ನ್ಯಾಷನಲ್ ರೇಸ್ ಚಾಂಪಿಯನ್‌ಶಿಪ್‌ನಲ್ಲಿ ಇತಿಹಾಸ ಸೃಷ್ಟಿಸಿದ ಹೋಂಡಾ

ಭಾರತ ದೇಶದ ಪ್ರಮುಖ ವಾಹನ ತಯಾರಕ ಸಂಸ್ಥೆಯಾದ ಹೋಂಡಾ, ನ್ಯಾಷನಲ್ ಚಾಂಪಿಯನ್‌ಶಿಪ್‌ನ ಎರಡು ಸುತ್ತಿನಲ್ಲಿ ಅತ್ಯಧಿಕ ಪೊಡಿಯಮ್‌ಗಳೊಂದಿಗೆ ಇತಿಹಾಸ ಸೃಷ್ಟಿ ಮಾಡಿದೆ.

By Girish

ಭಾರತ ದೇಶದ ಪ್ರಮುಖ ವಾಹನ ತಯಾರಕ ಸಂಸ್ಥೆಯಾದ ಹೋಂಡಾ, ನ್ಯಾಷನಲ್ ಚಾಂಪಿಯನ್‌ಶಿಪ್‌ನ ಎರಡು ಸುತ್ತಿನಲ್ಲಿ ಅತ್ಯಧಿಕ ಪೊಡಿಯಮ್‌ಗಳೊಂದಿಗೆ ಇತಿಹಾಸ ಸೃಷ್ಟಿ ಮಾಡಿದೆ.

ನ್ಯಾಷನಲ್ ರೇಸ್ ಚಾಂಪಿಯನ್‌ಶಿಪ್‌ನಲ್ಲಿ ಇತಿಹಾಸ ಸೃಷ್ಟಿಸಿದ ಹೋಂಡಾ

ಚೆನ್ನೈನ ಮದ್ರಾಸ್ ಮೋಟಾರ್ ರೇಸಿಂಗ್ ಟ್ರ್ಯಾಕ್‌ನಲ್ಲಿ ನಡೆದ 'ಎಂಎಂಎಸ್‌ಸಿ ಎಫ್ಎಂಎಸ್‌ಸಿಐ ರಾಷ್ಟ್ರೀಯ ಮೋಟಾರ್ ಸೈಕಲ್ ರೇಸಿಂಗ್ ಚಾಂಪಿಯನ್‌ಶಿಪ್‌'ನ ಎರಡನೇ ಸುತ್ತಿನಲ್ಲಿ ಹೋಂಡಾ ಸಂಸ್ಥೆಯ ಸವಾರರು ಅತ್ಯದ್ಭುತ ಪ್ರದರ್ಶನವನ್ನು ನೀಡಿದರು.

ನ್ಯಾಷನಲ್ ರೇಸ್ ಚಾಂಪಿಯನ್‌ಶಿಪ್‌ನಲ್ಲಿ ಇತಿಹಾಸ ಸೃಷ್ಟಿಸಿದ ಹೋಂಡಾ

ಸೂಪರ್ ಸ್ಪೋರ್ಟ್ಸ್ 165ಸಿಸಿ ವಿಭಾಗದಲ್ಲಿ, ಹೋಂಡಾ ಟೆನ್ ತಂಡದ ರಾಜೀವ್ ಸೇತು ಅವರು ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ವಿಜಯಶಾಲಿಗಳಾಗಿದ್ದಾರೆ.

ನ್ಯಾಷನಲ್ ರೇಸ್ ಚಾಂಪಿಯನ್‌ಶಿಪ್‌ನಲ್ಲಿ ಇತಿಹಾಸ ಸೃಷ್ಟಿಸಿದ ಹೋಂಡಾ

ಸೇತು ತಂಡದ ಸಹ ಆಟಗಾರ ಮಠಾನಾ ಕುಮಾರ್ ಎಸ್ ಎರಡನೇ ಸ್ಥಾನ ಗಳಿಸಿ, ಹೋಂಡಾ ಟೆನ್ 10 ರೇಸಿಂಗ್ ತಂಡಕ್ಕೆ 1-2 ಮುಕ್ತಾಯವನ್ನು ನೀಡಿದರು.

ನ್ಯಾಷನಲ್ ರೇಸ್ ಚಾಂಪಿಯನ್‌ಶಿಪ್‌ನಲ್ಲಿ ಇತಿಹಾಸ ಸೃಷ್ಟಿಸಿದ ಹೋಂಡಾ

ಪ್ರೊ ಸ್ಟಾಕ್ 165ಸಿಸಿ ವಿಭಾಗದಲ್ಲಿ, ಹೋಂಡಾ ಟೆನ್ 10 ರೇಸಿಂಗ್ ರೈಡರ್ ಆದಂತಹ ಮಿಥುನ್ ಕುಮಾರ್ ಪಿ.ಕೆ ಯವರು ಅಂತಿಮ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದು, ತಂಡವು ಎರಡನೇ ಸುತ್ತಿನಲ್ಲಿ ಒಟ್ಟು ಎಂಟು ಅಂಕಗಳನ್ನು ಪಡೆದುಕೊಂಡು ಮುಂಚೂಣಿಯನ್ನು ಕಾಯ್ದುಕೊಂಡಿದ್ದಾರೆ.

ನ್ಯಾಷನಲ್ ರೇಸ್ ಚಾಂಪಿಯನ್‌ಶಿಪ್‌ನಲ್ಲಿ ಇತಿಹಾಸ ಸೃಷ್ಟಿಸಿದ ಹೋಂಡಾ

ಒನ್ ಮೇಕ್ ಚಾಂಪಿಯನ್‌ಶಿಪ್ಪಿನ 'ಸಿಬಿಆರ್ 250 ಆರ್ ಓಪನ್' ಮತ್ತು 'ಸಿಬಿಆರ್ 150 ನೊವೀಸ್' ಎಂಬ ಎರಡು ವಿಭಾಗದಲ್ಲಿ ಸಹ ಹೋಂಡಾ ಸ್ಪರ್ಧಿಸಿದೆ.

ನ್ಯಾಷನಲ್ ರೇಸ್ ಚಾಂಪಿಯನ್‌ಶಿಪ್‌ನಲ್ಲಿ ಇತಿಹಾಸ ಸೃಷ್ಟಿಸಿದ ಹೋಂಡಾ

ಸಿಬಿಆರ್ 250 ಆರ್ ಓಪನ್ ವಿಭಾಗದಲ್ಲಿ ಹರಿ ಕೃಷ್ಣನ್ ಶ್ರೇಷ್ಠ ಪ್ರದರ್ಶನದೊಂದಿಗೆ ವಿಜಯಶಾಲಿಯಾಗಿದ್ದು, ಬಿ ಅರವಿಂದ್ ಮತ್ತು ರಾಜೀವ್ ಅನುಕ್ರಮವಾಗಿ ಎರಡನೆಯ ಮತ್ತು ಮೂರನೇ ಸ್ಥಾನ ಗಳಿಸಿದ್ದಾರೆ.

ನ್ಯಾಷನಲ್ ರೇಸ್ ಚಾಂಪಿಯನ್‌ಶಿಪ್‌ನಲ್ಲಿ ಇತಿಹಾಸ ಸೃಷ್ಟಿಸಿದ ಹೋಂಡಾ

ದ್ವಿತೀಯ ರೇಸ್‌ನಲ್ಲಿ ರಾಜೀವ್ ಸೇತು ವಿಜಯಶಾಲಿಯಾಗಿದ್ದು, ರೇಸ್ ರೋಮಾಂಚಕವಾಗಿ ಮುಕ್ತಾಯವಾಯಿತು ಎನ್ನಬಹುದು. ಪಟ್ಟಿಯಲ್ಲಿ ಅಂತಿಮ ಎರಡು ಸ್ಥಾನಗಳನ್ನು ಅನೀಶ್ ಶೆಟ್ಟಿ ಮತ್ತು ಬಿ ಅರವಿಂದ್ ತಮ್ಮದಾಗಿಸಿಕೊಂಡರು.

ನ್ಯಾಷನಲ್ ರೇಸ್ ಚಾಂಪಿಯನ್‌ಶಿಪ್‌ನಲ್ಲಿ ಇತಿಹಾಸ ಸೃಷ್ಟಿಸಿದ ಹೋಂಡಾ

ಇನ್ನು ಸಿಬಿಆರ್ 150 ನೊವೀಸ್ ವಿಭಾಗದ ಬಗ್ಗೆ ಹೇಳುವುದಾದರೆ, ದ್ವಿತೀಯ ರೇಸಿನಲ್ಲಿ ಸತ್ಯ ನಾರಾಯಣ್ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಎರಡನೆಯ ಮತ್ತು ಮೂರನೇ ಸ್ಥಾನಕ್ಕೆ ಹೆಚ್ಚು ಸ್ಪರ್ಧೆ ಏರ್ಪಟ್ಟಿತ್ತಾದರೂ... ಅಂತಿಮವಾಗಿ, ಅಮಲಾ ಗೆರಾಲ್ಡ್ ಎರಡನೇ ಸ್ಥಾನ, ವೈಶಾಕ್ ಷೋಬನ್ ಮೂರನೇ ಸ್ಥಾನ ಪಡೆದುಕೊಂಡರು.

Most Read Articles

Kannada
Read more on ಹೋಂಡಾ
English summary
Read in Kannada about Honda scores highest ever podiums in the second round of MMSC FMSCI National Motorcycle Racing Championship held at Chennai.
Story first published: Monday, July 10, 2017, 15:06 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X