಳು ಈ ಸ್ಕೂಟರ್ ಅನ್ನು ಯಶಸ್ವಿಗೊಳಿಸಿವೆ ಎಂಬುದರ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ, ಓದಿ.

ಕೇವಲ 4 ತಿಂಗಳ ಅವಧಿಯಲ್ಲಿ 10,000 ಕ್ಲಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡಿದ ಹೋಂಡಾ

ಹೋಂಡಾ ಕ್ಲಿಕ್ ಭಾರತೀಯ ಮಾರುಕಟ್ಟೆಗೆ ಅತ್ಯುತ್ತಮವಾದ ಸ್ಕೂಟರ್ ಆಗಿದ್ದು, ಪ್ರಾಯೋಗಿಕತೆಯನ್ನು ಹೆಚ್ಚು ಪಡೆದುಕೊಂಡಿದೆ. ಈ ಸ್ಕೂಟರ್ ವಿಶಾಲ ಅಡಿಬರಹವನ್ನು ಹೊಂದಿದೆ. ಹೆಚ್ಚು ಆರಾಮದಾಯಕವಾದ ಸವಾರಿಗಾಗಿ ಮತ್ತು ಲಗೇಜುಗಳನ್ನು ಸಾಗಿಸಲು ಹೇಳಿ ಮಾಡಿಸಿದ ವಾಹನ ಎನ್ನಬಹುದು.

ಕೇವಲ 4 ತಿಂಗಳ ಅವಧಿಯಲ್ಲಿ 10,000 ಕ್ಲಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡಿದ ಹೋಂಡಾ

ಹೋಂಡಾ ಕ್ಲಿಕ್ ವಾಹನವು, ಉದ್ದ ಮತ್ತು ಅಗಲವಾದ ಆಸನಗಳನ್ನು ಹೊಂದಿದೆ. ಈ ಕಾರಣದಿಂದಾಗಿ ನೀವು ಆರಾಮವಾಗಿ ಕುಳಿತು ಸಂಚರಿಸಬಹುದಾಗಿದೆ. ಸ್ಕೂಟರ್‌ನಲ್ಲಿ ಆಯ್ಕೆಯ ಮೊಬೈಲ್ ಚಾರ್ಜಿಂಗ್ ಸಾಕೆಟ್ ಇರಿಸಲಾಗಿದೆ ಮತ್ತು 14-ಲೀಟರ್ ಸೀಟ್ ಶೇಖರಣೆ ವ್ಯವಸ್ಥೆ ಮಾಡಲಾಗಿದೆ.

ಕೇವಲ 4 ತಿಂಗಳ ಅವಧಿಯಲ್ಲಿ 10,000 ಕ್ಲಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡಿದ ಹೋಂಡಾ

ಹೋಂಡಾ ಕ್ಲಿಕ್ ಬ್ಲಾಕ್ ಮಾದರಿಯ ಟ್ಯೂಬ್‌ಲೆಸ್ ಟೈರ್‌ಗಳೊಂದಿಗೆ ಬಿಡುಗಡೆಗೊಂಡಿದೆ. ಈ ಟೈರು, ಉತ್ತಮ ಹಿಡಿತವನ್ನು ನೀಡುತ್ತದೆ. ವಿಶೇಷವಾಗಿ ನೀವು ಮರಳು ಹೊಂದಿರುವ ರಸ್ತೆಯ ಮೇಲೆ ಸವಾರಿ ಮಾಡಲು ಸಹಾಯ ಮಾಡುತ್ತದೆ.

ಕೇವಲ 4 ತಿಂಗಳ ಅವಧಿಯಲ್ಲಿ 10,000 ಕ್ಲಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡಿದ ಹೋಂಡಾ

ಪ್ರಖ್ಯಾತ ಆಕ್ಟಿವಾ 4ಜಿ ಮತ್ತು ಹೊಂಡಾ ಡಿಯೊ ಸ್ಕೂಟರ್‌ಗಳಲ್ಲಿ ಕಾರ್ಯ ನಿರ್ವಹಿಸುವ ಎಂಜಿನ್ ಈ ವಾಹನದಲ್ಲಿಯೂ ಅಳವಡಿಸಲಾಗಿದ್ದು, ಶಕ್ತಿ ಉತ್ಪಾದನೆಯ ವಿಚಾರದಲ್ಲಿ ಕಂಪನಿಯು ಯಾವುದೇ ರೀತಿಯ ರಾಜಿ ಮಾಡಿಕೊಂಡಿಲ್ಲ ಎನ್ನಬಹುದು.

ಕೇವಲ 4 ತಿಂಗಳ ಅವಧಿಯಲ್ಲಿ 10,000 ಕ್ಲಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡಿದ ಹೋಂಡಾ

ಈ ಸ್ಕೂಟರ್ 109 ಸಿಸಿ ಸಿಂಗಲ್-ಸಿಲಿಂಡರ್ ಎಂಜಿನ್ ಆಯ್ಕೆಯನ್ನು ಪಡೆದುಕೊಂಡಿದ್ದು, 8 ಬಿಎಚ್‌ಪಿ ಮತ್ತು 8.94 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ ಮತ್ತು ನಾಲ್ಕು-ಸ್ಟ್ರೋಕ್ ಎಂಜಿನ್ ಸಿವಿಟಿ ಸ್ವಯಂಚಾಲಿತ ಗೇರ್ ಬಾಕ್ಸ್ ಸೌಕರ್ಯವನ್ನು ಹೊಂದಿದೆ.

ಕೇವಲ 4 ತಿಂಗಳ ಅವಧಿಯಲ್ಲಿ 10,000 ಕ್ಲಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡಿದ ಹೋಂಡಾ

ಹೋಂಡಾ ಕ್ಲಿಕ್ ಸ್ಟ್ಯಾಂಡರ್ಡ್ ಮತ್ತು ಗ್ರಾಫಿಕ್ಸ್ ಎಂಬ ಎರಡು ರೂಪಾಂತರಗಳಲ್ಲಿ ಅನಾವರಣಗೊಂಡಿದೆ ಹಾಗು ಹೋಂಡಾ ಕಂಪನಿಯ ಕಡಿಮೆ ವೆಚ್ಚದ ಸ್ಕೂಟರ್ ಎಂಬ ಖ್ಯಾತಿಯನ್ನು ಪಡೆದುಕೊಂಡಿರುವ ಈ ದ್ವಿಚಕ್ರ ವಾಹನವು ರೂ.42,880 ಎಕ್ಸ್‌ ಶೋರೂಂ(ದೆಹಲಿ) ಬೆಲೆ ಪಡೆದಿದೆ.

Most Read Articles

Kannada
Read more on honda ಹೋಂಡಾ
English summary
HMSI said that they sold more than 10,000 Cliq scooters within four months of its launch.
Story first published: Tuesday, November 14, 2017, 16:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X